ಜೈಲುಪಾಲಾದ ಸಹರಾ ಸಂಸ್ಥೆಯ ಒಡೆಯ

ಜೈಲುಪಾಲಾದ ಸಹರಾ ಸಂಸ್ಥೆಯ ಒಡೆಯ
ಜೈಲುಪಾಲಾದ ಸಹರಾ ಸಂಸ್ಥೆಯ ಒಡೆಯ

ಒಂದು ಕಾಲದ ಭಾರತದ ದೈತ್ಯ ವಾಣಿಜ್ಯೋಧ್ಯಮಿ ಎನಿಸಿಕೊಂಡಿದ್ದ ಸಹರಾ ಸಂಸ್ಥೆಯ ಒಡೆಯ ಸುಬ್ರತೋರಾಯ್, ಷೇರುದಾರರ ಹಣ ನೀಡಲಿಲ್ಲವೆಂದು ಜೈಲು ಪಾಲಾದದ್ದು ಕೂಡ ಇದೇ 2014ರಲ್ಲಿ. ಷೇರುದಾರರ ಸುಮಾರು 20 ಸಾವಿರ ಕೋಟಿ ಹಣವನ್ನು ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ 4ರಂದು ಸುಬ್ರತೋ ರಾಯ್‌ರನ್ನು ಬಂಧಿಸಲಾಗಿತ್ತು. ಅಲ್ಲದೆ ಸಹರಾ ಸಂಸ್ಥೆಯ ಎಲ್ಲ ಷೇರು ವ್ಯವಹಾರಗಳಿಗೆ ಸೆಬಿ ನಿರ್ಬಂಧ ಹೇರಿತ್ತು. ಪ್ರಮುಖ ಷೇರು ಸಂಸ್ಥೆಯ ಪಟ್ಟಿಯಲ್ಲಿ ಪ್ರಮುಖ ಸ್ಥಾನಹೊಂದಿದ್ದ ಸಹರಾ ಸೆಬಿ ನಿರ್ಬಂಧ ಹೇರಿದ ಒಂದೇ ದಿನದಲ್ಲಿ ನೆಲಕಚ್ಚಿತು.

ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ 10 ಸಾವಿರ ಕೋಟಿ ರು.ಗಳ ಭದ್ರತಾ ಠೇವಣಿ ಇಟ್ಟು ಜಾಮೀನು ಪಡೆಯುವಂತೆ ಸೂಚಿಸಿತ್ತು. ಈ ಪೈಕಿ 2.500 ಕೋಟಿ ರು.ಗಳನ್ನು ತುರ್ತುಗಿ ಸಲ್ಲಿಸಿ, ಮತ್ತೊಂದು 2.500 ಕೋಟಿ ರು.ಗಳನ್ನು 21 ದಿನದಲ್ಲಿ ಸಲ್ಲಿಕೆ ಮಾಡುವಂತೆ ಸೂಚಿಸಿತ್ತು. ಸತತ ಪ್ರಯತ್ನದ ಬಳಿಕ ಸಹರಾ ಸಂಸ್ಥೆ ತಾನು 10 ಸಾವಿರ ಕೋಟಿ ರುಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಆಲವತ್ತುಕೊಂಡಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com