ಹೆಚ್ಚು ಸಂತೋಷವಾಗಿರುವ ಹಿರಿಯರು, ವೃದ್ದರು ದೀರ್ಘಾಯುಗಳಾಗುತ್ತಾರೆ: ವರದಿ

ವೃದ್ದರು ಹೆಚ್ಚು ಸಂತೋಷವಾಗಿದ್ದರೆ ಹೆಚ್ಚು ದಿನಗಳ ಕಾಲ ಬದುಕಬಲ್ಲರು. ಓರ್ವ ಭಾರತೀಯರನ್ನೂ ಒಳಗೊಂಡು ನಡೆಸಿದ ಸಂಶೋಧನೆಯಿಂದ ವಿಜ್ಞಾನಿಗಳು ಈ ಅಂಶವನ್ನು ಕಂಡುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಸಿಂಗಾಪುರ್: ವೃದ್ದರು ಹೆಚ್ಚು ಸಂತೋಷವಾಗಿದ್ದರೆ ಹೆಚ್ಚು ದಿನಗಳ ಕಾಲ ಬದುಕಬಲ್ಲರು. ಓರ್ವ ಭಾರತೀಯರನ್ನೂ ಒಳಗೊಂಡು ನಡೆಸಿದ ಸಂಶೋಧನೆಯಿಂದ ವಿಜ್ಞಾನಿಗಳು ಈ ಅಂಶವನ್ನು ಕಂಡುಕೊಂಡಿದ್ದಾರೆ.
'ಏಜ್ ಆಂಡ್ ಏಜಿಂಗ್' ಎನ್ನುವ ನಿಅತಕಾಲಿಕದಲ್ಲಿ ಪ್ರಕಟವಾದ ಈ ಸಂಶೋಧನಾ ಅಧ್ಯಯನಕ್ಕಾಗಿ 4,478 ಜನರನ್ನು ಸಮೀಕ್ಷೆಗೆ ಒಲಪಡಿಸಲಾಗಿತ್ತು. ಇದಕ್ಕಾಗಿ ಅವರನ್ನು 2009ರಿಂದ 2015 ಡಿಸೆಂಬರ್ 31ರವರೆಗೆ ಪರೀಕ್ಷೆಗೆ ಒಳಪಡಿಸಿದ್ದರು.
"ಸಂತೋಷದಾಯಕವಾದ ಕ್ಷಣಗಳಲ್ಲಿ ಅಲ್ಪ ಏರಿಕೆಯಾಗುವುದು ಸಹ ವೃದ್ದರು, ಹಿರಿಯ ಜೀವಿಗಳ ಆಯಸ್ಸನ್ನು ಹೆಚ್ಚಿಸಬಹುದು ಎಂದು ಸಂಶೋಧನೆಗಳು ಹೇಳುತ್ತದೆ"ಗಪುರದಲ್ಲಿನ ಡ್ಯೂಕ್- ನನ್ಸ್ ವೈದ್ಯಕೀಯ ಶಾಲೆಯ ಸಹಾಯಕ ಪ್ರಾಧ್ಯಾಪಕ ರಾಹುಲ್ ಮಲ್ಹೋತ್ರ ಹೇಳಿದರು.
"ವೈಯುಕ್ತಿಕ ಚಟುವಟಿಕೆಗಳಾಗಲಿ, ಸರ್ಕಾರದ ನೀತಿಗಳಾಗಲಿ ಹಿರಿಯ ಜೀವಕ್ಕೆ ಸಹಾಯಕವಾಗಿದ್ದರೆ, ಅವರ ಸಂತೋಷದ ಕ್ಷಣಗಳು ಹೆಚ್ಚುವುದಕ್ಕೆ ಕಾರಣವಾಗಿದ್ದರೆ ಅಂತಹಾ ವೇಳೆ ಅವರ ಸುದೀರ್ಘ ಜೀವನಕ್ಕೆ ಅದು ಸಹಕಾರಿಯಾಗಲಿದೆ" ಮಲ್ಹೋತ್ರಾ ಹೇಳಿದ್ದಾರೆ.
