ಆಗಾಗ್ಗೆ ತಬ್ಬಿಕೊಳ್ಳಬೇಕು ಏಕೆ?

ಆಗಾಗ್ಗೆ ತಬ್ಬಿಕೊಳ್ಳುವುದರಿಂದ  ಸಮಸ್ಯೆಗಳನ್ನು ನಿವಾರಿಸಿಕೊಂಡು ಆಶಾದಾಯಕ ಹಾಗೂ ನೆಮ್ಮದಿಯುತ ಜೀವನ ನಡೆಸಲು ಕೆಲವರಿಗೆ ಸಹಾಯವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಆಗಾಗ್ಗೆ ತಬ್ಬಿಕೊಳ್ಳುವುದರಿಂದ  ಸಮಸ್ಯೆಗಳನ್ನು ನಿವಾರಿಸಿಕೊಂಡು ಆಶಾದಾಯಕ ಹಾಗೂ ನೆಮ್ಮದಿಯುತ ಜೀವನ ನಡೆಸಲು ಕೆಲವರಿಗೆ ಸಹಾಯವಾಗುತ್ತಿದೆ. ನಾವು ಸಂಪೂರ್ಣವಾಗಿ  ಒತ್ತಡವನ್ನು ತಪ್ಪಿಸಲು ಸಾಧ್ಯವಿಲ್ಲ, ಆದರೆ, ಅಪ್ಪುಗೆಯಿಂದ ಒತ್ತಡದಿಂದ ಹೊರಬಂದು ಉತ್ತಮ ಬದುಕು ಹೊಂದಬಹುದಾಗಿದೆ. 

ಹೌದು. ಇದು ನಿಜ! ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಬೆಂಬಲ ಮಾತ್ರವಲ್ಲದೇ ಉತ್ತಮ ಆರೋಗ್ಯವನ್ನು ಪ್ರೋತ್ಸಾಹಿಸುತ್ತದೆ. ಅಪ್ಪುಗೆಯಿಂದ ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆಗೊಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡದ ಹಾರ್ಮೋನುಗಳ ಪ್ರಮಾಣ ಕಡಿಮೆಯಾಗಲು  ಆಕ್ಸಿಟೋಸಿನ್ ಹಾರ್ಮೋನ್ ನೆರವಾಗುತ್ತದೆ. ಅಲ್ಲದೇ, ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. 

 ಹೀಗೆ ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ಕೇಂದ್ರ ನರ ಮಂಡಲ ವ್ಯವಸ್ಥೆಯಲ್ಲಿ ಅಪ್ಪುಗೆ ಪ್ರಕ್ರಿಯೆಯಾಗುವುದರಿಂದ ಮಾನವನ ಮನಸ್ಸಿನ ಮೇಲೆ ನೇರ ಪರಿಣಾಮ ಬೀರಿ , ಸಂತೋಷವನ್ನುಂಟು ಮಾಡುತ್ತದೆ ಎಂದು ಸಂಶೋಧಕರು ಸಲಹೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯವರನ್ನು ಉತ್ತಮ ಆರೋಗ್ಯವಂತರನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿದಿನ ಒಂದು ಬಾರಿಯಾದರೂ ನಿಮ್ಮ ಮಕ್ಕಳನ್ನು ತಬ್ಬಿಕೊಳ್ಳಬೇಕಾಗುತ್ತದೆ. ಇದರಿಂದ ಅವರಿಗೆ ಸಂತೋಷದ ಜೊತೆಗೆ ಒತ್ತಡದ ಮನೋಭಾವವನ್ನು ನಿವಾರಿಸುತ್ತದೆ. 

ಅಪ್ಪುಗೆಯಿಂದ ಹಲವು ರೀತಿಯ ಹಾರ್ಮೋನ್ ಗಳು ನಮ್ಮ ದೇಹದಲ್ಲಿ ಬದಲಾವಣೆಯಾಗುತ್ತದೆ. ಅಂತಹವುಗಳಲ್ಲಿ ಪ್ರಮುಖವಾಗಿ 
* ಡೋಪಮೈನ್:  ಇದು ನಮ್ಮಗೆ ಒಳ್ಳೆಯ ಭಾವನೆಯನ್ನು ನೀಡುವ ಹಾರ್ಮೋನ್ ಆಗಿದೆ.
* ಸಿರೊಟೋನಿನ್: ಇದು ನೋವನ್ನು ನಿವಾರಿಸಲು ಮತ್ತು ಉತ್ತಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* ಆಕ್ಸಿಟೋಸಿನ್: ನಮಗೆ ಶಾಂತತೆಯ ಭಾವನೆ ಮತ್ತು ತೃಪ್ತಿಯ ಭಾವವನ್ನು ನೀಡುತ್ತದೆ.

ನಮ್ಮ ಹಾರ್ಮೋನ್ ಗಳ ಸಮತೋಲನದಿಂದ ಕೂಡಿದಾಗ ಮಾತ್ರ ನಮ್ಮ ರೋಗ ನಿರೋದಕ ವ್ಯವಸ್ಥೆ ಸದೃಢವಾಗಿದ್ದು  ದೇಹದ ಎಲ್ಲ ಅಂಗವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಭಾವನೆ ಮೂಡುತ್ತದೆ. ಇದರಿಂದಾಗಿ ಅಂತಿಮವಾಗಿ ಆರೋಗ್ಯಕರ ಜೀವನ ನಡೆಸಲು ನೆರವಾಗುತ್ತದೆ. ಅಪ್ಪುಗೆಯಿಂದ ನಮ್ಮ ದೇಹದೊಳಗಿನ ವಿವಿಧ ಜೈವಿಕ ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತದೆ

ಪ್ರೀತಿ, ಭಾವನೆಯನ್ನು ವ್ಯಕ್ತಪಡಿಸಲು ಸಂವಹನವಾಗಿ ಬಳಸುವ ಅಪ್ಪುಗೆಯನ್ನು ಒತ್ತಡದಿಂದ ಹೊರಬರಲು ಹಾಗೂ ಆರೋಗ್ಯಕರ ಜೀವನ ನಡೆಸಲು ಯಾಕೆ ಬಳಸಬಾರದು? ನಿಮ್ಮ ಪೋಷಕರು, ಸ್ನೇಹಿತರು, ಮಕ್ಕಳು ಹಾಗೂ ನಿಮ್ಮನ್ನು ಪ್ರೀತಿಸುವ ಜನರೊಂದಿಗೆ ಪ್ರೀತಿಯಿಂದ ತಬ್ಬಿಕೊಂಡು ಉತ್ತಮ ಆರೋಗ್ಯವಂತರಾಗಿ ಖುಷಿ ಖುಷಿಯಿಂದ ಜೀವನ ಸಾಗಿಸಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com