2045ರ ಹೊತ್ತಿಗೆ ವಿಶ್ವಾದ್ಯಂತದ ಕಾಲು ಭಾಗದ ಜನರಲ್ಲಿ ಬೊಜ್ಜು: ಅಧ್ಯಯನ

ಈಗಿರುವ ಜೀವನ ಶೈಲಿಯಿಂದಾಗಿ 2045 ರ ವೇಳೆಗೆ ಜಗತ್ತಿನ ಕಾಲು ಭಾಗದ ಜನರಿಗೆ ಬೊಜ್ಜು ಬರಲಿದೆ ಎಂದು ಸಂಶೋಧನೆಯೊಂದು ಹೇಳಿದೆ.

ಡೆನ್ಮಾರ್ಕ್ ಮೂಲದ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ 2045 ರ ವೇಳೆಗೆ ಜಗತ್ತಿನಾದ್ಯಂತ ಬೊಜ್ಜಿನ ಸಮಸ್ಯೆ 2017 ಕ್ಕಿಂತ ಶೇ.14 ರಷ್ಟು ಏರಿಕೆಯಾಗಲಿದೆ. ಸ್ಥೂಲಕಾಯಕ್ಕೆ ಸಂಬಂಧಿಸಿದಂತೆ 2018 ರ ಯೂರೋಪಿಯನ್ ಕಾಂಗ್ರೆಸ್ ನಲ್ಲಿ ಮಂಡನೆಯಾಗಿರುವ ಅಧ್ಯಯನ ವರದಿ 2045 ರ ವೇಳೆಗೆ ಸ್ಥೂಲಕಾಯವಷ್ಟೇ ಅಲ್ಲದೇ ಮಧುಮೇಹವೂ ಶೇ.9. ರಿಂದ 11.7 ಕ್ಕೆ ಏರಿಕೆಯಾಗಲಿದ್ದು ವಿಶ್ವದಲ್ಲಿ 8 ಜನರ ಪೈಕಿ ಒಬ್ಬರಿಗೆ ಟೈಪ್-2 ಮಧುಮೇಹ ಕಾಡಲಿದೆ ಎಂದು ಎಚ್ಚರಿಸಿದೆ. 
ಸ್ಥೂಲಕಾಯತೆ ಹಾಗೂ ಮಧುಮೇಹಕ್ಕೆ ಸಂಬಂಧಿಸಿದಂತೆ ವಿಶ್ವ ಮುಂದಿನ ದಿನಗಳಲ್ಲಿ ಎದುರಿಸಬಹುದಾದ ದಿಗ್ಭ್ರಮೆಗೊಳಿಸುವ ಸವಾಲಾಗಿದೆ ಎಂದು ಡೆನ್ಮಾರ್ಕ್ ನ ನೊವೊ ನಾರ್ಡಿಸ್ಕ್ ಎಂಬ ಆರೋಗ್ಯ ಸಂಸ್ಥೆಯ ಅಧಿಕಾರಿ ಅಲನ್ ಮೋಸೆಸ್ ಹೇಳಿದ್ದಾರೆ.  ಟೈಪ್-2 ಮಧುಮೇಹವನ್ನು ತಡೆಗಟ್ಟಲು 2045 ರ ವೇಳೆಗೆ ಜಾಗತಿಕ ಬೊಜ್ಜು ಪ್ರಮಾಣವನ್ನು ಶೇ.25 ಕ್ಕೆ ಇಳಿಕೆ ಮಾಡಬೇಕೆಂದು ಸಂಶೋಧಕರು ಸಲಹೆ ನೀಡಿದ್ದಾರೆ. 
2000-2014 ರ ನಡುವೆ ಎಲ್ಲಾ ರಾಷ್ಟ್ರಗಳ ಜನಸಂಖ್ಯೆಯನ್ನು ವಯಸ್ಸಿನ ಆಧಾರದಲ್ಲಿ ವಿಭಾಗಿಸಲಾಗಿತ್ತು, ನಂತರ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್ ) ಆಧಾರದಲ್ಲಿ ವಿಭಾಗಿಸಿ, ಈ ಪೈಕಿ ಪ್ರತಿ ವರ್ಷ ಮಧುಮೇಹಕ್ಕೆ ತುತ್ತಾದವರನ್ನು ಪರೀಕ್ಷಿಸಿ ಸಂಶೋಧನೆ ನಡೆಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com