'ಅಲಾರ್ಮ್' ಇಟ್ಟು ಮಲಗುವವರೇ ಎಚ್ಚರ: ಇದರಿಂದ BP ಹೆಚ್ಚಾಗಬಹುದು ಗೊತ್ತಾ?

ಹಠಾತ್ ಧ್ವನಿ ಎಚ್ಚರಿಕೆಯಿಂದಾಗಿ ಹಠಾತ್ ಜಾಗೃತಿಯು ನಿಮ್ಮ ಹೃದಯ ಮತ್ತು ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
'ಅಲಾರ್ಮ್' ಇಟ್ಟು ಮಲಗುವವರೇ ಎಚ್ಚರ: ಇದರಿಂದ BP ಹೆಚ್ಚಾಗಬಹುದು ಗೊತ್ತಾ?
Updated on

ಪ್ರತಿಯೊಬ್ಬರೂ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ಒತ್ತಡದಲ್ಲಿ ಬದುಕುತ್ತೇವೆ. ಅಪ್ಪಿ ತಪ್ಪಿ ಬೆಳಗ್ಗೆ ಹಾಸಿಗೆಯಿಂದ ಏಳುವುದು ಐದು ನಿಮಿಷ ತಡವಾದರೆ ಅದಕ್ಕಾಗಲೇ ನಮ್ಮ ಮೆದುಳಿನಲ್ಲಿ ಒಂದು ರೀತಿಯ ಒತ್ತಡ ಪ್ರಾರಂಭವಾಗಿರುತ್ತದೆ..

ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಬೇಗ ಏಳಬೇಕಾದರೆ ಅಲಾರ್ಮ್ ಇಟ್ಟು ಮಲಗುತ್ತಾರೆ. ಅದರಲ್ಲೂ ಶಾಲೆ, ಕಾಲೇಜುಗೆ ಹೋಗುವ ಮಕ್ಕಳಿದ್ದಾಗ, ಆಫೀಸ್‌ಗೆ ಹೋಗುವವರಿದ್ದಾಗ ಪ್ರತಿಯೊಬ್ಬರೂ ಅಲಾರ್ಮ್ ಇಟ್ಟಿರುತ್ತಾರೆ. ಏಕೆಂದರೆ, ತಾಯಂದಿರು ಬೇಗ ಎದ್ದು ಮನೆಕೆಲಸದ ಜೊತೆಗೆ ಮನೆಯವರಿಗೆಲ್ಲಾ ಅಡುಗೆ ಮಾಡಿ ಕಳುಹಿಸಬೇಕಾಗುತ್ತದೆ. ಹಾಗೆಯೇ ದುಡಿಯುವ ತಾಯಂದಿರಾಗಿದ್ದರೆ ಅವರೂ ಕೂಡಾ ಆಫೀಸ್‌ಗೆ ಹೋಗಬೇಕಾಗಿರುತ್ತದೆ ಅದಕ್ಕಾಗಿ ಬೆಳಗ್ಗೆ ಬೇಗ ಏಳಲು ಅಲಾರ್ಮ್ ಇಟ್ಟಿರುತ್ತಾರೆ.

ಆದರೆ ಈ ದೈನಂದಿನ ಅಭ್ಯಾಸವು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ನಿಮಗೆ ಗೊತ್ತಾ? ಹಠಾತ್ ಧ್ವನಿ ಎಚ್ಚರಿಕೆಯಿಂದಾಗಿ ಹಠಾತ್ ಜಾಗೃತಿಯು ನಿಮ್ಮ ಹೃದಯ ಮತ್ತು ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಇದು ನೀವು ನಿದ್ರೆಯಲ್ಲಿರುವಾಗ ಒಂದು ಹಂತದಲ್ಲಿ ನಿಮ್ಮ ದೇಹವನ್ನು ತಕ್ಷಣ ಎಚ್ಚರಗೊಳಿಸುತ್ತದೆ. ಈ ಅಭ್ಯಾಸವು ಹಾನಿಕಾರಕವಾಗಿದೆ. ನಾವು ಬೆಳಗ್ಗೆ ಏಳುವುದಕ್ಕಾಗಿ ರೂಢಿಸಿಕೊಂಡಿರುವ ಕ್ರಮ ಸರಿಯಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ವರ್ಜೀನಿಯಾ ವಿಶ್ವವಿದ್ಯಾನಿಲಯದ ನರ್ಸಿಂಗ್ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.

