ನಿಮ್ಮ ಮಗುವಿನ ಹದಿಹರೆಯದ ಮತ್ತು ಒತ್ತಡದ ಸಮಸ್ಯೆಗಳ ನಿರ್ವಹಣೆ ಹೇಗೆ?

ಮಕ್ಕಳ ಬೆಳವಣಿಗೆಯಲ್ಲಿ ಒತ್ತಡದ ಸಮಸ್ಯೆ ಪ್ರಮುಖವಾದ ಪಾತ್ರ ವಹಿಸುತ್ತದೆ. ವಿಶೇವಾಗಿ ಹದಿಹರೆಯದ ವಯಸ್ಸಿನವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಒತ್ತಡ ಸಮಸ್ಯೆಗಳ ನಿರ್ವಹಣೆ ಬಗ್ಗೆ ಕೆಲವೊಂದು ಮಾಹಿತಿ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ತಮ್ಮನ್ನು ನೋಡಿದರೆ ಎಲ್ಲರಿಗೂ ಇಷ್ಟವಾಗಬೇಕು ಆ ರೀತಿಯಲ್ಲಿ ನಾವು ಇರಬೇಕು ಎಂದು ಬಯಸುವುದು ಮಾನವನ ಸಹಜವಾದ ಪ್ರವೃತ್ತಿಯಾಗಿದೆ. ವಿಶೇಷವಾಗಿ ಹದಿಹರೆಯದ ವಯಸ್ಸಿನವರು ಎಲ್ಲರ ಗಮನ ತಮ್ಮ ಕಡೆಗೆ ಬೀರುವಂತಿರಬೇಕು ಎಂಬ ಹಂಬಲ ಹೊಂದಿರುತ್ತಾರೆ.
ಹೆಚ್ಚಿನ ಸ್ನೇಹಿತರು ದೊರೆಯದಿದ್ದಾಗಲೂ ಕೆಲವರು ಒತ್ತಡದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇದು ಪ್ರತಿಯೊಬ್ಬರ ಜೀವನದ ಅನುಭವವಾಗಿರುತ್ತದೆ .  ಇಂತಹ ಒತ್ತಡದ ಸಮಸ್ಯೆಗಳಿಗೊಳಗಾದಾಗ ಆಂತರಿಕ ಹಾಗೂ ಬಾಹ್ಯವಾಗಿ ತುಂಬಾ ಬದಲಾವಣೆಗಳನ್ನು ನೋಡುತ್ತೇವೆ. 
ಮಕ್ಕಳ ಬೆಳವಣಿಗೆಯಲ್ಲಿ ಒತ್ತಡದ ಸಮಸ್ಯೆ ಪ್ರಮುಖವಾದ ಪಾತ್ರ ವಹಿಸುತ್ತದೆ. ವಿಶೇವಾಗಿ ಹದಿಹರೆಯದ ವಯಸ್ಸಿನವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ಮಾಧ್ಯಮಗಳ  ಅಬ್ಬರದ ಇಂದಿನ ಕಾಲದಲ್ಲಿ ಒತ್ತಡದ ಸಮಸ್ಯೆಗಳು ಹದಿಹರೆಯದವರನ್ನು ದಾರಿ ತಪ್ಪಿಸುವ ಅಪಾಯವೂ ಹೆಚ್ಚಾಗುತ್ತಿದೆ. 
ಒತ್ತಡದ ಸಮಸ್ಯೆಗಳಿಂದಾಗುವ ಕೆಲ ಸಕಾರಾತ್ಮಕ, ನಕಾರಾತ್ಮಕ  ಪರಿಣಾಮಗಳು
*  ಒತ್ತಡದ ಸಮಸ್ಯೆಗಳು ಮಕ್ಕಳ ಸಾಮಾಜಿಕ ನಡವಳಿಕೆಗಳನ್ನು ನಿರ್ದೇಶಿಸುತ್ತದೆ
*  ಮಕ್ಕಳ ಭಾವನಾತ್ಮಕ ಅಭಿವೃದ್ದಿಗಳ ಮೇಲೆ ಪರಿಣಾಮ ಬೀರುತ್ತದೆ.
*  ಸ್ವಯಂ ಅನುಮಾನಕ್ಕೆ ಕಾರಣವಾಗಬಹುದು
*  ಭೀತಿ, ಮಾನಸಿಕ ಖಿನ್ನತೆಯಂತಹ ಮಾನಸಿಕ ಅಸ್ವಸ್ಥತೆಯನ್ನು ಮೂಡಿಸಬಹುದು
*  ಹೊಸ ಕೌಶಲ್ಯ ಅಥವಾ ಪುಸ್ತಕ, ಸಂಗೀತ, ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವು ನೀಡಬಹುದು
* ಹದಿಹರೆಯದ ವಯಸ್ಸಿನಲ್ಲಿ ತರಗತಿಗಳಿಗೆ ಚಕ್ಕರ್, ಕಳ್ಳತನ, ವಂಚನೆ, ಮದ್ಯ, ಮಾದಕ ವಸ್ತುಗಳ ಚಟಕ್ಕೆ ಉತ್ತೇಜಿಸಬಹುದು
* ಹದಿಹರೆಯದ ವಯಸ್ಸಿನವರು ಭಾವಾನಾತ್ಮಕ, ಮಾನಸಿಕ , ದೈಹಿಕ ಹಾಗೂ ಬೌದ್ದಿಕವಾಗಿ ತುಂಬಾ ವ್ಯತ್ಯಾಸವಾಗುತ್ತದೆ. ಈ ಹಂತದಲ್ಲಿ ಸ್ನೇಹಿತರು ಹೆಚ್ಚಿಗೆ ಇಲ್ಲ ಅನ್ನಿಸಿದರೆ ಸ್ವಾಭಾವಿಕವಾಗಿ  ಒತ್ತಡಗಳಿಗೆ ಒಳಗಾಗುತ್ತಾರೆ. 
