ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ಆಹಾರ ಪದಾರ್ಥಗಳು; ಇಲ್ಲಿದೆ ಮಾಹಿತಿ...

ಕೆಂಪು ರಕ್ತ ಕಣಗಳು ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕವಾದರೆ ಬಿಳಿರಕ್ತ ಕಣಗಳು ರೋಗಾಣುಗಳನ್ನು ನಾಶ ಪಡಿಶುವ ಸೈನಿಕರಾಗಿರುತ್ತವೆ.
Increase white blood cells with the right diet
ಬಿಳಿ ರಕ್ತ ಕಣಗಳನ್ನು ಹೆಚ್ಚಿಸಬಲ್ಲ ಆಹಾರಗಳು

ದೇಹದಲ್ಲಿ ಕೆಂಪು ಮತ್ತು ಬಿಳಿ ರಕ್ತಕಣಗಳ ಬಗ್ಗೆ ನಾವು ಕೇಳಿದ್ದೇವೆ. ದೇಹದಲ್ಲಿನ ರಕ್ತದ ಕಣಗಳು ಸ್ವಲ್ಪ ಏರುಪೇರಾದರೂ ಮನುಷ್ಯನ ಆರೋಗ್ಯವು ಹದಗೆಡುವುದರಲ್ಲಿ ಅನುಮಾನವಿಲ್ಲ. ಕೆಂಪು ರಕ್ತದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಬಿಳಿ ರಕ್ತ ಕಣಗಳ ಕುರಿತಂತೆ ಮಾತನಾಡುವುದನ್ನು ಕೇಳಿರಬಹುದು. ಮಾರಣಾಂತಿಕ ರೋಗಗಳಿಗೆ ತುತ್ತಾದವರಲ್ಲಿ ಈ ಬಿಳಿ ರಕ್ತಕಣಗಳು ಕಡಿಮೆಯಾಗಿದೆ ಎಂದು ವೈದ್ಯರು ಹೇಳುತ್ತಿರುತ್ತಾರೆ. ಇದಕ್ಕೆ ಆಧುನಿಕ ಯುಗದ ಆಹಾರ ವ್ಯವಸ್ಥೆಯೂ ಒಂದು ರೀತಿಯ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.

ಮಾನವನ ದೇಹದಲ್ಲಿ ಕೆಂಪು ರಕ್ತಕಣಗಳು ಎಷ್ಟು ಮುಖ್ಯವೋ ಅದೇ ರೀತಿ ಬಿಳಿ ರಕ್ತಕಣಗಳು ಮುಖ್ಯ ಪಾತ್ರವಹಿಸುತ್ತವೆ. ಕೆಂಪು ರಕ್ತ ಕಣಗಳು ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕವಾದರೆ ಬಿಳಿರಕ್ತ ಕಣಗಳು ರೋಗಾಣುಗಳನ್ನು ನಾಶ ಪಡಿಶುವ ಸೈನಿಕರಾಗಿರುತ್ತವೆ. ಬಿಳಿರಕ್ತ ಕಣಗಳನ್ನು ಲ್ಯುಕೋಸೈಟ್ ಎಂತಲೂ ಕರೆಯುವುದುಂಟು. ಈ ಬಿಳಿರಕ್ತಕಣ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ದೇಹದೊಳಗೆ ಸೇರಲು ಯತ್ನಿಸುವ ವೈರಸ್ ಗಳ ವಿರುದ್ಧ ಈ ಬಿಳಿ ರಕ್ತಕಣಗಳು ಹೋರಾಟ ನಡೆಸುತ್ತವೆ. ಬಿಳಿ ರಕ್ತಕಣಗಳಿಲ್ಲದವರು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇಂತಹವರು ಬೇಗ ಗುಣಮುಖರಾಗಿರುವುದಿಲ್ಲ.

ಪೋಷಕಾಂಶಗಳ ಕೊರತೆಯಿಂದಾಗಿ ಬಿಳಿ ರಕ್ತಕಣಗಳು ಕಡಿಮೆಯಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ, ವೈದ್ಯರು, ಮಾತ್ರೆ ಎಂದು ಹಣ ವ್ಯಯ ಮಾಡಿದರೂ ಎಷ್ಟೋ ಬಾರಿ ಖಾಯಿಲೆಗಳೇ ಗುಣವಾಗುವುದಿಲ್ಲ. ಒಂದು ದಿನ ಆರೋಗ್ಯವಾಗಿದ್ದೇವೆ ಎಂದು ಕೊಂಡರೆ ಮತ್ತೊಂದು ದಿನ ಮತ್ತದೇ ಅನಾರೋಗ್ಯ ದೇಹವನ್ನು ಸುತ್ತಿಕೊಳ್ಳುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಸರಿಯಾದ ಸಮಯಕ್ಕೆ ಹಾಗೂ ನಿಯಮಿತವಾಗಿ ಆಹಾರ-ಪದಾರ್ಥಗಳನ್ನು ಸೇವಿಸಿದರೆ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗದಂತೆ ದೇಹವನ್ನು ಆರೋಗ್ಯಕರವಾಗಿರುವಂತೆ  ಧೀರ್ಘಕಾಲದವರೆಗೂ ನೋಡಿಕೊಳ್ಳಬಹುದು.