ಅಲಾರ್ಮ್ ಇಟ್ಟು ಎದ್ದೇಳುವವರು, ನೈಸರ್ಗಿಕವಾಗಿ ಏಳುವವರಿಗಿಂತ (ಅಲಾರ್ಮ್ ಇಲ್ಲದೆ) ಹೆಚ್ಚಾಗಿ ಬಿಪಿ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿಯೇ ಅಲಾರ್ಮ್ ಇಟ್ಟು ಏಳುವವರಲ್ಲಿ ಇತರರಿಗೆ ಹೋಲಿಸಿದರೆ ಶೇ.74ರಷ್ಟು ಮಂದಿಯಲ್ಲಿ ರಕ್ತದೊತ್ತಡ ಸಮಸ್ಯೆಯು ಗಮನಾರ್ಹವಾಗಿ ಏರಿಕೆಯಾಗಿರುವುದು ಕಂಡು ಬಂದಿದೆ. ಅಲ್ಲದೆ, 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿಯೂ (ಬೇಗ ಎಚ್ಚರಗೊಳ್ಳುವವರಲ್ಲಿಯೂ) ಬಿಪಿ ಹೆಚ್ಚು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ದೇಹ ಸಂಪೂರ್ಣ ನಿದ್ರಾವಸ್ಥೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಎಚ್ಚರಗೊಂಡರೆ ಅದರಿಂದ ರಕ್ತದೊತ್ತಡ ಉಲ್ಭಣವಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯು ಸೇರಿದಂತೆ ಹೃದಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂದು ಅಧ್ಯಯನದ ವರದಿ ಎಚ್ಚರಿಕೆ ನೀಡಿದೆ.

ದಿಢೀರ್ ಎಚ್ಚರಗೊಂಡಾಗ ಒತ್ತಡದ ಹಾರ್ಮೋನ್‌ಗಳ ಹೆಚ್ಚಳಕ್ಕೆ ಕಾರಣವಾಗಬಹುದು

ಅಲಾರ್ಮ್ ಗಡಿಯಾರದ ಶಬ್ದವು ನಿಮ್ಮನ್ನು ಎಚ್ಚರಗೊಳಿಸಿದಾಗ, ಅದು ದೇಹದ ಹೋರಾಟದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಈ ಪ್ರತಿಕ್ರಿಯೆಯು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳ ಬಿಡುಗಡೆಯಿಂದ ನಿರೂಪಿಸಲ್ಪಟ್ಟಿದೆ. ತಕ್ಷಣದ ಬೆದರಿಕೆಗಳನ್ನು ಎದುರಿಸಲು ಈ ಹಾರ್ಮೋನುಗಳು ಅತ್ಯಗತ್ಯವಾದರೂ, ಶಾಂತಿಯುತ ನಿದ್ರೆಯಿಂದ ಥಟ್ಟನೆ ಏಳುವಂತೆ ವಿನ್ಯಾಸಗೊಳಿಸಲಾಗಿಲ್ಲ. ಒತ್ತಡದ ಹಾರ್ಮೋನುಗಳ ಹಠಾತ್ ಉಲ್ಬಣವು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ.

ಎಚ್ಚರಗೊಳ್ಳಲು ಅಲಾರ್ಮ್ ಗಳನ್ನು ಹೊಂದಿಸುವುದು ನಿಮ್ಮ ಮಾನಸಿಕ ಆರೋಗ್ಯ ಅಥವಾ ಮನಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಭಾವನಾತ್ಮಕ ನಿಯಂತ್ರಣ ಮತ್ತು ಮನಸ್ಥಿತಿಯ ಸ್ಥಿರತೆಯಲ್ಲಿ ನಿದ್ರೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಲಾರ್ಮ್ ನೊಂದಿಗೆ ನಿಮ್ಮ ನಿದ್ರೆಯನ್ನು ಅಡ್ಡಿಪಡಿಸುವುದರಿಂದ ನಿಮಗೆ ಕಿರಿಕಿರಿ, ಒತ್ತಡ, ಆತಂಕಸ ಮೂಗಿನಲ್ಲಿ ರಕ್ತಸ್ರಾವ, ತಲೆನೋವು ಸಮಸ್ಯೆಗಳನ್ನು ಉಂಟುಮಾಡಬಹುದು, ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಅಧ್ಯಯನದ ವರದಿ ತಿಳಿಸಿದೆ.

