ಹಿನ್ನೋಟ 2016: ಪ್ರಮುಖ ವಿಮಾನ ದುರಂತಗಳು

ಅಂಡಮಾನ್‌- ನಿಕೋಬಾರ್‌ ದ್ವೀಪ ಸಮೂಹದಲ್ಲಿನ ಪೋರ್ಟ್‌ಬ್ಲೇರ್‌ಗೆ ನಾಲ್ವರು ಅಧಿಕಾರಿಗಳ ಸಹಿತ 29 ಮಂದಿಯನ್ನು ಹೊತ್ತೂಯ್ಯುತ್ತಿದ್ದ ವಾಯುಪಡೆಯ...
ಕೊಲಂಬಿಯಾ ಲಾಮಿಯಾ ವಿಮಾನ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿದ್ದು
ಕೊಲಂಬಿಯಾ ಲಾಮಿಯಾ ವಿಮಾನ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿದ್ದು
ಭಾರತೀಯ ವಾಯುಪಡೆಯ ಎನ್-32 ವಿಮಾನ ಕಣ್ಮರೆ: 
ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್‌- ನಿಕೋಬಾರ್‌ ದ್ವೀಪ ಸಮೂಹದಲ್ಲಿನ ಪೋರ್ಟ್‌ಬ್ಲೇರ್‌ಗೆ ನಾಲ್ವರು ಅಧಿಕಾರಿಗಳ ಸಹಿತ 29 ಮಂದಿಯನ್ನು ಹೊತ್ತೂಯ್ಯುತ್ತಿದ್ದ ವಾಯುಪಡೆಯ ಎಎನ್‌-32 ಎಂಬ ಸರಕು ಸಾಗಣೆ ವಿಮಾನ ಜುಲೈ 22ರಂದು ಬೆಳಗ್ಗೆ ನಿಗೂಢ ರೀತಿ ಕಣ್ಮರೆಯಾಯಿತು. ಈ ವಿಮಾನ ಬಂಗಾಲ ಕೊಲ್ಲಿಯಲ್ಲಿ ಪತನಗೊಂಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ.

ಈ ವಿಮಾನವನ್ನು ಶೋಧಿಸಲು ಭಾರತೀಯ ವಾಯುಪಡೆ, ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆಗಳು 9 ವಿಮಾನ, 16 ಹಡಗುಗಳನ್ನು ನಿಯೋಜಿಸಿವೆ. ಶೋಧ ಕಾರ್ಯಕ್ಕೆ ಜಲಾಂತರ್ಗಾಮಿ ನೌಕೆಯೊಂದನ್ನು ಕೂಡ ಬಳಕೆ ಮಾಡಿಕೊಳ್ಳಲಾಗಿದೆ. ಆದರೂ ನಾಪತ್ತೆಯಾದ ವಿಮಾನದ ಸುಳಿವು ಸಿಕ್ಕಿಲ್ಲ.

ಎಂದಿನಂತೆ ಸರಕು ಹೇರಿಕೊಂಡು ತಾಂಬರಂ ವಾಯುನೆಲೆಯಿಂದ ಬೆಳಗ್ಗೆ 8.30ರ ವೇಳೆಗೆ ಎಎನ್‌ 32 ವಿಮಾನ ಹಾರಾಟ ಆರಂಭಿಸಿತು. ಬೆಳಗ್ಗೆ 11.30ಕ್ಕೆ ಪೋರ್ಟ್‌ಬ್ಲೇರ್‌ನಲ್ಲಿ ಇಳಿಯಬೇಕಾಗಿತ್ತು. ಆದರೆ ಟೇಕಾಫ್ ಆದ 16 ನಿಮಿಷಗಳಲ್ಲಿ ವಿಮಾನ 23 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ರಾಡಾರ್‌ ಸಂಪರ್ಕ ಕಡಿತಗೊಂಡಿತು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾಗಿರುವ ವಿಮಾನದಲ್ಲಿ ಆರು ವಿಮಾನ ಸಿಬಂದಿ, ಇಬ್ಬರು ಪೈಲಟ್‌ ಹಾಗೂ ಒಬ್ಬ ದಿಕ್ಸೂಚಕ (ನಾವಿಗೇಟರ್‌), ಸೇನೆಯ ಇಬ್ಬರು, ಕರಾವಳಿ ಕಾವಲು ಪಡೆಯ ಓರ್ವ ಹಾಗೂ ನೌಕಾಪಡೆಯ 9 ಮಂದಿ ಸೇರಿದಂತೆ 29 ಮಂದಿ ಇದ್ದರು.

