ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳನ್ನು ಅನುಸರಿಸಿ

ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವವಪು, ಕಾಲೇಜಿಗೆ ಹೋಗುವ ಯುವತಿಯರಿಂದ ಹಿಡಿದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವವಪು, ಕಾಲೇಜಿಗೆ ಹೋಗುವ ಯುವತಿಯರಿಂದ ಹಿಡಿದು ಗೃಹಿಣಿಯರವರೆಗೆ ಹಚ್ಚೆ(ಟ್ಯಾಟು) ಹಾಕಿಸಿಕೊಳ್ಳುವುದೆಂದರೆ ಫ್ಯಾಶನ್ ವಿಷಯ. ಇಂತಹ ಹಚ್ಚೆ ಬಗ್ಗೆ ಇಲ್ಲಿದೆ ಕೆಲವು ಮಾಹಿತಿಗಳು:

ಟ್ಯಾಟುವನ್ನು ಹೇಗೆ ಯಾವಾಗ ಹಾಕಿಸಿಕೊಳ್ಳಬೇಕು ಎಂದು ಸೆಲೆಬ್ರಿಟಿ ಟ್ಯಾಟೂ ಕಲಾವಿದೆ ಸನ್ನಿ ಭಾನುಶಾಲಿ ಮತ್ತು ಕಾಸ್ಮೆಟಿಕ್ ಸರ್ಜನ್ ಸಮೀರ್ ಕಾರ್ಖನಿಸ್ ಕೆಲವೊಂದು ಟಿಪ್ಸ್ ನೀಡಿದ್ದಾರೆ.

ಟ್ಯಾಟೂ ಎಂದರೆ ಅದು ಒಮ್ಮೆ ಹಾಕಿಸಿದರೆ ಜೀವನಪೂರ್ತಿ ನಮ್ಮ ದೇಹದಲ್ಲಿರುವ ಒಂದು ವಿನ್ಯಾಸ. ಟ್ಯಾಟು ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಅದರ ಬಣ್ಣ, ವಿನ್ಯಾಸವನ್ನು ನೋಡಿಕೊಳ್ಳಬೇಕು. ಯಾಕೆಂದರೆ ಅದು ಬೇಡವೆಂದರೆ ಅದನ್ನು ತೆಗೆಸುವುದು ದುಬಾರಿ ಮತ್ತು ಕಷ್ಟದ ವಿಚಾರ.

ಯುವಕ, ಯುವತಿಯರಾಗಿದ್ದಾಗ ಹಾಕಿಸಿಕೊಳ್ಳುವ ಟ್ಯಾಟು ಇನ್ನು 10,20. 30 ವರ್ಷಗಳ ಕಳೆದ ನಂತರ ಅದೇ ರೀತಿ ನಿಮ್ಮ ದೇಹಕ್ಕೆ ಕಾಣುವುದಿಲ್ಲ. ದೇಹದ ಚರ್ಮ ಸುಕ್ಕುಗಟ್ಟುತ್ತಿದ್ದಂತೆ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ.

ಗೋವಾ ಬೀಚ್ ನಲ್ಲಿ ಟ್ಯೂಟೂ ಹಾಕಿಸಿಕೊಳ್ಳುವುದು ಬೇರೆ ವೃತ್ತಿಪರರ ಬಳಿ ಟ್ಯಾಟೂ ಹಾಕಿಸಿಕೊಳ್ಳುವುದು ಅಗ್ಗವಾಗಬಹುದು. ಆದರೆ ಇದು ಉತ್ತಮವಲ್ಲ. ಗೋವಾ ಬೀಚ್ ನಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಅಷ್ಟು ಸ್ವಚ್ಛವಾಗಿರಲಿಕ್ಕಿಲ್ಲ.

ಟ್ಯಾಟೂಗೆ ಬಳಸುವ ಶಾಯಿ ಸ್ವಚ್ಛವಾಗಿದ್ದು ಶುದ್ಧವಾಗಿರಬೇಕು. ಅದರಲ್ಲಿ ಸೀಸ ಮತ್ತು ನಿಕಿಲ್ ನಂತಹ ರಾಸಾಯನಿಕಗಳು ಸೇರಿರಬಾರದು.

ಟ್ಯಾಟೂ ಹಾಕಿಸಿಕೊಳ್ಳುವುದೆಂದರೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವುದೆಂದರ್ಥ. ರೋಗ ಬಂದಾಗ ವೈದ್ಯರ ಬಳಿ ಹೋಗಿ ಔಷಧ ತೆಗೆದುಕೊಂಡು ವೈದ್ಯರ ಮಾತನ್ನು ಅನುಸರಿಸುವಂತೆ ಟ್ಯಾಟೂ ಕಲಾವಿದರ ಸಲಹೆ, ಸೂಚನೆಗಳನ್ನು ಕೂಡ ಪಾಲಿಸಬೇಕು. ಅವರ ಸೂಚನೆ, ಸಲಹೆಗಳನ್ನು ಪಾಲಿಸದಿದ್ದರೆ ಅಡ್ಡ ಪರಿಣಾಮ ಬೀರಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com