ಹಿನ್ನೋಟ 2019 : ಸಾಧನೆ ಸನ್ಮಾನ; ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ನಮನ

2019 ರಲ್ಲಿ ಹಲವು ಮಹತ್ವದ ಘಟಾನಾವಳಿಗಳು ಜರುಗಿದವರು, ನೋವು- ಸಂಕಟ ಒಂದೆಡೆಯಾದರೆ ಹಲವು ಕ್ಷೇತ್ರಗಳಲ್ಲಿ ಮಹಾತ್ಕಾರ್ಯ ಸಾಧಿಸಿದ ಸಾಧಕರಿಗೆ ಹಲವು ಪ್ರಶಸ್ತಿ -ಸತ್ಕಾರಗಳು ದೊರೆತವು. ಅದರಲ್ಲಿ ಕೆಲವು ಪ್ರಮುಖ ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ.
ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಶಸ್ತಿ-ಪುರಸ್ಕಾರ
ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಶಸ್ತಿ-ಪುರಸ್ಕಾರ

2019 ರಲ್ಲಿ ಹಲವು ಮಹತ್ವದ ಘಟಾನಾವಳಿಗಳು ಜರುಗಿದವರು, ನೋವು- ಸಂಕಟ ಒಂದೆಡೆಯಾದರೆ ಹಲವು ಕ್ಷೇತ್ರಗಳಲ್ಲಿ ಮಹಾತ್ಕಾರ್ಯ ಸಾಧಿಸಿದ ಸಾಧಕರಿಗೆ ಹಲವು ಪ್ರಶಸ್ತಿ -ಸತ್ಕಾರಗಳು ದೊರೆತವು. ಅದರಲ್ಲಿ ಕೆಲವು ಪ್ರಮುಖ ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಗಾಯಕ ಭೂಪೇನ್ ಹಜಾರಿಕಾ ಹಾಗೂ ನಾನಾಜಿ ದೇಶ್ ಮುಖ್ ಅವರಿಗೆ ಪ್ರಸಕ್ತ ಸಾಲಿನ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ

ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ನಟ ಅಮಿತಾಬ್​ ಬಚ್ಚನ್  ಆಯ್ಕೆ

ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಧೀರೋದಾತ್ತ ಪ್ರದರ್ಶನ ತೋರಿದ ಐಎಎಫ್‌ನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ 'ವೀರ ಚಕ್ರ' ಪುರಸ್ಕಾರ 

ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಿಷಭ್‌ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರವು ರಾಷ್ಟ್ರ ಪ್ರಶಸ್ತಿ

ಸತ್ಯಪ್ರಕಾಶ್‌ ನಿರ್ದೇಶನದ 'ಒಂದಲ್ಲಾ ಎರಡಲ್ಲಾ ನರ್ಗಿಸ್‌ ದತ್‌ ನ್ಯಾಷನಲ್‌ ಅವಾರ್ಡ್‌ 

ಕೆಜಿಎಫ್‌–1 ಚಿತ್ರದಲ್ಲಿ ಯಶ್‌ ತೋರಿರುವ ಪ್ರದರ್ಶನಕ್ಕೆ ಇತ್ತೀಚೆಗಷ್ಟೇ ‘ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್‌ 2019’ ನೀಡಿ ಪ್ರಶಂಸಿಸಲಾಗಿದೆ. 

ಕೆಜಿಎಫ್, ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಗಳು ಸೇರಿದಂತೆ ಕನ್ನಡಕ್ಕೆ ಒಟ್ಟು 11 ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು

ವೈದ್ಯಕೀಯ ಶಾಸ್ತ್ರದ  ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ವಿಲಿಯಂ ಜಿ ಕೈಲಿನ್ ಜೂನಿಯರ್, ಸರ್ ಪೀಟರ್ ಜೆ ರಾಟ್‌ಕ್ಲಿಫ್ ಮತ್ತು ಗ್ರೆಗ್ ಎಲ್ ಸೆಮೆನ್ಜಾ ಅವರುಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

70ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಸಾಲುಮರದ ತಿಮ್ಮಕ್ಕ ಸೇರಿದಂತೆ ಕರ್ನಾಟಕದ 5 ಸಾಧಕರಿಗೆ 2019ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ . ಪ್ರಭುದೇವ (ಸಂಗೀತ,ನೃತ್ಯ), ರೋಹಿಣಿ ಗೋಡುಬಳೆ (ವಿಜ್ಞಾನ, ಇಂಜಿನಿಯರಿಂಗ್), ಶಾರದಾ ಶ್ರೀನಿವಾಸನ್ (ಪುರಾತತ್ವ), ರಾಜೀವ್ ತಾರಾನಾಥ್ (ಸಂಗೀತ, ಕಲೆ), ಸಾಲುಮರದ ತಿಮ್ಮಕ್ಕ (ಸಮಾಜ ಸೇವೆ).