ದೇಹದ ಆರೋಗ್ಯಕ್ಕೆ ಪ್ರಮುಖ ಪಾತ್ರವಹಿಸುವ ಬಿಳಿ ರಕ್ತ ಹಚ್ಚಿಸಿಕೊಳ್ಳಲು ಕೆಲವೊಂದಿಷ್ಟು ಆಹಾರ ಪದಾರ್ಥಗಳು ಹಾಗೂ ಅವುಗಳ ಲಕ್ಷಣಗಳನ್ನು ಈ ಕೆಳಕಂಡಂತೆ ತಿಳಿಯಬಹುದು.

ಮರುವೈ ಮೀನು (ಚಿಪ್ಪು ಮೀನು)

Maruvai fish
ಮರುವೈ ಮೀನು

ಚಿಪ್ಪು ಮೀನಿನಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಒಂದು ಕಪ್ ಶಂಕು ಚಿಪ್ಪು 18 ಗ್ರಾಮ್ ಪ್ರೊಟೀನ್ ಒದಗಿಸಲಿದ್ದು, ಚಿಪ್ಪು ಮೀನಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಇದು ವಯಸ್ಕರು ದಿನ ನಿತ್ಯ ಸೇವಿಸಬೇಕಾದ ಪ್ರೊಟೀನ್‌ನ ಶೇ. 30ರಷ್ಟು ಭಾಗವಾಗಿದೆ.

ಮೊಸರು (ಶ್ರೀಖ೦ಡ್)

Shrikhand
ಶ್ರೀಖ೦ಡ್

ಮೊಸರಿನಲ್ಲಿ ವಿಟಮಿನ್ ಡಿ ಇದ್ದು ಇದನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಶೀತ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಬರುವುದನ್ನು ತಡೆಯಬಹುದು. 70% ರೋಗನಿರೋಧಕ ಅಂಶವು ನಮ್ಮ ಜೀರ್ಣಾಂಗದಲ್ಲಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆದರೆ ಮಾತ್ರ ಅದು ದೇಹಕ್ಕೆ ದೊರೆಯುತ್ತದೆ. ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ.

ಗ್ರೀನ್ ಟೀ

Green Tea
ಗ್ರೀನ್ ಟೀ

ಗ್ರೀನ್ ಟೀ ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸುತ್ತದೆ, ರಕ್ತ ಕಣಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರೋಗ ನಿರೋಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಿತ್ತಳೆಹಣ್ಣು

Orange
ಕಿತ್ತಳೆಹಣ್ಣು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಸುವ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.

ಏಡಿಕಾಯಿ

Crabs
ಏಡಿಕಾಯಿ

ಏಡಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೆಲೇನಿಯಂ ಅಂಶವನ್ನು ಹೇರಳವಾಗಿ ಹೊಂದಿದೆ.

ಬೆಳ್ಳುಳ್ಳಿ

Garlic
ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಪ್ರೊಟೀನ್, ವಿಟಮಿನ್ ಎ,ಬಿ, ಸಿ ಸೇರಿದಂತೆ ಹಲವು ಪೌಷ್ಠಿಕಾಂಶಗಳದ್ದು, ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಬಹಳ ಉತ್ತಮ ಔಷಧಿಯಾಗಿದೆ.

ಬಸಳೆ ಸೊಪ್ಪು

Basale Soppu
ಬಸಳೆ ಸೊಪ್ಪು

ಬಸಳೆ ಸೊಪ್ಪನ್ನು ಪೌಷ್ಠಿಕಾಂಶದ ಸೊಪ್ಪು ಎಂತಲೂ ಕರೆಯಲಾಗುತ್ತದೆ. ಪ್ರತೀ ನಿತ್ಯ ಈ ಸೊಪ್ಪನ್ನು ತಿನ್ನುತ್ತಾ ಬಂದರೆ ದೇಹದ ಆರೋಗ್ಯ ಹೆಚ್ಚಾಗುತ್ತದೆ.

ಸಿಹಿ ಗೆಣಸು

Sweet Potato
ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ಕೆರೊಟಿನಾಯ್ಡ್ ಗಳು ಹೆಚ್ಚಾಗಿದೆ. ವಿಟಮಿನ್ ಎಯನ್ನು ಅಧಿಕ ಪ್ರಮಾಣದಲ್ಲಿದ್ದು ದೇಹಕ್ಕೆ ಪೋಷಕಾಂಶ ಹಾಗೂ ನಾರಿನಂಶ ಒದಗಿಸಿ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.

