ಕೋವಿಡ್ ಕಾಲದಲ್ಲಿ ಕೆಲಸ ಹೋಯ್ತಾ? ಇಲ್ಲಿದೆ ನಿಮಗೆ ಉಚಿತ ಜಾಬ್ ಪೋರ್ಟಲ್ ವಿವರ

ಬಿಜ್ನಿಸ್(Bijnis) ಹೆಸರಿನ ಇಕಾಮರ್ಸ್ ಕಂಪನಿ ಮಾಲೀಕರಾದ ಸುಯಶ್  ಜೈನ್ (ಪೆಟ್ರೋಲಿಯಂ ಆಂಡ್ ಎನರ್ಜಿಸ್ಟಡೀಸ್ ವಿಶ್ವವಿದ್ಯಾಲಯದ ಪದವೀಧರ) ಮತ್ತು ರಜತ್ ಅಗರ್ವಾಲ್ (ಐಎಂಟಿ ಗಾಜಿಯಾಬಾದ್ ಪದವೀಧರ) ತಮ್ಮ ಕಂಪನಿಗೆ ಫೀಲ್ಡ್ ಸೇಲ್ಸ್ ರೆಪ್ರೆಸೆಂಟ್ಟಿವ್ಸ್ ಗಳ ನೇಮಕ ಮಾಡಿಕೊಳ್ಲಲು ಮುಂದಾದಾಗ ಸೂಕ್ತ ಅಭ್ಯರ್ಥಿಗಳು ಸಿಕ್ಕದೆ ಭಾರಿ ತೊಂದರೆಗೆ ಒಳಗಾಗಿದ್ದರು.

Published: 19th July 2020 10:37 AM  |   Last Updated: 19th July 2020 10:37 AM   |  A+A-


Posted By : Raghavendra Adiga
Source : The New Indian Express

ಬಿಜ್ನಿಸ್(Bijnis) ಹೆಸರಿನ ಇಕಾಮರ್ಸ್ ಕಂಪನಿ ಮಾಲೀಕರಾದ ಸುಯಶ್  ಜೈನ್ (ಪೆಟ್ರೋಲಿಯಂ ಆಂಡ್ ಎನರ್ಜಿಸ್ಟಡೀಸ್ ವಿಶ್ವವಿದ್ಯಾಲಯದ ಪದವೀಧರ) ಮತ್ತು ರಜತ್ ಅಗರ್ವಾಲ್ (ಐಎಂಟಿ ಗಾಜಿಯಾಬಾದ್ ಪದವೀಧರ) ತಮ್ಮ ಕಂಪನಿಗೆ ಫೀಲ್ಡ್ ಸೇಲ್ಸ್ ರೆಪ್ರೆಸೆಂಟ್ಟಿವ್ಸ್ ಗಳ ನೇಮಕ ಮಾಡಿಕೊಳ್ಲಲು ಮುಂದಾದಾಗ ಸೂಕ್ತ ಅಭ್ಯರ್ಥಿಗಳು ಸಿಕ್ಕದೆ ಭಾರಿ ತೊಂದರೆಗೆ ಒಳಗಾಗಿದ್ದರು.

"ನಾವು ಎಲ್ಲಾ ಹೆಸರಾಂತ ಜಾಬ್ ಸೈಟ್ ಗಳಲ್ಲಿ ಹುಡುಕಿದ್ದೇವೆ, ಆದರೆ ಪಟ್ಟಿ ಮಾಡಲಾದ ಸಿವಿಗಳಾವುದೂ ನಮಗೆ ಇಷ್ಟವಾಗಿರಲಿಲ್ಲ." ಎಂದು ಜೈನ್ ಹೇಳುತ್ತಾರೆ.

"ಜೊತೆಗೆ, ಹಲವಾರು ಫೀಲ್ಡ್ ವರ್ಕರ್ ಗಳನ್ನು  ದೊಡ್ಡ ಕಂಪನಿಗಳಿಂದ ವಜಾಗೊಳಿಸಲಾಗುತ್ತಿದೆ ಎಂದು ನಾನು ತಿಳಿದಿದ್ದೆ.  ಆದರೆ ಅವರಾರೂ ಜಾಬ್ ಪೋರ್ಟಲ್ ಗಳಲ್ಲಿ ನೊಂದಾಯಿಸಿಲ್ಲ. ಹಾಗಾಗಿ ನಾನು ಜಾಬ್ ಪೋರ್ಟಲ್ ನಿಂದ ಹೊರಗೆ ಅಭ್ಯರ್ಥಿಗಳ ಹುಡುಕಾಟಕ್ಕೆ ನಿರ್ಧರಿಸಿದೆ. " ಅವರು ಹೇಳಿದರು.