ಕನ್ನಡದ ಹಿರಿಯ ಸಾಹಿತಿ ಡಾ. ವಿಜಯಾ ಅವರ ಆತ್ಮಕಥನ ‘ಕುದಿ ಎಸರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಕಟವಾಗಿದೆ. ಬರುವ ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

‘ಕಾಡು ಕನಸಿನ ಬೀದಿಗೆ’ ಕಾದಂಬರಿಗಾಗಿ 2019ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಚಂದ್ರಕಾಂತ ಕರದಳ್ಳಿ ಭಾಜನರಾದರೆ ಯುವ ಪುರಸ್ಕಾರಕ್ಕೆ ‘ಬೇರು’ ಕಾದಂಬರಿ ಗಾಗಿ ಶ್ರೀಧರ ಬನವಾಸಿ ಪಾತ್ರರಾದರು.

2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್, ನಾ. ಸೋಮೇಶ್ವರ, ಡಾ. ಗುರುರಾಜ ಕರ್ಜಗಿ ಸೇರಿ 62 ಸಾಧಕರಿಗೆ ಪ್ರದಾನ ಮಾಡಲಾಯಿತು.

ನೃಪತುಂಗ ಪ್ರಶಸ್ತಿಗೆ ಹಿರಿಯ ಕವಿ ಚೆನ್ನವೀರ ಕಣವಿ ಭಾಜನರಾದರು. ಬೆಂಗಳೂರು ಮೂಲದ ಇಂಡೋ-ಅಮೆರಿಕನ್ ಬರಹಗಾರ್ತಿ ಮಾಧುರಿ ವಿಜಯ್ ತಮ್ಮ ಚೊಚ್ಚಲ ಕೃತಿ ‘ದಿ ಫಾರ್ ಫೀಲ್ಡ್’ ಗಾಗಿ ಜೆಸಿಬಿ ಪ್ರಶಸ್ತಿಗೆ ಪಾತ್ರರಾದರು. – 25 ಲಕ್ಷ  ರೂ. ನಗದು ಪುರಸ್ಕಾರವುಳ್ಳ ಇದು ದೇಶದಲ್ಲಿ ಅತಿಹೆಚ್ಚು ನಗದು ನೀಡುವ ಸಾಹಿತ್ಯ ಪ್ರಶಸ್ತಿಯಾಗಿದೆ.

ವಿವೇಕ ರೈ, ಎಚ್.ಎಸ್. ವೆಂಕಟೇಶಮೂರ್ತಿ, ದೇಶಾಂಶ ಹುಡಗಿ, ಸಾಯಿಸುತೆ, ಎ.ಕೆ. ಹಂಪಣ್ಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ. ಕುಪ್ಪನಹಳ್ಳಿ ಭೈರಪ್ಪ ಅವರಿಗೆ ಬಾದರಾಯಣ ವ್ಯಾಸ ಸಮ್ಮಾನ್ ಹೆಸರಿನಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪತಿ ಪುರಸ್ಕಾರ.

ಕಾಯ್ಕಿಣಿಗೆ ಡಿಎಸ್​ಸಿ ಪ್ರಶಸ್ತಿ: ಜಯಂತ್ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ ಪ್ಲೀಸ್’ ಕೃತಿಗೆ ದಕ್ಷಿಣ ಏಷ್ಯಾ ಸಾಹಿತ್ಯ ಡಿಎಸ್​ಸಿ ಪ್ರಶಸ್ತಿ. ಈ ಕಥೆಗಳನ್ನು ಅನುವಾದ ಮಾಡಿದ ತೇಜಸ್ವಿನಿ ನಿರಂಜನ ಕೂಡ 25 ಸಾವಿರ ಡಾಲರ್ ಮೊತ್ತದ ಈ ಪ್ರಶಸ್ತಿ ಹಂಚಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com