ಮಕ್ಕಳು ಸರಿಯಾದ ಶಿಕ್ಷಣ ಪಡೆಯಬೇಕು, ಏಕೆಂದು ಗೊತ್ತಾ?

ಯಾವುದೇ ಮಗು ಸರಿಯಾದ ಶಿಕ್ಷಣ ಹೊಂದುತ್ತಿದ್ದರೆ ಅಂತಹಾ ಮಗು ತನ್ನ ಆರ್ಥಿಕ ನಿರ್ಧಾರ ಸ್ವಯಂ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ಕಂಡುಕೊಳ್ಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನ್ಯೂಯಾರ್ಕ್: ಯಾವುದೇ ಮಗು ಸರಿಯಾದ ಶಿಕ್ಷಣ ಹೊಂದುತ್ತಿದ್ದರೆ ಅಂತಹಾ ಮಗು ತನ್ನ ಆರ್ಥಿಕ ನಿರ್ಧಾರ ಸ್ವಯಂ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ಕಂಡುಕೊಳ್ಳಲಾಗಿದೆ.
ಶಿಕ್ಷಣವನ್ನು ಪಡೆದುಕೊಂಡವರು  ಹೆಚ್ಚಿನ ಪ್ರಮಾಣದ ಆರ್ಥಿಕ ತರ್ಕಬದ್ಧತೆಯನ್ನು ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಕೊಂಡಿದ್ದು, ಶಿಕ್ಷಣವು ವ್ಯಕ್ತಿಯ ಆರ್ಥಿಕ ನಿರ್ಧಾರದ ಸಂಬಂಧ ನಿರ್ಣಾಯಕ ಗುಣಮಟ್ಟವನ್ನು ಹೆಚ್ಚಿಸುವ ಸಾಧನವಾಗಿದೆ ಎಂದು ಅದ್ಯಯನ ವರದಿಯಲ್ಲಿವಿವರಿಸಲಾಗಿದೆ.
"ಆದಾಯ ಮತ್ತು ಆರೋಗ್ಯದಂತಹ ಕ್ಷೇತ್ರಗಳ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಲು  ಶಾಲಾಶಿಕ್ಷಣವಅತ್ಯಂತ ಸಹಕಾರಿಯಾಗಿದೆ. ಎಂದು ನಮಗೆ ತಿಳಿದಿರುವಾಗ, ನಮ್ಮ ಕೆಲಸವು ಜನರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳಲ್ಲಿ ಸುಧಾರಣೆ ಮಾಡುವುದರಿಂದ ಸಿಗುವ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಬಹುದಾಗಿದೆ" ಎಂದು ಕಾರ್ನೆಲ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್.ಹ್ಯುನ್ಚೆಲ್ ಬ್ರಿಯಾಂಟ್ ಕಿಮ್ ಹೇಳಿದ್ದಾರೆ.
ವಿಜ್ಞಾನದ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನಕ್ಕೆ,ಮಲಾವಿದಲ್ಲಿನ ನಿಯಂತ್ರಿತ ಪ್ರಯೋಗ ಶಿಕ್ಷಣ ಕೇಂದ್ರದಲಿನ ಶಿಕ್ಷಣಕ್ಕಾಗಿ ಹಣಕಾಸಿನ ಬೆಂಬಲವನ್ನು ಪಡೆಯುತ್ತಿರುವ ೯ ಮತ್ತು ೧೦ನೇ ತರಗತಿಯ ಸುಮಾರು 3,000 ವಿದ್ಯಾರ್ಥಿನಿಯರನ್ನು ಒಳಪಡಿಸಲಾಗಿತ್ತು.
"ನೈಜ ಜೀವನದ ಉದಾಹರಣೆಗಳನ್ನು ಅನುಕರಿಸುವ ಒಂದು ಯಾದ್ರಿಚ್ಚಿಕ ಶೈಕ್ಷಣಿಕ ಪ್ರಯೋಗದ ಮೂಲಕ ಅನುಕ್ರಮವಾಗಿ ಶಿಕ್ಷಣ ಪಡೆಅವರು ಉತ್ತಮ ಆರ್ಥಿಕ ನಿಯ್ತಂತ್ರಣ ಹಾಗೂ ಆರ್ಥಿಕ ಮುಗ್ಗಟ್ಟಿನ ಕುರಿತು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚು ಪ್ರಮಾಣದಲ್ಲಿ ಹೊ<ದಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ," ಕಿಮ್ ಹೇಳಿದ್ದಾರೆ.
ಸಾಂಪ್ರದಾಯಿಕ ಆರ್ಥಿಕ ವಿಶ್ಲೇಷಣೆಯು ಮಾನವರು ತರ್ಕಬದ್ಧ ಆಯ್ಕೆಗಳನ್ನು ಮಾಡುತ್ತಾರೆ  ಎಂದೇ ಭಾವಿಸುತ್ತದೆ.ಆದಾಗ್ಯೂ, ಜನರು ತಾವು ಮಹತ್ವದ ಆರ್ಥಿಕ ತೀರ್ಮಾನ ತೆಗೆದುಕೊಳ್ಳುವ ವೇಳೆ ಬಹಳಷ್ಟು ಬಾರಿ ಎಡವುತ್ತಾರೆ. ಆದರೆ ಉತ್ತಮ ಶಿಕ್ಷಣ ಪಡೆದ ತರ್ಕಬದ್ದ ವ್ಯಕ್ತಿಗಳು ಹೇಗೆ ಉನ್ನತ ವೈವಿಧ್ಯತೆಯನ್ನು ಹೊಂದಿದ್ದಾರೆಂದು ನ್ಡಲು ಈ ಅದ್ಯಯನ ನಮಗೆ ಸಾಕ್ಷ್ಯ ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com