ಶೇ. 90 ರಷ್ಟು ವಾಟರ್ ಬಾಟಲ್ ಬ್ರಾಂಡ್ ಗಳು ಜಾಗತಿಕವಾಗಿ ಕಲುಶಿತ

ಭಾರತವೂ ಸೇರಿದಂತೆ ಬ್ರಾಂಡೆಡ್ ವಾಟರ್ ಬಾಟಲ್ ಗಳು ಜಾಗತಿಕವಾಗಿ ಶೇ.90 ರಷ್ಟು ಕಲುಶಿತಗೊಂಡಿವೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.
ಶೇ. 90 ರಷ್ಟು ವಾಟರ್ ಬಾಟಲ್ ಬ್ರಾಂಡ್ ಗಳು ಜಾಗತಿಕವಾಗಿ ಕಲುಶಿತ
ಶೇ. 90 ರಷ್ಟು ವಾಟರ್ ಬಾಟಲ್ ಬ್ರಾಂಡ್ ಗಳು ಜಾಗತಿಕವಾಗಿ ಕಲುಶಿತ
ವಾಷಿಂಗ್ ಟನ್: ಭಾರತವೂ ಸೇರಿದಂತೆ ಬ್ರಾಂಡೆಡ್ ವಾಟರ್ ಬಾಟಲ್ ಗಳು ಜಾಗತಿಕವಾಗಿ ಶೇ.90 ರಷ್ಟು ಕಲುಶಿತಗೊಂಡಿವೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ. 
ಓರ್ಬ್ ಮೀಡಿಯಾ ವರದಿಯ ಪ್ರಕಾರ ಪಾಲಿಪ್ರೊಪಿಲೀನ್, ನೈಲಾನ್ ಮತ್ತು ಪಾಲಿಥೈಲಿನ್ ಟೆರೆಫ್ತಾಲೇಟ್ ನಿಂದ ಕೂಡಿದ ಬ್ರಾಂಡೆಡ್ ನೀರಿನ ಬಾಟಲ್ ಗಳು ಶೇ.90 ರಷ್ಟು ಕಲುಶಿತಗೊಂಡಿದ್ದು ಮನುಕುಲಕ್ಕೇ ಹಾನಿಕಾರಕವಾಗಿದೆ.  ಅಮೆರಿಕ ಮೂಲದ ಎನ್ ಜಿಒ ನಡೆಸಿರುವ ಅಧ್ಯಯನ ವರದಿ ಪ್ರಕಾರ ದಿನಕ್ಕೆ ಒಂದು ಲೀಟರ್ ಬ್ರಾಂಡೆಡ್ ಬಾಟಲ್ ನೀರನ್ನು ಸೇವಿಸುವ ವ್ಯಕ್ತಿ ವರ್ಷಕ್ಕೆ ಸಾವಿರಾರು ಮೈಕ್ರೋಪ್ಲಾಸ್ಟಿಕ್ ಅಂಶಗಳನ್ನು ಸೇವಿಸುತ್ತಾನೆ. 
ಶೇ.93 ರಷ್ಟು ಮಾದರಿಗಳಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿದ್ದು, ಒಂದು ಬಾಟಲ್ ನಲ್ಲಿ ಪ್ಲಾಸ್ಟಿಕ್ ಅಂಶದ ಸಾಂದ್ರತೆ ಶೂನ್ಯದಿಂದ 10,000 ದವರೆಗೂ ಕಂಡುಬಂದಿದೆ.  ಪ್ರತಿ ಲೀಟರ್ ನಲ್ಲಿ ಸರಾಸರಿ 10.4 ಪ್ಲಾಸ್ಟಿಕ್ ಪಾರ್ಟಿಕಲ್ (ಮೈಕ್ರೋ ಪ್ಲಾಸ್ಟಿಕ್) ಗಳು ಕಂಡುಬಂದಿದ್ದು ಒಟ್ಟಾರೆ ಶೇ.90 ರಷ್ಟು ಕಲುಶಿತಗೊಂಡಿದೆ ಎಂದು ವರದಿ ಎಚ್ಚರಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com