ಲಾಕ್ ಡೌನ್ ಕಾರಣದಿಂದ ನಿದ್ರೆಯ ಪ್ರಮಾಣ, ಗುಣಮಟ್ಟದಲ್ಲಿ ಬದಲಾವಣೆ: ಅಧ್ಯಯನ

ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್  ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ.
ಏಮ್ಸ್, ಹೃಷಿಕೇಶ
ಏಮ್ಸ್, ಹೃಷಿಕೇಶ
Updated on

ಡೆಹ್ರಡೂನ್: ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್  ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ.

ಲಾಕ್ ಡೌನ್ ಜಾರಿ ಹಾಗೂ ಲಾಕ್ ಡೌನ್ ನಂತರ ನಿದ್ರೆಯ ಗುಣಮಟ್ಟದಲ್ಲಿನ ಬದಲಾವಣೆ ಬಗ್ಗೆ ಕಳಪೆ ಗುಣಮಟ್ಟದ ನಿದ್ರೆ ಮಾಡಿದವರು, ಎರಡು ಅವಧಿಯಲ್ಲಿ ಉತ್ತಮ ಗುಣಮಟ್ಟದ ನಿದ್ರೆ ಮಾಡಿದವರು, ಕೊರತೆ ಅನುಭವಿಸಿದವರು ಅಥವಾ ಸುಧಾರಣೆಯಾದವರು ಎಂಬ ನಾಲ್ಕು ಹಂತಗಳಲ್ಲಿ ವಿಶ್ಲೇಷಣೆ ಮಾಡಲಾಗಿದೆ ಎಂದು ಹೃಷಿಕೇಶದ ಏಮ್ಸ್ ಆಸ್ಪತ್ರೆಯ ನ್ಯೂರೋಲಾಜಿ ಮತ್ತು ಮಾನೋಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ ಗುಪ್ತ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ  ಪ್ರಸ್ತುತ ಮತ್ತು ಹಿಂದೆ ಮಾಡುತ್ತಿದ್ದ ನಿದ್ರೆಯ ವೇಳಾಪಟ್ಟಿ, ದಿನಚರಿ, ಕೆಲಸದ ರೀತಿ ಮತ್ತಿತರ ಪ್ರಶ್ನಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದು, ಭಾರತ, ಯುಎಸ್ ಎ, ಇಂಗ್ಲೆಂಡ್, ಯುಎಇ, ಕೆನಡಾ, ಸಿಂಗಾಪೂರ್, ಜರ್ಮನಿ, ಆಸ್ಟ್ರೇಲಿಯಾ, ಕುವೈತ್ ಮತ್ತು ಕತ್ತಾರ್ ಸೇರಿದಂತೆ ಒಟ್ಟು 11 ರಾಷ್ಟ್ರಗಳಿಂದ ಭಾಗವಹಿಸಿದ್ದವರಿಂದ ಒಟ್ಟು 958 ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದೆ.

ಸರ್ವೇ ಪ್ರಕಾರ ಲಾಕ್ ಡೌನ್ ಮುಂಚಿತ ದಿನಗಳಿಗೆ ಹೋಲಿಸಿದರೆ ಲಾಕ್ ಡೌನ್ ವೇಳೆಯಲ್ಲಿ ರಾತ್ರಿ ಮಲಗುವ ಸಮಯ ಹಾಗೂ ಬೆಳಗ್ಗೆ ಎಳುವ ಸಮಯದಲ್ಲಿ ಬದಲಾವಣೆಯಾಗಿದೆ. ರಾತ್ರಿ ಮಲಗುವ ಸಮಯ ಕಡಿಮೆಯಾಗಿದ್ದು, ಹಗಲು ಹೊತ್ತಿನಲ್ಲಿ ಮಲಗುವುದು ಹೆಚ್ಚಾಗಿ ಕಂಡುಬಂದಿದೆ. ಇದು ವೃತ್ತಿಯಾಧಾರಿತ ಗುಂಪಿನ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಉಂಟು ಮಾಡಿದೆ. ಆದರೆ, ಆರೋಗ್ಯ ವೃತ್ತಿವರ್ಗದವರನ್ನು ಹೊರತುಪಡಿಸಿದಂತೆ ಇತರೆ ಕೆಲಸ ಮಾಡುವ ವ್ಯಕ್ತಿಗಳ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ.  ಎಲ್ಲಾ ವರ್ಗದ ಜನರಲ್ಲಿ ನಿದ್ರೆಯ ಗುಣಮಟ್ಟ ಕ್ಷೀಣಿಸಿದೆ. ಮಾನಸಿಕ ಖಿನ್ನತೆಯಿಂದಾಗಿ ನಿದ್ರೆಯ ಅವಧಿ ಕಡಿತವಾಗಿದೆ ಎಂಬುದನ್ನು
ಅಧ್ಯಯನದಲ್ಲಿ ಹೇಳಲಾಗಿದೆ.

ಲಾಕ್ ಡೌನ್ ನಂತರ ನಿದ್ರೆಯ ರಾತ್ರಿ ಮಲಗುವ ಸಮಯ ಹಾಗೂ ಏದ್ದೇಳುವ ಸಮಯದಲ್ಲಿ ಬದಲಾವಣೆಯಾಗಿದೆ. ರಾತ್ರಿ ನಿದ್ರೆಯ ಸಮಯದಲ್ಲಿ (ಶೇ.16.1) ರಷ್ಟು ಕಡಿಮೆಯಾಗಿದ್ದರೆ ಬೆಳಗ್ಗೆ ಏಳುವ ಸಮಯದಲ್ಲಿ (ಶೇ. 18.1) ರಷ್ಟು ಹೆಚ್ಚಾಗಿರುವುದು ಅಧ್ಯಯನದ ಫಲಿತಾಂಶದಲ್ಲಿ ಕಂಡುಬಂದಿದೆ.

ವಿವಿಧ ವೃತ್ತಿವರ್ಗ ಹಾಗೂ ವಯೋಮಾನದವರು ಈ ಸರ್ವೇಯಲ್ಲಿ ಪಾಲ್ಗೊಂಡಿದ್ದು, ಶೇ.9 ರಷ್ಟು ಧೂಮಪಾನಿಗಳು ಹಾಗೂ ಶೇ. 10. 8 ರಷ್ಟು ಮಧ್ಯಪಾನಿಗಳು ಶೇ. 1.1 ರಷ್ಟು ಮಾದಕ ವಸ್ತು ಸೇವಿಸುವವರು  ಕೂಡಾ ಲಾಕ್ ಡೌನ್ ಅವಧಿಯಲ್ಲಿ ಶೇ.14 ರಷ್ಟು ನಿದ್ರೆಯ ಅವಧಿಯಲ್ಲಿ ಕಡಿಮೆಯಾಗಿದೆ ಎಂದು ಹೇಳಿದ್ದರೆ,  ಶೇ.3.1 ರಷ್ಟು ಮಂದಿ ನಿದ್ರೆಯ ಅವಧಿ ಹೆಚ್ಚಾಗಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com