ಕೊಲಂಬಿಯಾ ವಿಮಾನ ಪತನ: 71 ಮಂದಿ ಸಾವು 
ಬ್ರೆಜಿಲ್ ನ ಪ್ರಥಮ ದರ್ಜೆ ಫುಟ್ಬಾಲ್ ತಂಡದ ಆಟಗಾರರು ಸೇರಿ 77 ಪ್ರಯಾಣಿಕರಿದ್ದ ವಿಶೇಷ ವಿಮಾನ ತಾಂತ್ರಿಕ ದೋಷದಿಂದ ನವೆಂಬರ್ 28ರಂದು ರಾತ್ರಿ ಪತನಗೊಂಡಿತ್ತು. 
ಕೊಲಂಬಿಯಾದ ಲಾ ಯೂನಿಯನ್ ಪರ್ವತ ಪ್ರದೇಶದಲ್ಲಿ ಈ ಘಟನೆ ಸಂಭವಿಸಿತ್ತು.
ಲಾಮಿಯಾ ವಿಮಾನ ಸಂಸ್ಥೆಗೆ ಸೇರಿದ ಆರ್ಜೆ 85, ಸಿಪಿ-2933 ವಿಮಾನ ಬ್ರೆಜಿಲ್ ನ ಸಾವೊ ಪೌಲೋದಿಂದ ಹೊರಟಿತ್ತು. ಬೊಲಿವಿಯಾ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದು ಮಿಡೆಲಿನ್ಗೆ ಪ್ರಯಾಣ ಬೆಳಿಸಿತ್ತು. ವಿಮಾನದಲ್ಲಿ 9 ಸಿಬ್ಬಂದಿ, ಬ್ರೆಜಿಲ್ ಫುಟ್ಬಾಲ್ ತಂಡದ ಆಟಗಾರರು ಸೇರಿದಂತೆ 77 ಪ್ರಯಾಣಿಕರಿದ್ದರು. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕುರಿತು ಪೈಲೆಟ್ ಎಚ್ಚರಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ಕೇವಲ ಆರು ಮಂದಿ ಬದುಕುಳಿದಿದ್ದು ಘಟನೆಯ ತನಿಖೆ ನಡೆಯುತ್ತಿದೆ.
ಅಪಘಾತಕ್ಕೀಡಾದ ವಿಮಾನದಲ್ಲಿ ಫುಟ್ ಬಾಲ್ ಆಟಗಾರರು ಸ್ಥಳೀಯ ಕೋಪಾಸುಡಾಮೆರಿಕ ಪಂದ್ಯಾವಳಿಯ ಫೈನಲ್ ಪಂದ್ಯವನ್ನಾಡಲು ಕೊಲಂಬಿಯಾಗೆ ತೆರಳುತ್ತಿದ್ದರು. 
ನೇಪಾಳದ ತಾರಾ ಏರ್ ಲೈನ್ಸ್ ಅಪಘಾತ:
ತಾರಾ ಏರ್ ಲೈನ್ಸ್ ಕಾರ್ಯಾಚರಣೆಯ ಒಟ್ಟರ್ ವಿಮಾನ ನೇಪಾಳದ ಪೊಕ್ರಾದಿಂದ ಜಾಮ್ಸನ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಭೂಮಿಯಿಂದ ಸಂಪರ್ಕ ಮತ್ತು ನಿಯಂತ್ರಣ ಕಳೆದುಕೊಂಡು ಪರ್ವತ ಪ್ರದೇಶದಲ್ಲಿ ಹೋಗಿ ಬಿದ್ದಿತ್ತು. ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಮತ್ತು 20 ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆ ನಡೆದಿದ್ದು ಕಳೆದ ಫೆಬ್ರುವರಿ 24ರಂದು. 
ಫ್ಲೈ ದುಬೈ ಫ್ಲೈಟ್ 981: 
ದುಬೈಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಬೊಯಿಂಗ್ 737-8 ಕೆಎನ್ ವಿಮಾನ ರಷ್ಯಾದ ರೊಸ್ತೊವ್-ಅನ್-ಡೊನ್ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುತ್ತಿರುವಾಗ ಮಾರ್ಚ್ 19ರಂದು ಅಪಘಾತಕ್ಕೀಡಾಯಿತು. ಅದರಲ್ಲಿದ್ದ ಎಲ್ಲಾ 55 ಮಂದಿ ಪ್ರಯಾಣಿಕರು ಮತ್ತು 7 ಮಂದಿ ಸಿಬ್ಬಂದಿ ಅಸುನೀಗಿದರು.
