"ಧೂಮಪಾನದ ಅಭ್ಯಾಸವಿದ್ದರೆ ಕೋವಿಡ್-19 ಎದುರಿಸುವುದು ಮತ್ತಷ್ಟು ಕಷ್ಟ"

ತಂಬಾಕು ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿದ್ದು ಕೋವಿಡ್-19 ಎದುರಿಸುವುದು ತಂಬಾಕು ಅಭ್ಯಾಸವುಳ್ಳವರಿಗೆ ಕಷ್ಟ ಎಂದು ಡಾ. ರಾಮಚಂದ್ರ ಹೇಳಿದ್ದಾರೆ. 
ಧೂಮಪಾನ (ಸಾಂಕೇತಿಕ ಚಿತ್ರ)
ಧೂಮಪಾನ (ಸಾಂಕೇತಿಕ ಚಿತ್ರ)

ಬೆಂಗಳೂರು: ತಂಬಾಕು ಶ್ವಾಸಕೋಶಕ್ಕೆ ಹಾನಿಯುಂಟುಮಾಡಬಲ್ಲ ಅಪಾಯಕಾರಿ ಪದಾರ್ಥ ಎಂದೇ ಕುಖ್ಯಾತಿ ಪಡೆದಿದ್ದು, ಇದರ ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿದ್ದು ಕೋವಿಡ್-19 ಎದುರಿಸುವುದು ತಂಬಾಕು ಅಭ್ಯಾಸವುಳ್ಳವರಿಗೆ ಕಷ್ಟ ಎಂದು ಡಾ. ರಾಮಚಂದ್ರ ಹೇಳಿದ್ದಾರೆ. 

ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆನ್ಕೋಲಜಿಯ ನಿರ್ದೇಶಕರಾಗಿರುವ ಡಾ. ಸಿ ರಾಮಚಂದ್ರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹೇಳಿಕೆ ನೀಡಿದ್ದು, ಕೋವಿಡ್-19 ವೈರಾಣು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತವೆ ಹಾಗೂ ಧೂಮಪಾನದ ಅಭ್ಯಾಸವುಳ್ಳವರ ಶ್ವಾಸಕೋಶ ದುರ್ಬಲವಾಗಿದ್ದು, ಇವರಿಗೆ ಕೋವಿಡ್-19 ಎದುರುವುದು ಕಷ್ಟವಾಗಲಿದೆ ಎನ್ನುತ್ತಾರೆ. 

2020 ರ ಏ.29 ರಂದು ಸಾರ್ವಜನಿಕ ಆರೋಗ್ಯ ತಜ್ಞರ ಅಧ್ಯಯನಗಳ ವಿಮರ್ಶೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದು ಧೂಮಪಾನ ಮಾಡದವರಿಗೆ ಹೋಲಿಕೆ ಮಾಡಿದಲ್ಲಿ ಧೂಮಪಾನ ಮಾಡುವವರಿಗೇ ಕೋವಿಡ್-19 ಹೆಚ್ಚು ಬಾಧಿಸುತ್ತದೆ ಎಂದು ಎಚ್ಚರಿಸಿದೆ. 

ತಂಬಾಕು ಸಾಂಕ್ರಾಮಿಕವಲ್ಲದ ರೋಗಗಳಾದ ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಉಸಿರಾಟದ ಕಾಯಿಲೆ ಮತ್ತು ಮಧುಮೇಹಕ್ಕೂ ಕಾರಣವಾಗುತ್ತದೆ. ಇವೆಲ್ಲವೂ ಕೋವಿಡ್-19 ಬಂದಲ್ಲಿ ಆರೋಗ್ಯದ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದ್ದು ಸಾವಿಗೂ ಕಾರಣವಾಗಬಹುದು ಎಂದು ಡಾ.ರಾಮಚಂದ್ರ ಹೇಳಿದ್ದಾರೆ. 

ಇದೇ ವೇಳೆ ತಂಬಾಕು ಕೋವಿಡ್-19 ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಆಧಾರವಿಲ್ಲದ ಉಲ್ಲೇಖಗಳಿಂದ ಮಾಧ್ಯಮಗಳು, ಸಂಶೋಧಕರು, ವಿಜ್ಞಾನಿಗಳಿಗೆ ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com