ಖಿನ್ನತೆಯಿಂದ ಬಳಲುತ್ತಿರುವ ಹದಿಹರೆಯದವರಿಗೆ ನೀವು ಹೀಗೆ ಸಹಾಯ ಮಾಡಬಹುದು!

ಹದಿಹರೆಯದವರು ಖಿನ್ನತೆ ಸಹಜ. ನಾನಾ ಕಾರಣಗಳಿಂದ ಅವರು ಡಿಪ್ರೆಶನ್​ಗೆ ಒಳಗಾಗುತ್ತಾರೆ. ಸಣ್ಣ ಸಂಗತಿಗಳಿಗೂ ಖಿನ್ನತೆಗೆ ಒಳಗಾಗಿ ಏಕಾಂಗಿಯಾಗಿ ಇರಲು ಇಷ್ಟಪಡುತ್ತಾರೆ.ಇದರಿಂದಾಗಿ ಅಸಂತೋಷ,  ಆಯಾಸ, ದಣಿವು, ಹಸಿವು ಆಗದಿರುವುದು, ಅಸಹಾಯಕತೆ, ಭರವಸೆ ಕಳೆದುಕೊಳ್ಳುವುದು ಮತ್ತಿತರ ಖಿನ್ನತೆಯಿಂದ ಬಳಲುತ್ತಿರುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹದಿಹರೆಯದವರಲ್ಲಿ  ಖಿನ್ನತೆ ಸಹಜ. ನಾನಾ ಕಾರಣಗಳಿಂದ ಅವರು ಡಿಪ್ರೆಶನ್​ಗೆ ಒಳಗಾಗುತ್ತಾರೆ. ಸಣ್ಣ ಸಂಗತಿಗಳಿಗೂ ಖಿನ್ನತೆಗೆ ಒಳಗಾಗಿ ಏಕಾಂಗಿಯಾಗಿ ಇರಲು ಇಷ್ಟಪಡುತ್ತಾರೆ.ಇದರಿಂದಾಗಿ ಅಸಂತೋಷ,  ಆಯಾಸ, ದಣಿವು, ಹಸಿವು ಆಗದಿರುವುದು, ಅಸಹಾಯಕತೆ, ಭರವಸೆ ಕಳೆದುಕೊಳ್ಳುವುದು ಮತ್ತಿತರ ಖಿನ್ನತೆಯಿಂದ ಬಳಲುತ್ತಿರುತ್ತಾರೆ.

ನೀವು ಹದಿಹರೆಯದವರಾಗಿದ್ದು ಇಂತಹ ಖಿನ್ನತೆಯಿಂದ ಬಳಲುತ್ತಿದ್ದರೆ ದೆಹಲಿಯ ಪೋರ್ಟಿಸ್ ಹೆಲ್ತ್ ಕೇರ್ ನ ಮಾನಸಿಕ ಆರೋಗ್ಯ ಮತ್ತು ಮನೋಭಾವ ವಿಜ್ಞಾನಗಳ ಡಿಪಾರ್ಟ್ ಮೆಂಟಿನ ಮಾನಸಿಕ ಆರೋಗ್ಯದ ಮುಖ್ಯಸ್ಥ ಕಮ್ನಾ ಚಿಬ್ಬರ್ ನೀಡಿರುವ ಕೆಲವೊಂದು ಸಲಹೆ ಸೂಚನೆಗಳನ್ನು ಅನುಕರಿಸಿದರೆ ಒಳ್ಳೆಯದಾಗುತ್ತದೆ. 

ತಿಳುವಳಿಕೆ ಮೂಡಿಸಲು ನೆರವಾಗಿ:  ಖಿನ್ನತೆ ಎಂಬುದು ಮಾನಸಿಕ ರೋಗವಾಗಿದ್ದು, ನರಗಳ ಅಸಮತೋಲನದಿಂದ ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ ಎಂಬುದನ್ನು ಹದಿಹರಯದವರಲ್ಲಿ ತಿಳುವಳಿಕೆ ಮೂಡಿಸಬೇಕು.ಇದು ದುರ್ಬಲತೆ ಅಥವಾ ವರ್ತನೆಯಲ್ಲಿ ಕುಂಠಿತವಾಗಲು ಕಾರಣ ಅಲ್ಲ. ದೈಹಿಕ ಆರೋಗ್ಯ ಕಾಯಿಲೆಯಂತೆ ಬೇರೆೊಬ್ಬರ ಮೇಲೆ ಪರಿಣಾಮ ಬೀರಬಹುದು ಅದಕ್ಕೆ ಚಿಕಿತ್ಸೆಯ ಅಗತ್ಯವಿರುತ್ತದೆ 

ಹದಿಹರೆಯದವರು ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ: ಎನು ಆಗುತ್ತಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ಹದಿಹರೆಯದವರು ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕಾಗುತ್ತದೆ. ನಕಾರಾತ್ಮಕ ತೀರ್ಮಾನಗಳು , ಅಭಿಪ್ರಾಯಗಳ ಕೊರತೆಯಿಂದಾಗಿ ತಮ್ಮನ್ನು ದುರ್ಬಲ ಎಂದುಕೊಂಡಿರುತ್ತಾರೆ. ಹದಿಹರೆಯದವರು ಸೇರಿದಂತೆ ವಿಶ್ವದಾದ್ಯಂತ 300, 000, 000 ಜನರು ಖಿನ್ನತೆಯಂತಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಸಬೇಕಾಗಿದೆ. 

