ವ್ಯಕ್ತಿಗತ ಅಂತರ ಪಾಲಿಸದ ಕಡೆ 35 ಪಟ್ಟು ಹೆಚ್ಚಿನ ಕೋವಿಡ್-19 ಪ್ರಕರಣಗಳು: ಅಧ್ಯಯನ

ಕೊರೋನಾವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಾಮಾಜಿಕ ಅಂತರ ನಿಯಮ ಪ್ರಾಮುಖ್ಯತೆ ಕುರಿತ ಹೊಸ ಅಧ್ಯಯನವೊಂದು ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ವೊಂದರಲ್ಲಿ ಪ್ರಕಟಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಕೊರೋನಾವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಸಾಮಾಜಿಕ ಅಂತರ ನಿಯಮ ಪ್ರಾಮುಖ್ಯತೆ ಕುರಿತ ಹೊಸ ಅಧ್ಯಯನವೊಂದು ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ವೊಂದರಲ್ಲಿ ಪ್ರಕಟಗೊಂಡಿದೆ.

ಅಧ್ಯಯನದ ಪ್ರಕಾರ, ಸಾಮಾಜಿಕ ಅಂತರ ನಿಯಮ ಪಾಲಿಸದ ಅಮೆರಿಕಾದ ಪ್ರದೇಶಗಳಲ್ಲಿ  35 ಪಟ್ಟು ಹೆಚ್ಚಿನ ಕೊರೋನಾವೈರಸ್ ಪ್ರಕರಣಗಳು ಕಂಡುಬಂದಿವೆ.

ಕೆಂಟುಕಿ, ಲೂಯಿಸ್ ವಿಲ್ಲೆ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯಗಳ ಸಂಶೋಧಕರಿಂದ ಈ ಅಧ್ಯಯನ ನಡೆಸಲಾಗಿದ್ದು, ಮಾರ್ಚ್ 1 ಹಾಗೂ ಏಪ್ರಿಲ್ 27 ರ ನಡುವೆ ಒಟ್ಟು 1 ಮಿಲಿಯನ್ ಕೊರೋನಾವೈರಸ್ ಪ್ರಕರಣಗಳು ಖಚಿತಪಟ್ಟ ನಿದರ್ಶನಗಳು ವರದಿಯಾಗಿವೆ ಎಂದು ವಾಷಿಂಗ್ಟನ್ ಪೋ್ಸ್ಟ್ ವರದಿ ಮಾಡಿದೆ. 

ಸಾಮಾಜಿಕ ಅಂತರ ನಿಯಮ ಪಾಲಿಸಿದ ಪ್ರದೇಶಗಳಲ್ಲಿ ಕೋವಿಡ್- 19 ಬೆಳವಣಿಗೆ ದರ ಕಡಿಮೆಯಾಗಿದೆ. ಅಲ್ಲಿ ಧೀರ್ಘ ಕಾಲದಿಂದ  ಸಾಮಾಜಿಕ ನಿಯಮ ಪಾಲಿಸಲಾಗುತಿತ್ತು ಎಂದು ವರದಿ ತಿಳಿಸಿದೆ. 

ಸಾಮಾಜಿಕ ನಿಯಮ ಪಾಲನೆಗಾಗಿ 16 ದಿನಗಳಿಂದ 20 ದಿನಗಳವರೆಗೂ ನಡೆದ ಅಧ್ಯಯನದಂತೆ, ಸೋಂಕಿನ ದೈನಂದಿನ ದರವು ಶೇ. 9ಕ್ಕಿಂತ ಕಡಿಮೆಯಾಗಿದೆ.ಎಲ್ಲಿಯೂ ಹೊರಗೆ ಹೋಗದೆ ಮನೆಯಲ್ಲಿ ಇರುವುದು, ಶಾಲೆಗಳು ಬಂದ್, ಜಿಮ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಬಾಗಿಲು ಬಂದ್, ದೊಡ್ಡ ಕಾರ್ಯಕ್ರಮಗಳ ರದ್ದು ಮತ್ತಿತರ ಸಾಮಾಜಿಕ ಅಂತರ ನಿಯಮ ಪಾಲಿಸುವ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 

ಸ್ವಯಂ ಪ್ರೇರಿತವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡ ಪ್ರದೇಶಗಳಲ್ಲಿ 10 ಪಟ್ಟು ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದರೆ , ಯಾವುದೇ ನಿಯಮ ಪಾಲಿಸದ ಪ್ರದೇಶಗಳಲ್ಲಿ ಇದರ ಸಂಖ್ಯೆ 35 ಪಟ್ಟು ಹೆಚ್ಚಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ. 

ಆದಾಗ್ಯೂ, ನೈಜ ಸಾಮಾಜಿಕ ಅಂತರದ ಬಗ್ಗೆ ಅಧ್ಯಯನ ಗಮನ ಹರಿಸಿಲ್ಲ, ಆದರೆ, ಮಾಹಿತಿ ಮತ್ತು ಶಿಫಾರಸುಗಳನ್ನು ಒದಗಿಸುವುದಕ್ಕೆ  ಹೋಲಿಸಿದರೆ ಸಾಮಾಜಿಕ ದೂರವನ್ನು ಉತ್ತೇಜಿಸುವ ಸರ್ಕಾರದ ನಿರ್ಬಂಧಗಳು ಕಡಿಮೆ ಎನ್ನಿಸುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com