ಅವಧಿಪೂರ್ವ ಶಿಶುಗಳ ಆರೈಕೆ ಮಾಡುವುದು ಹೇಗೆ ಎಂಬ ಚಿಂತೆಯೇ? ಇಲ್ಲಿದೆ ಕೆಲವು ಸಲಹೆ

ಪೋಷಕರಾಗಿ ನವಜಾತ ಶಿಶುಗಳನ್ನು, ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ನಿಜಕ್ಕೂ ಸ್ವಲ್ಪ ಸವಾಲಿನ ಕೆಲಸ, ನವಜಾತ ಶಿಶು ಮನೆಗೆ ಬಂದಾಗ ಏನು ಮಾಡಬೇಕು, ಯಾವ ರೀತಿ ತಯಾರಾಗಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ. ಸರಿಯಾದ ಯೋಜನೆ ರೂಪಿಸಿಕೊಂಡರೆ ಪೋಷಕರಿಗೆ, ಮನೆಯವರಿಗೆ ಕಷ್ಟವಾಗುವುದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೋಷಕರಾಗಿ ಅವಧಿಪೂರ್ವವಾಗಿ ಜನಿಸಿದ ಶಿಶುಗಳನ್ನು, ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ನಿಜಕ್ಕೂ ಸ್ವಲ್ಪ ಸವಾಲಿನ ಕೆಲಸ, ನವಜಾತ ಶಿಶು ಮನೆಗೆ ಬಂದಾಗ ಏನು ಮಾಡಬೇಕು, ಯಾವ ರೀತಿ ತಯಾರಾಗಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ. ಸರಿಯಾದ ಯೋಜನೆ ರೂಪಿಸಿಕೊಂಡರೆ ಪೋಷಕರಿಗೆ, ಮನೆಯವರಿಗೆ ಕಷ್ಟವಾಗುವುದಿಲ್ಲ.

1. ಮಗುವಿಗೆ ಹಾಲುಣಿಸುವುದು: ನವಜಾತ ಶಿಶುವಿನಿಂದ ಹಿಡಿದು ಕನಿಷ್ಠ 2 ವರ್ಷಗಳಾಗುವವರೆಗೆ ಮಕ್ಕಳಿಗೆ ತಾಯಿಹಾಲು ಶ್ರೇಷ್ಠ. ನಿಪ್ಪಲ್, ಬಾಟಲ್ ಗಳಲ್ಲಿ ಕುಡಿಸುವುದಕ್ಕಿಂತ ತಾಯಿಯ ಎದೆಹಾಲೇ ಆರೋಗ್ಯ ದೃಷ್ಟಿಯಿಂದ ಉತ್ತಮ. ತಾಯಿ-ಮಗುವಿನ ಆರೋಗ್ಯ ನೋಡಿಕೊಂಡು ಮಗು ಯಾವ ರೀತಿ ಎದೆಹಾಲನ್ನು ಕುಡಿಯುತ್ತದೆ ಎಂಬುದು ಮುಖ್ಯವಾಗುತ್ತದೆ. ಕೆಲವು ಶಿಶುಗಳು ಬೇಗನೆ ಎದೆಹಾಲು ಸೇವಿಸಬಹುದು, ಇನ್ನು ಕೆಲವು ಶಿಶುಗಳಿಗೆ ಸಮಯ ಬೇಕಾಗಬಹುದು. ಮಗು ಸರಿಯಾಗಿ ಎದೆಹಾಲು ಕುಡಿಯುತ್ತಿಲ್ಲ ಎಂದು ಆತಂಕಗೊಳ್ಳಬೇಕಾಗಿಲ್ಲ. ದಿನಗಳೆದಂತೆ ಸರಿಹೋಗುತ್ತದೆ.

2. ಸೋಂಕುಗಳು: ನವಜಾತ ಶಿಶುಗಳಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಸೋಂಕು ಬೇಗನೆ ತಗುಲಬಹುದು. ಮಗುವನ್ನು ಮುಟ್ಟುವ ಮೊದಲು, ಹಾಲುಣಿಸುವ ಮೊದಲು, ನೋಡಿಕೊಳ್ಳುವವರು, ಮನೆಗೆ ಬರುವವರು ಸ್ವಚ್ಛತೆ ಕಾಪಾಡಿಕೊಂಡಷ್ಟೂ ಉತ್ತಮ. ಲಸಿಕೆಗಳಿಗೆ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಸಲಹೆ ಕೇಳಬೇಕು.

