ಶೀತಗಾಳಿಯಿಂದ ಚರ್ಮದ ಕೋಮಲತೆ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್!

ಕೊರೆವ ಚಳಿ ಸಂಪೂರ್ಣ ಚಳಿಗಾಲದ ಅನುಭವ ನೀಡುತ್ತಿದೆ, ಜೊತೆಗೆ ಶೀತಗಾಳಿಯೂ ಜೋರಾಗಿ ಬೀಸುತ್ತಿದೆ. ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಚರ್ಮದ ಆರೈಕೆ ಮಾಡಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊರೆವ ಚಳಿ ಸಂಪೂರ್ಣ ಚಳಿಗಾಲದ ಅನುಭವ ನೀಡುತ್ತಿದೆ, ಜೊತೆಗೆ ಶೀತಗಾಳಿಯೂ ಜೋರಾಗಿ ಬೀಸುತ್ತಿದೆ. ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಚರ್ಮದ ಆರೈಕೆ ಮಾಡಬೇಕಾಗುತ್ತದೆ. 
ಹಾಗೆಂದ ಮಾತ್ರಕ್ಕೆ ಮನೆಯ ಒಳಗಡೆಯೇ  ರೂಮ್ ಹೀಟರ್ ಮುಂದೆಯೇ ಕುಳಿತಿರಬೇಕು ಎಂಬ ಅರ್ಥವಲ್ಲ, ಹೆಚ್ಚಿನ ಪ್ರಮಾಣದಲ್ಲಿ  ರೂಂ ಹೀಟರ್ ಬಳಸುವುದರಿಂದ ಚರ್ಮ ಒಣಗುವ ಸಾಧ್ಯತೆ ಹೆಚ್ಚು, ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಿ, ತಲೆನೋವಿಗೆ ಕಾರಣವಾಗುತ್ತದೆ ಎಂದು ಡಾ. ದಿಲೀಪ್ ಸಕ್ಸೇನಾ ಹೇಳಿದ್ದಾರೆ.
ಉತ್ತರ ಭಾರತದಲ್ಲಿ ಚಳಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಅತಿಯಾಗಿ ಬಿಸಿನೀರಿನ ಸ್ನಾನ ಮಾಡಲಾಗುತ್ತದೆ, ಇದು ಚರ್ಮದಲ್ಲಿನ ತೇವಾಂಶ ಆವಿಯಾಗಲು ಕಾರಣವಾಗುತ್ತದೆ, ಹೀಗಾಗಿ ಸ್ನಾನ ಮುಗಿದ ಕೂಡಲೇ ತ್ವಚೆಯ ಆರ್ದ್ರತೆ ಕಾಪಾಡುವುದು ಮುಖ್ಯವಾಗುತ್ತದೆ, ಇಲ್ಲವಾದರೆ ಚರ್ಮದಲ್ಲಿ ಬಿರುಕು ಉಂಟಾಗುತ್ತದೆ. ಹೀಗಾಗಿ ಅತಿ ಹೆಚ್ಚಿನ ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡುವುದಕ್ಕಿಂತ ಕಡಿಮೆ ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡಬೇಕು ಎಂದು ಗುರ್ ಗಾವ್ ಕಾಸ್ಮೆಟಿಕ್ ತಜ್ಞ ಹೇಳಿದ್ದಾರೆ.
ಒಂದು ವೇಳೆ ನಿಮಗೆ ತಣ್ಣೀರು ಸ್ನಾನ ಮಾಡುವ ಅಭ್ಯಾಸವಿದ್ದರೇ ಅದಕ್ಕಿಂತ ಉತ್ತಮ ಕೆಲಸ ಮತ್ತೊಂದಿಲ್ಲ, ಚಳಿಗಾಲವನ್ನು ಯಾವುದೇ ಸನ್ ಸ್ಕ್ರೀನ್ ಲೋಶನ್ ತಡೆಯುವುದಿಲ್ಲ, ಕ್ರೀಮ್ ಹಚ್ಚಿಕೊಂಡರೇ ಸೂರ್ಯನ ಕಿರಣಗಳು ಚರ್ಮಕ್ಕೆ ಉಂಟಾಗುವ ತೊಂದರೆ ತಪ್ಪಿಸುತ್ತದೆ ಎಂದು ಹಲವರು ತಪ್ಪು ತಿಳಿದಿರುತ್ತಾರೆ, ಇದಿ ಸುಳ್ಳು ಎಂದು ಹೇಳಿದ್ದಾರೆ,
ಬೇಸಿಗೆಯಲ್ಲಿ ಕುಡಿಯುವ ಹಾಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು, ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮಯಾದರೇ ದೇಹಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೆಚ್ಚುವರಿ ಕೇರ್ ಮಾಡಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com