ಹದಿಹರೆಯದವರ ಆಯ್ಕೆಗಳು ಪ್ರಶ್ನಾರ್ಹವಾಗಿರುತ್ತದೆ ಏಕೆ?

ಹದಿಹರೆಯದ ಸಮಯದಲ್ಲಿ ಭಾವೋದ್ವೇಗಕ್ಕೊಳಗಾಗುವುದು ನಮ್ಮಲ್ಲಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಅಧ್ಯಯನವೊಂದರ ಪ್ರಕಾರ ಹದಿ ಹರೆಯದ ಸಂದರ್ಭದಲ್ಲಿ  ವಿಶೇಷವಾಗಿ ಸ್ವಯಂ ನಿಯಂತ್ರಣಕ್ಕೆ ಸಂಬಂಧಿಸಿದಂತೆ  ಮಾನವರು ಹಾಗೂ ಇತರ ಸಸ್ತನಿಗಳ ಮೆದಳಿನಲ್ಲೂ ಬದಲಾವಣೆಯನ್ನು ನೋಡಬಹುದಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷ್ಟಿಂಗ್ಟನ್: ಹದಿಹರೆಯದ ಸಮಯದಲ್ಲಿ ಭಾವೋದ್ವೇಗಕ್ಕೊಳಗಾಗುವುದು ನಮ್ಮಲ್ಲಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಅಧ್ಯಯನವೊಂದರ ಪ್ರಕಾರ ಹದಿ ಹರೆಯದ ಸಂದರ್ಭದಲ್ಲಿ  ವಿಶೇಷವಾಗಿ ಸ್ವಯಂ ನಿಯಂತ್ರಣಕ್ಕೆ ಸಂಬಂಧಿಸಿದಂತೆ  ಮಾನವರು ಹಾಗೂ ಇತರ ಸಸ್ತನಿಗಳ ಮೆದಳಿನಲ್ಲೂ ಬದಲಾವಣೆಯನ್ನು ನೋಡಬಹುದಾಗಿದೆ. 

ಬಹುತೇಕ ಮಂದಿ ತಿಳಿದಿರುವಂತೆ ಹದಿಹರೆಯದ ಉದ್ವೇಗ ಮತ್ತು ಸಂವೇದನೆ ಬೇಡಿಕೆಯ ಸಮಯವಾಗಿದೆ. ಇದು ಪ್ರಶ್ನಾರ್ಹ ಆಯ್ಕೆಗಳಿಗೆ ಕಾರಣವಾಗುತ್ತದೆ ಎಂದು ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಬೀಟ್ರಿಜ್ ಲೂನಾ ಹೇಳಿದ್ದಾರೆ.ಆದಾಗ್ಯೂ, ಈ ನಡವಳಿಕೆಯ ಪ್ರವೃತ್ತಿಯು ಹೊಂದಾಣಿಕೆಯ ಪ್ರಕ್ರಿಯೆಯನ್ನು ಆಧರಿಸಿದೆ, ಇದು ಹೊಸ ಅನುಭವಗಳನ್ನು ಪಡೆಯುವುದರ ಆಧಾರದ ಮೇಲೆ ಮೆದುಳನ್ನು ರೂಪಿಸಲು ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಗಳು ಮಾನವನಿಗೆ ಹತ್ತಿರವಾಗುವ ಅತ್ಯಂತ ಶಕ್ತಿಶಾಲಿ ಪ್ರಾಣಿ ಮಾದರಿಯಾಗಿದೆ ಎಂದು ಅಮೆರಿಕಾದ ವೇಕ್ ಫಾರೆಸ್ಟ್ ಸ್ಕೂಲ್ ಆಫ್ ಮೆಡಿಸನ್ ನ ಕ್ರಿಸ್ಟೋಸ್ ಕಾನ್ಸಿಂಟಿನಿಡಿಸ್ ಹೇಳಿದ್ದಾರೆ. ಅವುಗಳು ಕೂಡಾ ಹದಿಹರೆಯದ ಮತ್ತು ಪ್ರೌಢ ವ್ಯವಸ್ಥೆಯ ನಡುವಿನ ಪಕ್ವತೆಯ ಮಾದರಿಗಳೊಂದಿಗೆ ಇದೇ ಪಥದಲ್ಲಿ ಸಾಗುತ್ತವೆ ಎಂದು ಅವರು ತಿಳಿಸಿದ್ದಾರೆ. 

