ಬಾಂಗ್ಲಾದೇಶ ಚುನಾವಣೆ

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

ವರ್ಷದ ಆರಂಭದಲ್ಲಿಯೇ ನೆರೆಯ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿತ್ತು. ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಜನವರಿ 5 ರಂದು ದೇಶಾದ್ಯಂತ ಮತದಾನವಾಗಿತ್ತು. ಕೆಲ ಉಗ್ರಗಾಮಿ ಸಂಘಟನೆಗಳ ದಾಳಿ ಮತ್ತು ನಕ್ಸಲ್ ದಾಳಿಯಿಂದಾಗಿ ಒಟ್ಟು 21 ಮಂದಿ ಸಾವಿಗೀಡಾಗಿದ್ದರು. ಬಾಂಗ್ಲಾ ಚುನಾವಾಣೆ ಆರಂಭದಿಂದಲೂ ವಿವಾದಗಳಿಂದಲೇ ಸುದ್ದಿಯಾಗುತ್ತಿತ್ತು.

ಚುನಾವಣೆಗೂ ಮೊದಲು 2013ರ ಡಿಸೆಂಬರ್ 13ರಂದು ಜಮಾತ್ ಇ ಇಸ್ಲಾಮಿ ಸಂಘಟನೆಯ ಅಬ್ದುಲ್ ಖಾದರ್ ಮೊಲ್ಲಾಹ್ ಎಂಬಾತನನ್ನು ಯುದ್ಧಾಪರಾಧದ ಹಿನ್ನಲೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಈ ಘಟನೆ ಬಾಂಗ್ಲಾದೇಶದಾದ್ಯಂತ ಸಂಘಟನೆ ಕಾರ್ಯಕರ್ತರ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಕೆಲ ರಾಜಕೀಯ ಪಕ್ಷಗಳು ಇದರ ಲಾಭ ಪಡೆಯುವ ಉದ್ದೇಶದಿಂದ ಪ್ರಕರಣವನ್ನು ಜೀವಂತವಾಗಿಡಲು ಪ್ರಯತ್ನಿಸಿದವು. ಇನ್ನು ಈ ಸಂದರ್ಭದಲ್ಲಿ ಪ್ರತಿಪಕ್ಷಗಳಿಗೆ ಚುನಾವಣೆ ಬೇಡವಾಗಿತ್ತು. ಆದರೂ ಬಾಂಗ್ಲಾದೇಶ ಚುನಾವಣಾ ಸಂಸ್ಥೆ ಜನವರಿ 5ರಂದು ಚುನಾವಣೆಯನ್ನು ನಿಗದಿ ಪಡಿಸಿ ಆದೇಶಿಸಿತ್ತು.

ಆದರೆ ಚುನಾವಣಾ ನೀತಿಯ ಕುರಿತು ಆಕ್ಷೇಪ ಎತ್ತಿದ ಪ್ರತಿಪಕ್ಷಗಳು ನೀತಿ ಸಂಹಿತೆ ಮತ್ತು ಕೆಲ ನಿರ್ಬಂಧಗಳನ್ನು ಬದಲಿಸಬೇಕು ಎಂದು ಆಗ್ರಹಿಸಿ, ಚುನಾವಣೆಯನ್ನೇ ಬಹಿಷ್ಕರಿಸಿದ್ದವು. ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ, ಜತಿಯ ಪಾರ್ಟಿ ಸೇರಿದಂತೆ ಪ್ರಮುಖ 18 ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದಲ್ಲದೇ ಜನವರಿ 5 ಮತದಾನದಲ್ಲಿ ಪಾಲ್ಗೊಳ್ಳದಂತೆ ಜನತೆಗೆ ಕರೆ ನೀಡಿದ್ದವು. ಚುನಾವಣೆ ಬಹಿಷ್ಕರಿಸುವಂತೆ ವಿರೋಧ ಪಕ್ಷಗಳು ತೀವ್ರ ಒತ್ತಡ ಹೇರಿದ ಹಿನ್ನಲೆಯಲ್ಲಿ ಬಾಂಗ್ಲಾದೇಶ ಚುನಾವಣಾ ಆಯೋಗ, ಭದ್ರತೆ ಹೆಚ್ಚಿಸುವಂತೆ ಬಾಂಗ್ಲಾದೇಶ ಆರ್ಮಿಗೆ ಮನವಿ ಮಾಡಿತು. ಹೀಗಾಗಿ ದೇಶಾದ್ಯಂತ ಯೋಧರು ಕಟ್ಟೆಚ್ಚರ ವಹಿಸಿದ್ದರು. ಇದಾಗ್ಯೂ ಜನವರಿ 5ರಂದು ಬಾಂಗ್ಲಾದೇಶದ ವಿವಿದೆಡೆ ನಡೆದ ಹಿಂಸಾಚಾರದಲ್ಲಿ ಒಟ್ಟು 21 ಮಂದಿ ಸಾವನ್ನಪ್ಪಿದ್ದರು.

ಅಂತಿಮವಾಗಿ 300 ಸ್ಥಾನಗಳ ಪೈಕಿ ಶೇಖ್ ಹಸೀನಾ ನೇತೃತ್ವದ ಆಡಳಿತಾರೂಢ ಅವಾಮಿ ಲೀಗ್ ಪಕ್ಷ ವಿರೋಧ ಪಕ್ಷಗಳ ಬಹಿಷ್ಕಾರದ ಲಾಭ ಪಡೆದು 234 ಸ್ಥಾನಗಳಲ್ಲಿ ಜಯಭೇರಿ ಭಾರಿಸಿತು. ಚುನಾವಣೆ ಬಹಿಷ್ಕಾರದ ಹೊರತಾಗಿಯೂ ಜತಿಯಾ ಪಾರ್ಟಿ 34 ಸ್ಥಾನಗಳನ್ನು ಗಳಿಸಿತು. ಜನವರಿ 9ರಂದು ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com