
ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಕಳ್ಳರಿಬ್ಬರನ್ನು ಸೆರೆಹಿಡಿಯಲು ತೆರಳಿದ್ದ ಪೊಲೀಸ್ ಸಬ್ ಇನ್ಸ್ ಪಕ್ಟರ್ ಜಗದೀಶ್ (38)ಅವರನ್ನು ಆರೋಪಿಯೇ ಹಾಡಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಳೆದ ಅಕ್ಟೋಬರ್ ನಲ್ಲಿ ನಡೆದಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಜಗದೀಶ್ ಅವರು ಇಬ್ಬರು ವಾಹನ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಗೊಣ್ಣೆ ಮಧು ಮತ್ತು ಸಿಜೆ ಹರೀಶ್ ಅಲಿಯಾಸ್ ಬಾಬು ಅಲಿಯಾಸ್ ಕೃಷ್ಣ ಎಂಬ ಅಪ್ಪ-ಮಗ ನೆಲಮಂಗಲದ ಸಿಎನ್ ಆರ್ ಗ್ರ್ಯಾನೈಟ್ ಫ್ಯಾಕ್ಟರಿ ಅವಿತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಸ್ ಐ ಜಗದೀಶ್ ಅವರು, ತಮ್ಮ ತಮ್ಮ ನಾಲ್ವರು ಸಿಬ್ಬಂದಿಗಳ ಜೊತೆಗೂಡಿ ಕಳ್ಳರನ್ನು ಹಿಡಿಯಲು ತೆರಳಿದ್ದರು.
ಪೊಲೀಸರನ್ನು ಕಂಡ ಕಳ್ಳರು ಅವರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಪಿಎಸ್ ಐ ಜಗದೀಶ್ ಅವರ ಎದೆಗೆ ಇರಿದು ಅವರ ಸರ್ವಿಸ್ ರಿವಾಲ್ವರ್ ತೆಗೆದುಕೊಂಡು ಪರಾರಿಯಾಗಿದ್ದರು. ಅಲ್ಲದೇ ಪೇದೆ ಚಂದ್ರ ಎಂಬವರಿಗೂ ಕಳ್ಳರು ಚಾಕುವಿನಿಂದ ಇರಿಯಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ರಾಜ್ಯ ಸರ್ಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ತನಿಖೆ ನಡೆಸಿದ್ದ ಪೊಲೀಸರು ಅಂತಿಮವಾಗಿ ಅಕ್ಟೋಬರ್ 20ರಂದು ಆರೋಪಿಗಳಾದ ಮಧು ಮತ್ತು ಕೃಷ್ಣ ಅವರನ್ನು .ಮಹಾರಾಷ್ಟ್ರದ ನಾಗಪುರದಲ್ಲಿ ಬಂಧಿಸಿದ್ದರು.
ಪ್ರಸ್ತುತ ಈ ಪ್ರಕರಣದ ವಿಚಾರಣೆ ನ್ಯಾಯಾಲಯದ ಹಂತದಲ್ಲಿದೆ.
Advertisement