ಅಣಬೆ

Mushroom
ಅಣಬೆ

ಅಣಬೆ ಅತೀ ಹೆಚ್ಚು ಪ್ರೊಟೀನ್ ಯುಕ್ತ ಆಹಾರವಾಗಿದ್ದು, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು antioxidants ಅಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ.

ಸಾಲ್ಮನ್ ಮೀನು

Salmon fish
ಸಾಲ್ಮನ್ ಮೀನು

ಸಾಲ್ಮನ್ ಮೀನಿನಲ್ಲಿ ವಿಟಮಿನ್ ಡಿ ಹಾಗೂ ಹೆಚ್ಚು ಕ್ಯಾಲೋರಿ ಇರುವ ಇತರೆ ಅಂಶ ಗಳಿದ್ದು, ಇದು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಬೆಲ್ ಪೆಪ್ಪರ್ಸ್ ಅಥವಾ ಕ್ಯಾಪ್ಸಿಕಂ (ದೊಡ್ಡ ಮೆಣಸಿಕಾಯಿ)

Capsicum
ಬೆಲ್ ಪೆಪ್ಪರ್ಸ್ ಅಥವಾ ಕ್ಯಾಪ್ಸಿಕಂ

ಕೆಂಪು ಮೆಣಸಿನಕಾಯಿ ಮತ್ತು ಹಸಿ ಮೆಣಸಿಕಾಯಿ ಕ್ಯಾಪ್ಸಿಕಂ ಜಾತಿಗೆ ಸೇರಿದವು. ಮತ್ತೂ ಒಂದು ಜಾತಿಯ ಮೆಣಸಿದೆ ಅದು ಬೆಲ್ ಪೆಪ್ಪರ್ಸ್. ಈ ಬೆಲ್ ಪೆಪ್ಪರ್ಸ್‌ನಿಂದ ಪಡೆಯಲಾಗುವ ಕೆಂಪು ಮೆಣಸಿನ ಕಾಳುಗಳಿದ್ದು ಅವುಗಳನ್ನು ಪೆಪ್ರಿಕಾ ಎಂದು ಕರೆಯುತ್ತಾರೆ. ಇವು ಖಾರವಾಗಿದ್ದರೂ ಬೇರೆ ಮೆಣಸುಗಳಿಗೆ ಹೋಲಿಸಿದರೆ ತುಸು ಸೌಮ್ಯತೆ ಇರುವ ಕಾರಣ ಈ ಪೆಪ್ರಿಕಾ ಹೆಸರಿನ ಮೆಣಸು ಸಾಮಾನ್ಯವಾಗಿ ಹೆಚ್ಚಿನ ಬಳಕೆಯಲ್ಲಿದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ದೇಹದಲ್ಲಿರುವ ವೈರಸ್ ಗಳನ್ನು ಹೊರಹಾಕುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕೋಸುಗಡ್ಡೆ (ಬ್ರೊಕೋಲಿ)

broccoli
ಕೋಸುಗಡ್ಡೆ

ಹೆಚ್ಚಾಗಿ ಕೋಸುಗಡ್ಡೆ ತಿನ್ನಬೇಕು, ಕೋಸುಗಡ್ಡೆಯಿಂದ ಪದಾರ್ಥಗಳನ್ನು ಮಾಡಬಹುದು, ಸೂಪ್ ಮಾಡಿ ಕುಡಿಯಬಹುದು, ಕೋಸುಗಡ್ಡೆ ಸಲಾಡ್ ಕೂಡ ತಯಾರಿಸಬಹುದು. ಈ ಆಹಾರಗಳನ್ನು ತಿನ್ನುತ್ತಾ ಬಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಕೋಸು ಗಡ್ಡೆಯಲ್ಲಿ ಆರೋಗ್ಯಕರ ಅಂಶಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಉತ್ತಮವಾದ ಆಹಾರವಾಗಿದೆ.

ಜವೆಗೋಧಿ

Emmer Wheat
ಜವೆಗೋಧಿ

ಜವೆ ಗೋಧಿಯಲ್ಲಿ ಅಣಬೆಯಲ್ಲಿರುವಂತೆ ಅತೀ ಹೆಚ್ಚು ಪೌಷ್ಠಿಕಾಂಶಗಳಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಿವಿಹಣ್ಣು

Kiwi Fruit
ಕಿವಿಹಣ್ಣು

ಕಿವಿ ಹಣ್ಣಿನಲ್ಲಿ ಪೋಷಕಾಂಶಗಳು ಅತೀ ಹೆಚ್ಚಿದ್ದು, ಪ್ರತಿದಿನ ಈ ಹಣ್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಬಾದಾಮಿ

Badam
ಬಾದಾಮಿ

ಬಾದಾಮಿಯಲ್ಲಿ 50% ವಿಟಮಿನ್ ಇ ಅಂಶವಿದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ, ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com