ಹಾಗಿದ್ದರೆ ಈ ಅಲಾರ್ಮ್ ಗೆ ಪರ್ಯಾಯವೇನು?

ಹಠಾತ್ತನೆ ನಿದ್ರೆಯಿಂದ ಎಚ್ಚರಿಸುವ ಅಲಾರ್ಮ್ ಗಳಿಗೆ ಪರ್ಯಾಯವೂ ಇದೆ. ಅದುವೇ ‘ಸ್ನೂಜ್’ (Snooze). ಐಫೋನ್​ಗಳಲ್ಲಿ ಮೊದಲಿನಿಂದಲೂ ಈ ಸ್ನೂಜ್ ಆಯ್ಕೆ ಇದೆ. ಬೇರೆ ಮೊಬೈಲ್​ಗಳಲ್ಲಿಯೂ ಈ ಸ್ನೂಜ್ ಆಯ್ಕೆ ಬಳಸಬಹುದು. ಇದು ಅಲಾರ್ಮ್ ಶಬ್ದಗಳಂತೆ ಹಠಾತ್ತನೆ ಎಚ್ಚರಿಸುವುದಿಲ್ಲ. ಬದಲಿಗೆ ಕಡಿಮೆ ಶಬ್ದವನ್ನು ಒಂದೇ ಶ್ರುತಿಯಲ್ಲಿ ಪ್ರಸಾರ ಮಾಡುತ್ತವೆ, ಈ ಶಬ್ದ ನಿದ್ರೆಯಲ್ಲಿರುವ ಮೆದುಳನ್ನು ನಿಧಾನಕ್ಕೆ ಸಕ್ರಿಯಗೊಳಿಸುತ್ತವೆ. ಇದು ಮಲಗಿರುವ ವ್ಯಕ್ತಿಗೆ ಶಾಕ್ ನೀಡಿದ ಅನುಭವ ಕೊಡುವುದಿಲ್ಲ. ಬದಲಿಗೆ ನಿಧಾನಕ್ಕೆ ಎಚ್ಚರಗೊಳ್ಳುವಂತೆ ಮಾಡುತ್ತದೆ.

ಇದಲ್ಲದೆ, ಅಲಾರ್ಮ್ ಅಥವಾ ಸ್ನೂಜ್ ಎರಡನ್ನೂ ಬಳಸದೆ ದೇಹಕ್ಕೆ ಅವಶ್ಯವಾದಷ್ಟು ನಿದ್ರೆಯನ್ನು ಪೂರ್ಣಗೊಳಿಸಿ ಸಹಜವಾಗಿಯೇ ನೀವು ಎಚ್ಚರಗೊಳ್ಳುತ್ತೀರಿ.ನಿಮ್ಮ ವೈಯಕ್ತಿಕ ಅಗತ್ಯಗಳ ಆಧಾರದ ಮೇಲೆ ಪ್ರತಿ ರಾತ್ರಿ 7ರಿಂದ 9 ಗಂಟೆಗಳ ನಿದ್ರೆಯನ್ನು ನೀವು ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಬೆಳಿಗ್ಗೆ ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು ನಿಮ್ಮ ಸಿರ್ಕಾಡಿಯನ್ ರಿದಮ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಚ್ಚರಗೊಳ್ಳುವ ಸಮಯ ಬಂದಾಗ ನಿಮ್ಮ ಮಲಗುವ ಕೋಣೆಗೆ ಸೂರ್ಯನ ಬೆಳಕನ್ನು ಬಿಡಲು ನಿಮ್ಮ ಪರದೆಗಳನ್ನು ತೆರೆದಿಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com