3. ತಾಪಮಾನ ನಿಯಂತ್ರಣ: ನವಜಾತ ಶಿಶುಗಳು ಮಲಗುವ ಕೋಣೆಯ ತಾಪಮಾನ, ಸ್ವಚ್ಛತೆ, ಗಾಳಿ, ಬೆಳಕು ಬಗ್ಗೆ ಆದ್ಯತೆ ನೀಡಿ. ತುಂಬ ಶೀತ, ತುಂಬ ಉಷ್ಣತೆ ಇರಬಾರದು. 26 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಉಷ್ಣಾಂಶ ಇದ್ದರೆ ಅನುಕೂಲ. ಮಗು ಸರಿಯಾಗಿ ತೂಕ ಬರುವವರೆಗೆ ವೈದ್ಯರು ನೀರಿನಲ್ಲಿ ಸ್ನಾನ ಮಾಡಿಸಬೇಡಿ ಎನ್ನಬಹುದು. ತೈಲದಿಂದ ಮಗುವಿನ ದೇಹಕ್ಕೆ ಮಸಾಜ್ ಮಾಡಿದರೆ ಬೆಳವಣಿಗೆಗೆ, ಮಗು ಚೆನ್ನಾಗಿ ನಿದ್ದೆ ಮಾಡಲು ತುಂಬಾ ಒಳ್ಳೆಯದು.

4. ಕಂಗರೂ ಮದರ್ ಕೇರ್(ಕೆಎಂಸಿ): ತಾಯಿ-ಮಗುವಿನ ಮಧ್ಯೆ ಬಿಸಿಯಪ್ಪುಗೆ ತುಂಬಾ ಒಳ್ಳೆಯದು. ಮಗುವಿನ ಬೆಳವಣಿಗೆಗೆ, ತೂಕ ಹೆಚ್ಚಾಗಲು, ಉತ್ತಮ ನಿದ್ದೆ. ತಾಯಿ-ಮಗುವಿನ ಸಂಬಂಧ ವೃದ್ಧಿಗೆ ಒಳ್ಳೆಯದು. ಅದಕ್ಕೆ ತಾಯಿ ಹಾಲುಣಿಸುವುದು ಮುಖ್ಯವಾಗುತ್ತದೆ. ಮಗುವಿನ ತಂದೆ ಕೂಡ ಈ ಬಿಸಿಯಪ್ಪುಗೆ, ಪ್ರೀತಿ, ವಾತ್ಸಲ್ಯವನ್ನು ಮಗುವಿನ ಮೇಲೆ ತೋರಿಸುತ್ತಿರಬೇಕಾಗುತ್ತದೆ.ಮಗುವಿಗೆ ಸ್ನಾನವಾದ ತಕ್ಷಣ, ಶೀತ ರಾತ್ರಿಗಳಲ್ಲಿ ತಂದೆ-ತಾಯಿ ಹೀಗೆ ಮಾಡುತ್ತಿರಬೇಕು.

5. ಉಸಿರಾಟದ ತೊಂದರೆ: ಕೆಲವು ನವಜಾತ ಶಿಶುಗಳಲ್ಲಿ ಉಸಿರಾಟದ ತೊಂದರೆಯಿರುತ್ತದೆ, ಹುಟ್ಟಿ ಕೆಲ ದಿನಗಳವರೆಗೆ ಮುಂದುವರಿಯಬಹುದು. ಆಗ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಮಗು ನಿದ್ದೆ ಮಾಡುವಾಗ ಅದರ ಕುತ್ತಿಗೆ ಮತ್ತು ತಲೆ ಯಾವ ರೀತಿ ಇರುತ್ತದೆ, ಹೇಗಿರಬೇಕು ಎಂದು ನೋಡಿಕೊಳ್ಳಿ. ಮಗುವಿಗೆ ಹಾಲುಣಿಸುವಾಗ ಗಮನ ಕೊಡಬೇಕು. ತುಂಬಾ ಮೃದುವಾದ ಬೆಡ್, ತಲೆದಿಂಬು ಮತ್ತು ಸಡಿಲ ಬ್ಲಾಂಕೆಟ್ ಗಳನ್ನು ಬಳಸುವುದು ಬೇಡ. ನವಜಾತ ಶಿಶುವಿನ ಅವಧಿಯಲ್ಲಿ ಮತ್ತು ಆರಂಭಿಕ ಶೈಶವಾವಸ್ಥೆಯಲ್ಲಿ ತಾಯಿ, ತಂದೆಯ ಅಥವಾ ಹಿರಿಯರ ಹೊಟ್ಟೆಯ ಮೇಲೆ ಮಗು ಮಲಗುವುದು ಸೂಕ್ತವಲ್ಲ.

6. ಅಪಾಯ ಸೂಚನೆಗಳು: ಮಗು ಏನೂ ತಿನ್ನದಿರುವುದು, ಆಲಸ್ಯ, ಉಸಿರಾಟದ ತೊಂದರೆ, ಸೆಳವು ಅಥವಾ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಅಸಮರ್ಥತೆಯಂತಹ ಚಿಹ್ನೆಗಳನ್ನು ತೋರಿಸಿದರೆ ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com