ತ್ವರಿತವಾಗಿ ಪರಿಹಾರವನ್ನು ನೀಡಬೇಡಿ: ಖಿನ್ನತೆಯಿಂದ ಬಳಲುತ್ತಿರುವ ಹದಿಹರೆಯದವರಿಗೆ ಸಾಮಾನ್ಯವಾಗಿ ತ್ವರಿತವಾಗಿ ಪರಿಹಾರವನ್ನು ನೀಡಬಾರದು ಏಕೆಂದರೆ  ಮಧ್ಯದಲ್ಲಿ ಮನಸ್ಸು ಬೇರೆ ಕಡೆ ತಿರುಗದಂತೆ ನೋಡಿಕೊಳ್ಳಬೇಕಾಗುತ್ತದೆ. 

ಏನು ಆಗುತ್ತಿದೆ ಎಂಬುದನ್ನು ಕೇಳಿ: ಹದಿಹರೆಯದವರ ಯೋಚನೆ ಹಾಗೂ ಭಾವನೆಗಳನ್ನು ಮುಕ್ತವಾಗಿ ಕೇಳಿ ತಿಳಿಯಬೇಕು. ಅವರ ಮನಸ್ಸಿನೊಳಗೆ ಏನೆಲ್ಲಾ ಆಗುತ್ತಿದೆ ಎಂಬುದನ್ನು ಕೇಳಬೇಕು. ಆದರೆ, ಅದನ್ನು ಪ್ರಚೋದಿಸಬಾರದು. 

ನಿಮ್ಮ ತಿಳುವಳಿಕೆಯನ್ನು ಅರ್ಥಮಾಡಿಸಿ ಬೆಂಬಲಿಸಿ: ಹದಿಹರೆಯದವರನ್ನು ನಿಮ್ಮ ತಿಳುವಳಿಕೆಯನ್ನು ಅರ್ಥಮಾಡಿಸಬೇಕು ಮತ್ತು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂಬಂತೆ ಅವರಲ್ಲಿ ಮನೋಭಾವ ಮೂಡಿಸಬೇಕಾಗುತ್ತದೆ. 

ಪ್ರೋತ್ಸಾಹಿಸಿ ಆದರೆ ಹೀಯಾಳಿಸಬೇಡಿ:  ಹದಿಹರೆಯದವರ ಆಸಕ್ತಿ ಹಾಗೂ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಆದರೆ, ಅವರನ್ನು ಹೀಯಾಳಿಸಬೇಡಿ. ಉಪಾಯದಿಂದ ಅವರ ಮನಸ್ಸನ್ನು ಬದಲಾವಣೆ ಮಾಡುವ ಮೂಲಕ ಖಿನ್ನತೆಯಿಂದ ಹೊರಗೆ ತರಬಹುದಾಗಿದೆ. 

ಗೆಳೆತನ ಬೆಳೆಸಲು ಮನವಿ ಮಾಡಿಕೊಳ್ಳಿ: ಖಿನ್ನತೆಯಿಂದ ಬಳಲುತ್ತಿರುವವರು ವಿಶೇಷವಾಗಿ ಸ್ನೇಹಿತರೊಂದಿಗಿನ  ಸಂಬಂಧದೊಂದಿಗೆ ವಿರಸ ಹೊಂದಿರುತ್ತಾರೆ. ಅಂತವರೊಂದಿಗೆ ಗೆಳೆತನ ಬೆಳೆಸಲು ಮನವಿ ಮಾಡಿಕೊಳ್ಳಬೇಕಾಗುತ್ತದೆ. 

ಸಹಾಯ ಕೋರಲು ಪ್ರೋತ್ಸಾಹಿಸಿ: ಖಿನ್ನತೆಯಿಂದ ಬಳಲುತ್ತಿರುವವರಿಗೆ ಸಹಾಯ ಕೋರುವಂತೆ ಪ್ರೋತ್ಸಾಹಿಸುವುದು ಮುಖ್ಯವಾಗಿರುತ್ತದೆ. ಇದರಿಂದಾಗಿ  ಮನೋಶಾಸ್ತ್ರಜ್ಞರು ಅಥವಾ ಥೆರಪಿಸ್ಟ್ ಗಳಿಂದ  ಸೂಕ್ತ ಸಲಹೆ ಚಿಕಿತ್ಸೆ ಪಡೆಯಲು ನೆರವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com