ನೀವು ಉದ್ಘರಿಸುವ ಈ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ!

ಮುಜುಗರ ಹಾಗೂ ಉತ್ಸಾಹವನ್ನು ವ್ಯಕ್ತಪಡಿಸುವುದಕ್ಕೆ ಸಾಮಾನ್ಯವಾಗಿ ಬಳಸುವ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಸಂಶೋಧನೆಯೊಂದು ಹೇಳಿದೆ.

Published: 08th February 2019 12:00 PM  |   Last Updated: 08th February 2019 08:17 AM   |  A+A-


Our 'oohs' and 'aahs' convey 24 types of emotion

ನೀವು ಉದ್ಘರಿಸುವ ಈ 2 ಭಾವಸೂಚಕ ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ!

Posted By : SBV SBV
Source : Online Desk
ಲಾಸ್ ಏಂಜಲೀಸ್: ಮುಜುಗರ ಹಾಗೂ ಉತ್ಸಾಹವನ್ನು ವ್ಯಕ್ತಪಡಿಸುವುದಕ್ಕೆ ಸಾಮಾನ್ಯವಾಗಿ ಬಳಸುವ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಸಂಶೋಧನೆಯೊಂದು ಹೇಳಿದೆ. 

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬಳಕೆ ಮಾಡುವ ಓಹ್ ಮತ್ತು ಆಹ್... ಶಬ್ದಗಳು  ಬರೊಬ್ಬರಿ 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಎಂಮ್ದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂಶೋಧಕರು ಹೇಳಿದ್ದಾರೆ. ಈ ಶಬ್ದಗಳನ್ನು ಕೇಳಿದ 2,000 ಜನರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿರುವ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂಶೋಧಕರು ನಾವು ಅಂದುಕೊಂಡಿದ್ದಕ್ಕಿಂತಲೂ ಆ ಎರಡು  ಶಬ್ದಗಳು ಹಲವು ಸಂಗತಿಗಳನ್ನು ರವಾನಿಸುತ್ತವೆ ಎಂದು ಹೇಳಿದ್ದಾರೆ. 

ಈ ಹಿಂದಿನ ಅಧ್ಯಯನದ ವರದಿಯಲ್ಲಿ ಈ ಎರಡು ಶಬ್ದಗಳನ್ನು ಉದ್ಘರಿಸುವುದರಿಂದ ಕೇವಲ 13 ರೀತಿಯ ಭಾವನೆಗಳಷ್ಟೆ ವ್ಯಕ್ತವಾಗುತ್ತವೆ ಎಂದು ಹೇಳಲಾಗಿತ್ತು. ಆದರೆ ಈಗ 24 ರೀತಿಯ ಭಾವನೆಗಳು ವ್ಯಕ್ತವಾಗುತ್ತವೆ ಎಂಬುದನ್ನು ವಾಕ್ ಸಂವಹನ ಸಂಶೋಧಕರು ಅಭಿವೃದ್ಧಿಪಡಿಸಿದ ಇಂಟರಾಕ್ಟೀವ್ ಆಡಿಯೋ ಮ್ಯಾಪ್ ನ ಮೂಲಕ ಕಂಡುಕೊಳ್ಳಲಾಗಿದೆ ಎಂದು  ಅಮೆರಿಕಾದ ಮನಃಶಾಸ್ತ್ರ ಜರ್ನಲ್ ನಲ್ಲಿ ಪ್ರಕಟಗೊಂಡ ಮಾಹಿತಿ ನೀಡಿದೆ. 
Stay up to date on all the latest ಜೀವನಶೈಲಿ news with The Kannadaprabha App. Download now
facebook twitter whatsapp