2016, ಏಪ್ರಿಲ್ 29ರಂದು ಸಿಎಚ್ ಸಿ ಹೆಲಿಕಾಪ್ಟರ್ ಸರ್ವಿಸ್ ಯುರೊಕಾಪ್ಟರ್ ಇಸಿ 225 ಸೂಪರ್ ಪುಮಾ ಹೆಲಿಕಾಪ್ಟರ್ ತೈಲ ಕೆಲಸಗಾರರನ್ನು ಹೊತ್ತು ನಾರ್ವೆ ತೀರ ದ್ವೀಪದತ್ತ ಸಾಗುತ್ತಿದ್ದಾಗ ಅಪಘಾತಕ್ಕೀಡಾಗಿ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ರೊಟಾರ್ ಸಾಧನೆ ಕಳಚಿದ್ದು ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿತು. 
ಈಜಿಪ್ಟ್ ಏರ್ ಫ್ಲೈಟ್ 804: 
ಈ ವಿಮಾನ ದುರಂತಕ್ಕೀಡಾಗಿದ್ದು ಮಾರ್ಚ್ 19ರಂದು ಮೆಡಿಟರೇನಿಯನ್ ಸಮುದ್ರಕ್ಕೆ ಬಿದ್ದು ಅದರಲ್ಲಿದ್ದ 10 ಮಂದಿ ಸಿಬ್ಬಂದಿ ಮತ್ತು 56 ಮಂದಿ ಪ್ರಯಾಣಿಕರು ನೀರು ಪಾಲಾದರು. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು. ದುರ್ಘಟನೆಯ ತನಿಖೆ ನಡೆಯುತ್ತಿದೆ. ಫ್ರಾನ್ಸ್ ನ ಪ್ಯಾರಿಸ್ ನ ಚಾರ್ಲ್ಸ್ ಡಿ ಗೌಲ್ಲೆ ವಿಮಾನ ನಿಲ್ದಾಣದಿಂದ ಈಜಿಪ್ಟ್ ನ ಕೈರೊ ವಿಮಾನ ನಿಲ್ದಾಣದತ್ತ ಹೊರಟಿತ್ತು.
ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್‌ಲೈನ್ಸ್ ಗೆ ಸೇರಿದ ವಿಮಾನ ಡಿಸೆಂಬರ್ 7ರಂದು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 47 ಪ್ರಯಾಣಿಕರು ಬಲಿಯಾಗಿದ್ದಾರೆ.
ಖೈಬರ್ ಫಖ್ತುಂಖ್ವಾದ ಚಿತ್ರಾಲ್‌ನಿಂದ ಇಸ್ಲಾಮಾಬಾದ್‌ಗೆ ಪ್ರಯಾಣಿಸುತ್ತಿದ್ದ ಪಿಕೆ-661 ವಿಮಾನ ಅಬ್ಬೊಟ್ಟಾಬಾದ್ ಸಮೀಪ ರೇಡಾರ್ ಸಂಪರ್ಕ ಕಳೆದುಕೊಂಡಿತ್ತು. ತಕ್ಷಣ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಸಮೀಪದ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನ ಪತನಕ್ಕೂ ಮುನ್ನ ಪೈಲಟ್ ತುರ್ತು ಕರೆ ಮಾಡಲು ಯತ್ನಿಸಿದ್ದ ಎಂದು ಸಂಸ್ಥೆಯ ವಕ್ತಾರ ಹೇಳಿದ್ದಾರೆ. 
2010ರಲ್ಲಿ 150 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನ ಮಳೆಯಿಂದಾಗಿ ಅಪಘಾತಕ್ಕೀಡಾಗಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು. ಬಳಿಕ ಇದೇ ಖಾಸಗಿ ಕಂಪನಿಗೆ ಸೇರಿದ ವಿಮಾನ ಎರಡು ವರ್ಷದ ಬಳಿಕ 127 ಮಂದಿಯನ್ನು ಹೊತ್ತೊಯ್ಯುವ ವೇಳೆ ಅಪಘಾತಕ್ಕೀಡಾಗಿ ಅಷ್ಟೂ ಜನರ ಸಾವಿಗೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com