ಈ ಅವಧಿಯಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದು ಮತ್ತು ರೋಮಾಂಚಕ ಸಾಹಸಗಳನ್ನು ಮಾಡುವುದು ಕೆಟ್ಟ ವಿಷಯವಲ್ಲ ಎಂದು ಟ್ರೆಂಡ್ಸ್ ಇನ್ ನ್ಯೂರೋ ಸೈನ್ಸಸ್ ಜರ್ನಲ್ ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಹದಿಹರೆಯದಲ್ಲಿ  ಪರಿಪೂರ್ಣ ಪ್ರತಿಬಂಧಕ ನಿಯಂತ್ರಣ ವ್ಯವಸ್ಥೆಯನ್ನು  ಹೊಂದದಿರುವುದು ಇದಕ್ಕೆ  ಕಾರಣವಾಗುತ್ತದೆ ಎಂದು ಲೂನ್ಸಾ ಹೇಳಿದ್ದಾರೆ. 

ಈ ಸಮಯದಲ್ಲಿ ಮಾನವನ  ನರ ವ್ಯೂಹ ಬೆಳವಣಿಗೆಯು ರಚನಾತ್ಮಕ ಅಂಗ ರಚನಾಶಾಸ್ತ್ರದಲ್ಲಿನ ಬದಲಾವಣೆಗಳಿಂದ ನಿರೂಪಿಸಲ್ಪಟ್ಟಿರುತ್ತದೆ  ಎಂದು ಸಂಶೋಧಕರು ಹೇಳಿದ್ದಾರೆ. ಹದಿಹರೆಯದ ಹೊತ್ತಿಗೆ ಮೆದುಳಿನ ಎಲ್ಲಾ ಅಡಿಪಾಯದ ಅಂಶಗಳಿದ್ದು, ಪರಿಷ್ಕರಣೆಗೊಳಗಾಗುತ್ತವೆ ಮತ್ತು ಅವರ ನಿರ್ದಿಷ್ಟ ಪರಿಸರದ ಬೇಡಿಕೆಗಳನ್ನು ಎದುರಿಸಲು ಕಾರ್ಯನಿರ್ವಹಿಸಲು ಅತ್ಯಂತ ಸೂಕ್ತವಾದ ಮಾರ್ಗವನ್ನು ಶಕ್ತಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ನರ ಚಟುವಟಿಕೆ ಮಾದರಿಗಳ ಅಭಿವೃದ್ಧಿಯು ಈ ಹಂತದ ಅಭಿವೃದ್ಧಿಯ ಪ್ರಮುಖ ಅಂಶವೆಂದು ತೋರುತ್ತದೆ ಮತ್ತು ಸ್ವಯಂ ನಿಯಂತ್ರಣ ಕಾರ್ಯಗಳಲ್ಲಿ ಯಶಸ್ವಿ ಕಾರ್ಯಕ್ಷಮತೆಗೆ ಇದು ಅವಶ್ಯಕವಾಗಿದೆ. ಸ್ವಯಂ ನಿಯಂತ್ರಣ, ನಡವಳಿಕೆಯನ್ನು ತಡೆಯುವ ಸಾಮರ್ಥ್ಯವಲ್ಲ ಎಂಬುದು ಈ ಎಲ್ಲಾ ಅಂಶಗಳಿಂದ ತಿಳಿದುಬರುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com