ಹದಿಹರೆಯದವರು ಒತ್ತಡಕ್ಕೊಳಗಾಗುವ ಕೆಲ ಸಂದರ್ಭಗಳು
*  ಶಾಲೆಗಳಿಗೆ ಬಂಕ್ ಹಾಕಿದಾಗ
*  ಪಠ್ಯ, ಪ್ರವಚನ ಸಂದರ್ಭದಲ್ಲಿ ಮೋಸ ಮಾಡಿದಾಗ
*  ಅಂಗಡಿ ಕಳ್ಳತನ ಮಾಡಿದಾಗ
* ಬೇರೊಬ್ಬರ ಕೆಲಸವನ್ನು ನಕಲು ಮಾಡಿದಾಗ
*  ಒಂದೇ ರೀತಿಯ ಉಡುಪುಗಳನ್ನು ಧರಿಸಿದಾಗ
* ಮದ್ಯ, ತಂಬಾಕು ಮತ್ತಿತರ ಮಾದಕ ವಸ್ತುಗಳನ್ನು ಸೇವಿಸಿದಾಗ
* ಲೈಂಗಿಕ ಕ್ರಿಯೆ ನಡೆಸಿದಾಗ
ಒತ್ತಡ ಸಮಸ್ಯೆಗಳಿಂದ ಹೊರಬರಲು ಏನು ಮಾಡಬೇಕು:  ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಮಕ್ಕಳ ವಯಸ್ಸಿಗನುಗಣವಾಗಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕಾಗುತ್ತದೆ.  ಇಂತಹ ಕೆಲವೊಂದು ಮಾರ್ಗೋಪಾಯಗಳು ಇಲ್ಲಿವೆ.
* ತಪ್ಪು ಅಥವಾ ಅಪಾಯಕಾರಿ ಎಂದು ತೋರುವ ಕೆಲಸಗಳನ್ನು ಮಾಡಲು ಒತ್ತಡ ಹೇರುವ ಗೆಳೆಯರಿಂದ ದೂರವಿರಬೇಕು
* ಅಸುರಕ್ಷಿತ ಅಥವಾ ಅನಾನುಕೂಲತೆ ಇದೆ ಎನ್ನಿಸಿದಾಗ ಇಂತಹ ಸಂದರ್ಭಗಳಿಂದ ಹೇಗೆ ಹೊರಬರಬೇಕು ಎಂಬುದನ್ನು ಕಲಿಯಬೇಕು. ಅಲ್ಲದೇ  ನಯವಾಗಿಯೇ ಬೇಡ ಎಂದು ಹೇಳುವುದನ್ನು ಮೊದಲು ಕಲಿಯಬೇಕು.
* ಒತ್ತಡ ಸಮಸ್ಯೆ ಎದುರಿಸುತ್ತಿದ್ದಾಗ  ನಂಬಿಕೆ ಹೊಂದಿರುವಂತಹ ಪೋಷಕರು, ಶಿಕ್ಷಕರು ಅಥವಾ ಶಾಲೆಗಳಲ್ಲಿ ಇರುವ ಸಮಾಲೋಚಕರೊಂದಿಗೆ ಯಾವುದೇ ಭಯವಿಲ್ಲದೆ ಮುಕ್ತವಾಗಿ ಮಾತನಾಡಬೇಕು.
* ಮುಕ್ತವಾಗಿ ಮಾತನಾಡಲು ಪ್ರಾಮಾಣಿಕ ರೀತಿಯಲ್ಲಿ ಸಂಪರ್ಕ ನಡೆಸಲು ಪ್ರೋತ್ಸಾಹಿಸಬೇಕು
* ಕೆಟ್ಟ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳದಂತೆ ಮಕ್ಕಳಿಗೆ ದೃಢವಾಗಿ ಕಲಿಸಬೇಕು. 
* ನಿಮ್ಮ ಮಕ್ಕಳು ಆನ್ ಲೈನ್ ನಲ್ಲಿ ಯಾವ ರೀತಿ ಸಂವಾದಿಸಿರುತ್ತಾರೆ  ಎಂಬುದರ ಬಗ್ಗೆ ಗಮನ ನೀಡಬೇಕು. ಸುರಕ್ಷಿತ ಇಂಟರ್ ನೆಂಟ್ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ  ಅವರೊಂದಿಗೆ ಮಾತನಾಡಬೇಕು. 
* ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು
* ಅಹಿತಕರ ಅಥವಾ ಅಪಾಯಕಾರಿ ಪರಿಸ್ಥಿತಿಗಳಿಂದ ಹೊರಬರುವ ಮಾರ್ಗಗಳನ್ನು ಮಕ್ಕಳಿಗೆ ತಿಳಿಸಬೇಕು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com