ಪುರುಷರಲ್ಲಿ ವೀರ್ಯ ಉತ್ಪಾದನೆ ಮೇಲೆ ಒಳ ಉಡುಪುಗಳ ಪರಿಣಾಮ!

ವೀರ್ಯದ ಗುಣ ಮಟ್ಟ ಕಡಿಮೆ ಇರುವುದು ಅಥವಾ ವೀರ್ಯದ ಉತ್ಪಾದನೆ ಕುಗ್ಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ.
ಪುರುಷರಲ್ಲಿ ವೀರ್ಯದ ಉತ್ಪತ್ತಿ ಹೆಚ್ಚಿಸುವುದಕ್ಕೆ ಯಾವ ರೀತಿಯ ಒಳ ಉಡುಪು ಒಳ್ಳೆಯದು?
ಪುರುಷರಲ್ಲಿ ವೀರ್ಯದ ಉತ್ಪತ್ತಿ ಹೆಚ್ಚಿಸುವುದಕ್ಕೆ ಯಾವ ರೀತಿಯ ಒಳ ಉಡುಪು ಒಳ್ಳೆಯದು?
ವೀರ್ಯದ ಗುಣ ಮಟ್ಟ ಕಡಿಮೆ ಇರುವುದು ಅಥವಾ ವೀರ್ಯದ ಉತ್ಪಾದನೆ ಕುಗ್ಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಇದಕ್ಕೆ ಪುರುಷರು ಧರಿಸುವ ಒಳ ಉಡುಪುಗಳೂ ಕಾರಣವಾಗಿರಬಹುದು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಹಾರ್ವರ್ಡ್ ವಿವಿಯಲ್ಲಿ ಸಂಶೋಧನೆಯೊಂದು ನಡೆದಿದೆ. 
 ಬಿಗಿಯಾದ ಒಳ ಉಡುಪು ಧರಿಸುವುದರಿಂದ ಪುರುಷರ ವೀರ್ಯ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆದಿದೆ. ಪುರುಷರು ಧರಿಸುವ ನಿರ್ದಿಷ್ಟ ರೀತಿಯ ಒಳ ಉಡುಪುಗಳು ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಹಾರ್ವರ್ಡ್ ನ ಟಿಹೆಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಸಂಶೋಧಕರು. ಬಾಕ್ಸರ್ ಒಳ ಉಡುಪು ಪುರುಷರ ಫಲವತ್ತತೆಗೆ ಉತ್ತಮ ಎನ್ನುತ್ತಿದ್ದಾರೆ ಸಂಶೋಧಕರು. 
ಉಳಿದ ಶೈಲಿಯ ಒಳ ಉಡುಪಿಗಿಂತಲೂ ಬಾಕ್ಸರ್ ಒಳ ಉಡುಪುಗಳು ಸಡಿಲವಾಗಿದೆ. ಬಾಕ್ಸರ್ ಗಳನ್ನು ಧರಿಸಿದರೆ ಉಷ್ಣತೆಯ ಪ್ರಮಾಣ ಕಡಿಮೆ ಇದ್ದು, ವೀರ್ಯದ ಗುಣಮಟ್ಟ ಹೆಚ್ಚುವುದಕ್ಕೆ ಸಹಕಾರಿಯಾಗಲಿದೆ ಎಂಬುದು ಹಾರ್ವರ್ಡ್ ವಿವಿ ಸಂಶೋಧಕರ ಅಭಿಪ್ರಾಯ. 
ಈ ಸಂಶೋಧನೆಗಾಗಿ ಫರ್ಟಿಲಿಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32-39 ವಯಸ್ಸಿನ ಸುಮಾರು 656 ಪುರುಷರಿಂದ ವೀರ್ಯದ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಅವರು ಧರಿಸುವ ಒಳ ಉಡುಪಿನ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದ್ದು, ಬಾಕ್ಸರ್, ಜಾಕಿ, ಬಿಕಿನಿ, ಬ್ರೀಫ್ ಗಳ ಬಗ್ಗೆಯೂ ಪ್ರಶ್ನಿಸಲಾಗಿದೆ. ಬಾಕ್ಸರ್ ಗಳನ್ನು ಧರಿಸುವ ಪುರುಷರಲ್ಲಿ ಚಲನಶೀಲ ಆರೋಗ್ಯಕರ ವೀರ್ಯ ಹೆಚ್ಚಿರುವುದು ಕಂಡುಬಂದಿದೆ.  ಬಾಕ್ಸರ್ ಗಳನ್ನು ಹೆಚ್ಚು ಧರಿಸುವುದರಿಂದ ಸರಾಗವಾಗಿ ಗಾಳಿಯಾಡುತ್ತದೆ. ಇದರಿಂದ ಉಷ್ಣತೆ ಕಡಿಮೆಯಾಗಿ ಆರೋಗ್ಯಕರ ವೀರ್ಯಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣವಾಗುತ್ತದೆ ಈ ಹಿನ್ನೆಲೆಯಲ್ಲಿ ಪುರುಷರಲ್ಲಿ ಆರೋಗ್ಯಕರ ವೀರ್ಯ ಉತ್ಪತ್ತಿಗೆ ಬಾಕ್ಸರ್ ಗಳೇ ಬೆಸ್ಟ್ ಎನ್ನುತ್ತಿದೆ ಹಾರ್ವರ್ಡ್ ವಿವಿ ಸಂಶೋಧನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com