ಬಿರು ಬಿಸಿಲಿನಲ್ಲಿ ತ್ವಚೆ ರಕ್ಷಣೆಗೆ ಇಲ್ಲಿವೆ ಕೆಲವು ಟಿಪ್ಸ್ ಗಳು

ಬೇಸಿಗೆ ಕಾಲ ಮತ್ತೆ ಬಂದಿದೆ. ತೆಳುವಿನ ದೇಹಕ್ಕೆ ಹಿತಕರವಾಗಿರುವ ಬಟ್ಟೆ ಧರಿಸಬೇಕು, ದ್ರವ ಪದಾರ್ಥ ಹೆಚ್ಚು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೇಸಿಗೆ ಕಾಲ ಮತ್ತೆ ಬಂದಿದೆ. ತೆಳುವಿನ ದೇಹಕ್ಕೆ ಹಿತಕರವಾಗಿರುವ ಬಟ್ಟೆ ಧರಿಸಬೇಕು, ದ್ರವ ಪದಾರ್ಥ ಹೆಚ್ಚು ಸೇವಿಸಲು ಮನಸ್ಸು ಹಾತೊರೆಯುವುದಲ್ಲದೆ ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಕೂಡ ಅತ್ಯಂತ ಮುಖ್ಯವಾಗುತ್ತದೆ.
ಸುಡುವ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಯುವತಿಯರು ಮತ್ತು ಮಹಿಳೆಯರು ಸನ್ ಸ್ಕ್ರೀನ್ ಮೊರೆ ಹೋಗುತ್ತಾರೆ. ಎಸ್ ಪಿಎಫ್ 30 ಸನ್ ಸ್ಕ್ರೀನ್ ಬಳಸಿದರೆ ಒಳ್ಳೆಯದು. ನಮ್ಮ ಚರ್ಮಕ್ಕೆ ಹೊಂದುವ ಸನ್ ಸ್ಕ್ರೀನ್ ಬಳಸಿದರೆ ಒಳ್ಳೆಯದು. ಎಣ್ಣೆ ತ್ವಚೆ ಇರುವವರಿಗೆ ಜೆಲ್ ಸನ್ ಸ್ಕ್ರೀನ್ ಉತ್ತಮ, ಒಣಚರ್ಮ ಇರುವವರಿಗೆ ಸನ್ ಸ್ಕ್ರೀನ್ ಉತ್ತಮ ಎನ್ನುತ್ತಾರೆ ಚರ್ಮ ತಜ್ಞೆ ಡಾ ಮೀರಾ ಜೇಮ್ಸ್.
ಬೇಸಿಗೆಯಲ್ಲಿ ಕನಿಷ್ಠವೆಂದರೂ ದಿನದಲ್ಲಿ ಎರಡು ಬಾರಿ ಸನ್ ಸ್ಕ್ರೀನ್ ಬಳಸಬೇಕು. ಪ್ರತಿ ಮೂರರಿಂದ ನಾಲ್ಕು ಗಂಟೆಯ ಅಂತರದಲ್ಲಿ ಹಚ್ಚಿದರೆ ಒಳ್ಳೆಯದು. ಹೊರಗೆ ಹೋಗುವ 10 ನಿಮಿಷಕ್ಕೆ ಮುನ್ನ ಹಚ್ಚಿ.
ಬೇಸಿಗೆಯಲ್ಲಿ ನೀರಿನ ಕ್ರೀಡೆಯಲ್ಲಿ ತೊಡಗಿಕೊಂಡಿರುವವರಿಗೆ ಅಕ್ವಾ ಜೆಲ್ ಸನ್ ಸ್ಕ್ರೀನ್ ಉತ್ತಮ. ಸೂರ್ಯನ ಬಿಸಿಲಿನಿಂದ ಚರ್ಮದ ರಕ್ಷಣೆಗೆ ವಿಟಮಿನ್ ಮಾತ್ರೆಗಳನ್ನು ಕೂಡ ತಜ್ಞರು ಶಿಫಾರಸು ಮಾಡುತ್ತಾರೆ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು ಎನ್ನುತ್ತಾರೆ ಮೀರಾ.
ಆದ್ರತೆಯಿಂದ ದೂರವಿರಿ: ನಿಮ್ಮ ಚರ್ಮ ಆದ್ರತೆಯಿಂದ ಕೂಡಿದ್ದರೆ ಸನ್ ಸ್ಕ್ರೀನ್ ಮಾಯಿಶ್ಚರೈಸರ್ ಬಳಸಿ, ಸ್ನಾನ ಮಾಡಿದ ತಕ್ಷಣ ಸನ್ ಸ್ಕ್ರೀನ್ ಬಳಸಿ, ಹಾಗೆಂದು ಪದೇ ಪದೇ ಮುಖ ತೊಳೆಯುವುದು ಒಳ್ಳೆಯದಲ್ಲ, ಇದರಿಂದ ಚರ್ಮ ಒಣವಾಗಬಹುದು.
ಮುಖ:

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com