"ಏಪ್ರಿಲ್ 27 ರಂದು ಭಾರತೀಯ ಕಂಪನಿಯೊಂದು 300 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ಸುದ್ದಿಯೊಂದು ನನಗೆ ತಿಳಿಯಿತು, ನಾನು ಆಘಾತಕ್ಕೊಳಗಾದೆ ಹಾಗೂ ಆ ಉದ್ಯೋಗಿಗಳಿಗಾಗಿ ನಾನೇನಾದರೂ ಮಾಡಬೇಕೆಂದು ನಿರ್ಧರಿಸಿದೆ.  ಇದಕ್ಕಾಗಿ ನಾನು ಹಾಗೂ ಅಗರ್ವಾಲ್ ಬ್ಬರೂ ವಿವರವಾದ ಗೂಗಲ್ ಫಾರ್ಮ್ ಅನ್ನು ರಚಿಸಿದೆವು ಮತ್ತು ಅದನ್ನು ಮೇ 1 ರಂದು ಸಾಮಾಜಿ ಮಾದ್ಯಮಗಳಲ್ಲಿ  ಅಪ್‌ಲೋಡ್ ಮಾಡಿದೆವು. ಇದಾಗಿ 24 ಗಂಟೆಗಳ ಒಳಗೆ, 100 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಜಿಗಳೊಂದಿಗೆ ಪ್ರತಿಕ್ರಿಯಿಸಿದರು

"ಇದಾಗಿ ನಮ್ಮ ಸಂಶೋಧನೆಯೊಂದಿಗೆ ಮುಂದುವರಿಯುತ್ತಾ, ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳೂ ಉದ್ಯೋಗಿಗಳನ್ನು ವಜಾ ಮಾಡಿದೆ ಎನ್ನುವುದು ತಿಳೀಯಿತು.  ಹೆಚ್ಚಾಗಿ ಹೊಸಬರು ಮತ್ತು ಹಿರಿಯ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ನಾನು ಕಂಡುಕೊಂಡೆ.

"ಮೇ 7 ರ ಹೊತ್ತಿನಲ್ಲಿ ಪಿಂಕ್ ಸ್ಲಿಪ್ಡ್ ಪಡೆದ ಉದ್ಯೋಗಿಗಳ ಸಹಾಯಕ್ಕಾಗಿ ನಾನು ಹಾಗೂ ಅಗರ್ವಾಲ್ ಉಚಿತ ಜಾಬ್ ಫೋರಮ್ ಪ್ರಾರಂಭಿಸಿದೆವು"

ಈ ಫೋರಮ್ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಉದ್ಯೋಗಾಕಾಂಕ್ಷಿಗಳು ತಮ್ಮ ಶಿಕ್ಷಣ ಮತ್ತು ಕೆಲಸದ ಅನುಭವದ ವಿವರಗಳನ್ನು ಸಲ್ಲಿಸಬಹುದು ಮತ್ತು ನೇಮಕಾತಿ ತೆಗೆದುಕೊಳ್ಳುವ ಕಂಪನಿಗಳು ತಮ್ಮ ಅವಶ್ಯಕತೆಗಳನ್ನು ಗುರುತಿಸಿ ಇಲ್ಲಿ  ನೋಂದಾಯಿಸಿಕೊಳ್ಳಬಹುದು."ನಮ್ಮಲ್ಲಿ ಸುಮಾರು 12,500 ಉದ್ಯೋಗಾಕಾಂಕ್ಷಿಗಳು ಮತ್ತು ಹಲವಾರು ನಗರಗಳಿಂದ 500 ಕ್ಕೂ ಹೆಚ್ಚು ನೇಮಕಾತಿ ಕಂಪನಿಗಳು, ವಿವಿಧ ಜಾಬ್ ಡೊಮೇನ್‌ಗಳ ಡೇಟಾಬೇಸ್ ಇದೆ, ಅದನ್ನು ಅರ್ಹ ನೇಮಕಾತಿದಾರರೊಂದಿಗೆ ಹಂಚಿಕೊಳ್ಳಲಾಗಿದೆ" ಎಂದು ಜೈನ್ ಹೇಳುತ್ತಾರೆ. ಒಳ್ಳೆಯ ವಿಚಾರವೆಂದರೆ ಈ ಫೋರಮ್ ಸಂಪೂರ್ಣ ಉಚಿತವಾಗಿದೆ.

