ಲಾಕ್‌ಡೌನ್ ವೇಳೆ ವ್ಯಾಯಾಮ ಮಾಡಿ, ಇಲ್ಲದಿದ್ದರೆ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ- ವೈದ್ಯರ ಸಲಹೆ

ಲಾಕ್ ಡೌನ್ ನಂತಹ ಧೀರ್ಘಾವಧಿ ವೇಳೆಯಲ್ಲಿ ದೈಹಿಕ ವ್ಯಾಯಾಮ ಮಾಡದಿದ್ದರೆ ಇನ್ನಿತರ ಆರೋಗ್ಯದ ಸಮಸ್ಯೆಗಳ ಜೊತೆಗೆ ಮೂಳೆ ಹಾಗೂ ಕೀಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ
ಜಿಮ್ ನಲ್ಲಿ ಬೆವರು ಸುರಿಸುತ್ತಿರುವ ಯುವಕರು
ಜಿಮ್ ನಲ್ಲಿ ಬೆವರು ಸುರಿಸುತ್ತಿರುವ ಯುವಕರು

ನವದೆಹಲಿ: ಲಾಕ್ ಡೌನ್ ನಂತಹ ಧೀರ್ಘಾವಧಿ ವೇಳೆಯಲ್ಲಿ ದೈಹಿಕ ವ್ಯಾಯಾಮ ಮಾಡದಿದ್ದರೆ ಇನ್ನಿತರ ಆರೋಗ್ಯದ ಸಮಸ್ಯೆಗಳ ಜೊತೆಗೆ ಮೂಳೆ ಹಾಗೂ ಕೀಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ.

ಜನರು ತಮ್ಮ ಮನೆಯಲ್ಲಿಯೇ ಇರುವುದರಿಂದ ಸ್ನಾಯುಗಳು ಮತ್ತು ಮೂಳೆಗಳು ಸಾಕಷ್ಟು ಪ್ರಚೋದನೆ ಪಡೆಯುತ್ತಿಲ್ಲ.ಈ ಅವಧಿಯು ದೀರ್ಘಕಾಲ ಇರುವ ನಿರೀಕ್ಷೆಯಂತೆ ಇದು ಅವರ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು,  ನಮ್ಮ ಇತರ ಅಗತ್ಯಗಳ ಜೊತೆಗೆ ಮೂಳೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಸಪ್ದರ್ ಜಂಗ್ ಆಸ್ಪತ್ರೆಯ ಸ್ಪೋರ್ಟ್ಸ್ ಇಂಜುರಿ ಸೆಂಟರಿ ಮುಖ್ಯಸ್ಥ ಡಾ. ರಾಜೇಂದ್ರ ಆರ್ಯ ಹೇಳಿದ್ದಾರೆ.

ಲಾಕ್ ಡೌನ್ ಮುಂದುವರೆದರೆ ಹಿರಿಯ ನಾಗರಿಕರು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ತೊಂದರೆ ಎದುರಿಸಬೇಕಾಗಿದ್ದು, ಕಡ್ಡಾಯವಾಗಿ ಮಾಡುವ ಮೂಲಕ ಚಟುವಟಿಕೆಯಿಂದ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ. 

ನಿಷ್ಕ್ರೀಯತೆಯಿಂದ ಮೂಳೆಯ ಸಮಸ್ಯೆ ಮಾತ್ರವಲ್ಲದೆ, ಮಧುಮೇಹ, ಹೃದಯ ಸಂಬಂಧಿ, ಅಧಿಕ ಒತ್ತಡ, ಮಾನಸಿಕ ಆರೋಗ್ಯ ಮತ್ತಿತರ ಸಮಸ್ಯೆಗಳು ಉಂಟಾಗಬಹುದೆಂದು ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಮೂಳೆ ತಜ್ಞ ಡಾ. ಸಿ. ಎನ್. ಯಾದವ್ ಹೇಳಿದ್ದಾರೆ.

ಮೂಳೆಗಳು ಹಾಗೂ ಸ್ನಾಯುಗಳು ಬಲಗೊಳ್ಳಲು ವ್ಯಾಯಾಮ ಅಗತ್ಯ, ಲಾಕ್ ಡೌನ್ ವೇಳೆಯಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ಯಾದವ್ ತಿಳಿಸಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿದ್ದರೆ ಪ್ರತಿದಿನ 20 ನಿಮಿಷದಿಂದ 1 ಗಂಟೆಯವರೆಗೂ  ಯೋಗ, ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಬೇಕಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com