ಸಿಂಗಪುರದಲ್ಲಿ 60 ವರ್ಷಹಾಗು ಅದಕ್ಕೆ ಮೇಲ್ಪಟ್ಟವರನ್ನು ಈ ಸಮೀಕ್ಷೆಗೆ ಬಳಸಿಕೊಲ್ಳಲಾಗಿದೆ.
ಕಳೆದ ಒಂದು ವಾರದಲ್ಲಿ ಅದೆಷ್ಟು ಬಾರಿ "ನಾನು ಸಂತೋಷಪಟ್ಟೆ', 'ನಾನು ಜೀವನವನ್ನು ಅನುಭವಿಸಿದೆ' ಮತ್ತು 'ನಾನು ಭವಿಷ್ಯದ ಬಗ್ಗೆ ಭರವಸೆ ಹೊಂದಿದ್ದೇನೆ' ಎನ್ನುವ ಭಾವನೆಗಳು ನಿಮಗೆ ಉಂಟಾಗಿದೆ ಎಂದು ಕೇಳುವ ಮುಖೇನ ಸಮೀಕ್ಷೆಗೆ ಒಳಗಾದವರ ಸಂತೋಷದ ಪ್ರಮಾಣವನ್ನು ಅಳೆಯಲಾಗುತ್ತಿತ್ತು.
ಜೀವನಶೈಲಿ ಆಯ್ಕೆಗಳು, ಆರೋಗ್ಯ ಮತ್ತು ಸಾಮಾಜಿಕ ಅಂಶಗಳು ಇಲ್ಲಿ ವಿಶ್ಲೇಷಣೆಗೆ ಒಳಪಟ್ಟವು.
ಸಂತಸದಲ್ಲಿದ್ದವ್ರಲ್ಲಿ ಶೇ.15ರಷ್ಟು ಮಂದಿ ಡಿಸೆಂಬರ್ 31, 2015ರವರೆಗೂ ಜೀವಿಸಿದ್ದರು.ಆದರೆ ಇದಕ್ಕೆ ವಿರುದ್ಧವಾಗಿ ಅತೃಪ್ತರಾಗಿದ್ದವರ ಪ್ರಮಾಣ ಶೇ.20 ರಷ್ಟಿದೆ.
ವಯಸ್ಸಾಗಿಯೂ ಸಂತೋಷವಾಗಿರುವವರಲ್ಲಿ ಸಾಯುವ ಸಾಧ್ಯತೆಯು ಶೇ.19ರಷ್ಟು ಕಡಿಮೆ ಇದೆ ಎನ್ನುವುದನ್ನು ಈ ಅಧ್ಯಯನ ತೋರಿಸಿದೆ.
ಇಷ್ಟೇ ಅಲ್ಲದೆ ಮಹಿಳೆ ಹ್ಹಾಗೂ ಪುರುಷ ಹಿರಿಯ ವಯಸ್ಸಿನವರಲ್ಲಿ ಸಂತಸದ ಪ್ರಮಾಣ, ಆಯಸ್ಸಿನ ಸಮತೋಲನ ವ್ಯತ್ಯಾಸವಿದೆ. ಅಲ್ಲದೆ 60-79 ವರ್ಷಗಳ ಮಿತಿಯಲ್ಲಿರುವವರು, 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನರಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸವಿದೆ.
ವಯಸ್ಸು ಹಾಗೂ ಲಿಂಗಗಳು ಆಯಸ್ಸಿನ ಮೇಲೆ ಪರಿಣಾಮ ಬಿರುತ್ತದೆ. ಸಂತಸದಾಯಕ ಪುರುಷ ಹಾಗೂ ಮಹಿಳೆಯರು, ಕಡಿಮೆ ಹಾಗೂ ಹೆಚು ವಯಸ್ಸಾದವರು ಬೇರೆ  ಬೇರೆ ಕಾರಣದಲ್ಲಿ ಸಂತಸ ಕಾಣುವುದರಿಂದ ಅವರ ಆಯಸ್ಸು ವ್ಯತ್ಯಾಸವಾಗುತದೆ ಎಂದು ಅಧ್ಯಯನ ವರದಿ ಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com