"ಕೋವಿಡ್ ನಂತಹಾ ಈ ಪರಿಸ್ಥಿತಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಹಾಯ ಮಾಡಲು ಇದು ಸಂಪೂರ್ಣ ಲಾಭರಹಿತ ಸಾಮಾಜಿಕ ಉಪಕ್ರಮವಾಗಿದೆ.ನಾವು ಮಾನವ ಸಂಪನ್ಮೂಲ ಅಥವಾ ಉದ್ಯೋಗಾಕಾಂಕ್ಷಿ ಶುಲ್ಕ ವಿಧಿಸುವುದಿಲ್ಲ ”ಎಂದು ಜೈನ್ ಹೇಳುತ್ತಾರೆ. ಅಭ್ಯರ್ಥಿಯ ವಿವರಗಳನ್ನು ಯಾವ ಕಾರಣಕ್ಕೂ ತಪ್ಪಾದ ಸ್ಥಳಕ್ಕೆ ತಲುಪದಂತೆ ರಕ್ಷಿಸಲು ನಾವು ವೈಯಕ್ತಿಕ ವಿನಂತಿಯ ಮೇಲೆ ಮಾತ್ರ ಡೇಟಾವನ್ನು ಹಂಚಿಕೊಳ್ಳುತ್ತೇವೆ. ಅಭ್ಯರ್ಥಿಗಳ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವ ಮೊದಲು, ಕಂಪನಿ ಪ್ರಾಮಾಣಿಕವೆ? ಅಧಿಕೃತ ನೊಂದಣಿ ಆಗಿದೆಯೆ?ಎಂದು ನಾವು ಎರಡು ಬಾರಿ ಪರಿಶೀಲಿಸುತ್ತೇವೆ. ಹಾಗಾಗದೆ ಹೋದಲ್ಲಿ ನಾವು ನಮ್ಮ ಅಭ್ಯರ್ಥಿಗಳ ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವುದಿಲ್ಲ

"ಇದುವರೆಗೆ ನಮ್ಮ ಈ ಫೋರಮ್ ನಿಂದಾಗಿ ಸುಮಾರು 500, ಮಂದಿಗೆ ಸಹಾಯವಾಗಿದೆ ಎಂದು ನಾನು ಅಂದಾಜಿಸಿದ್ದೇವೆ. ಅಭ್ಯರ್ಥಿಗೆ ಅಥವಾ ನೇಮಕಾತಿ ತೆಗೆದುಕೊಳ್ಳುವ ಕಂಪನಿಗೆ ಕೆಲಸ / ಅಭ್ಯರ್ಥಿ ಸಿಕ್ಕಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಯಾವುದೇ ರಿಲೇಷನ್ ಇಲ್ಲದ ಕಾರಣ ನಮಗೆ ನಿಜವಾದ ಅಂಕಿ ಅಂಶಗಳ ಮಾಹಿತಿ ಇಲ್ಲ. ಆದರೆ ಜನರಿಗೆ ಸಹಾಯ ಮಾಡುತ್ತಿದ್ದೇವೆ  ಎನ್ನುವುದು  ನನಗೆ ಖುಷಿ ತಂದಿದೆ ”ಎಂದು ಜೈನ್ ಹೇಳುತ್ತಾರೆ,

ಜೈನ್ ಹಾಗೂ ಅಗರ್ವಾಲ್ ಎಚ್‌ಆರ್‌ಗಳೊಂದಿಗೆ ಸಂಬಂಧ ಹೊಂದಿದ್ದಾಗ ಉದ್ಯೋಗಾಕಾಂಕ್ಷಿಗಳನ್ನು ಹುಡುಕಲು ಮೂರು ಇಂಟರ್ನ್‌ಗಳನ್ನು ಸರ್ಫರ್ ಗಳನ್ನು ನೇಮಿಸಿಕೊಂಡಿದ್ದಾರೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗ ನೀಡುವವರಲ್ಲಿ ಹೆಚ್ಚಿನ ವಿಶ್ವಾಸವನ್ನು ಬೆಳೆಸಲು ಈ ಜೋಡಿ ಶೀಘ್ರದಲ್ಲೇ www.freejobsforum.com ಅನ್ನು ಪ್ರಾರಂಭಿಸಲಿದೆ.

Stay up to date on all the latest ಜೀವನಶೈಲಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp