ಪೂಜಾ ಹೆಗ್ಡೆ - ರಶ್ಮಿಕಾ ಮಂದಣ್ಣ - ಸಮಂತಾ
ಪೂಜಾ ಹೆಗ್ಡೆ - ರಶ್ಮಿಕಾ ಮಂದಣ್ಣ - ಸಮಂತಾ

2022ರಲ್ಲಿ ತೆಲುಗು ಚಿತ್ರರಂಗವನ್ನು ಆಳಿದ ಟಾಪ್ 3 ನಾಯಕಿಯರಿವರು, ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ತೆಲುಗು ಚಿತ್ರರಂಗವು 2022 ರಲ್ಲಿ ಆರ್‌ಆರ್‌ಆರ್, ಸೀತಾ ರಾಮಂ, ಕಾರ್ತಿಕೇಯ 2, ಬಿಂಬಿಸಾರ ಮತ್ತು ಮೇಜರ್ ಸೇರಿದಂತೆ ಕೆಲವು ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದೆ. ತೆಲುಗು ಚಿತ್ರರಂಗದಲ್ಲಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ನಟಿಯರು ಭರ್ಜರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.
Published on

ತೆಲುಗು ಚಿತ್ರರಂಗವು 2022 ರಲ್ಲಿ ಆರ್‌ಆರ್‌ಆರ್, ಸೀತಾ ರಾಮಂ, ಕಾರ್ತಿಕೇಯ 2, ಬಿಂಬಿಸಾರ ಮತ್ತು ಮೇಜರ್ ಸೇರಿದಂತೆ ಕೆಲವು ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದೆ. ತೆಲುಗು ಚಿತ್ರರಂಗದಲ್ಲಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ನಟಿಯರು ಭರ್ಜರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಹಾಗಾದರೆ, ಟಾಲಿವುಡ್ ಅನ್ನು ಆಳುತ್ತಿರುವ ಈ ಮೂವರು ಸುಂದರಿಯರು ಯಾರೆಂದು ತಿಳಿಯೋಣ ಬನ್ನಿ...

ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಈ ವರ್ಷ ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಮತ್ತು ಆಚಾರ್ಯ ಚಿತ್ರದಲ್ಲಿ ಚಿರಂಜೀವಿ ಹಾಗೂ ರಾಮ್‌ ಚರಣ್ ಜೊತೆಗೆ ಕಾಣಿಸಿಕೊಂಡಿದ್ದರು.  

ಅವರು F3; ಫನ್ ಅಂಡ್ ಫ್ರಸ್ಟ್ರೇಷನ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು, ಆ ಸಿನಿಮಾ ಕೂಡ ಹಿಟ್ ಆಗಿತ್ತು. ರಾಧೆ ಶ್ಯಾಮ್ ಮತ್ತು ಆಚಾರ್ಯ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಗಿದ್ದರೂ, ಇದು ಪೂಜಾ ಹೆಗ್ಡೆಯ ಜನಪ್ರಿಯತೆ ಅಥವಾ ಮಾರುಕಟ್ಟೆಯನ್ನು ಕುಗ್ಗಿಸಿಲ್ಲ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಅವರು ಮಹೇಶ್ ಬಾಬು ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಜೊತೆಗಿನ ಅವರ 2022ರ ತಮಿಳು ಚಿತ್ರ ಬೀಸ್ಟ್ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.

ಈಮಧ್ಯೆ, ಅವರು ರಣವೀರ್ ಸಿಂಗ್ ಅವರೊಂದಿಗೆ ಹಿಂದಿ ಸಿನಿಮಾ ಸರ್ಕಸ್‌ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿ. 23ರಂದು ಬಿಡುಗಡೆಯಾಗಲಿದೆ. ನಟಿ ಪಡೆಯುವ ಸಂಭಾವನೆ ಎಷ್ಟು? ಚಿತ್ರರಂಗದ ಒಳಗಿನವರು ಹೇಳುವ ಪ್ರಕಾರ, ಆಕೆ ಒಂದು ಚಿತ್ರಕ್ಕೆ ಸುಮಾರು 4 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ರಶ್ಮಿಕಾ ಮಂದಣ್ಣ

ಕನ್ನಡ ಸಿನಿಮಾದಿಂದ ತೆಲುಗಿಗೆ ಬಂದ ನಟಿ ರಶ್ಮಿಕಾ ಮಂದಣ್ಣ ಅವರು, ಬಹುತೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2021ರಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ:ದಿ ರೈಸ್ ಸಿನಿಮಾದಲ್ಲಿ ನಟಿಸಿದ್ದು, ಚಿತ್ರವು ವ್ಯಾಪಕ ಯಶಸ್ಸನ್ನು ಕಂಡಿತು. ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಈ ವರ್ಷ ಬಿಡುಗಡೆಯಾಗಿದ್ದು, ಮೀಕು ಜೋಹಾರ್ಲು ಮತ್ತು ಸೀತಾ ರಾಮಮ್. ಶರ್ವಾನಂದ ಅವರ ಜೊತೆಗಿನ ಆಡವಾಳು ಮೀಕು ಜೋಹಾರ್ಲು ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಆದರೆ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರೊಂದಿಗಿನ ಅವರ ಸೀತಾ ರಾಮಂ ಚಿತ್ರವು ಈ ವರ್ಷದ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ.

2023 ರಲ್ಲಿ, ರಶ್ಮಿಕಾ ವಿಜಯ್ ಜೊತೆ ವಾರಿಸು ಜೊತೆಗೆ ಅಲ್ಲು ಅರ್ಜುನ್ ಜೊತೆಗೆ ಪುಷ್ಪ 2: ದಿ ರೂಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ರಣಬೀರ್ ಕಪೂರ್ ಅವರ ಹಿಂದಿಯ ಮಿಷನ್ ಮಜ್ನು ಸಿನಿಮಾ ಕೂಡ ತೆರೆಕಾಣಲಿದೆ. ರಶ್ಮಿಕಾ ಮಂದಣ್ಣ ಅವರು ಒಂದು ಚಿತ್ರಕ್ಕೆ 3 ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ.

ಸಮಂತಾ

2022 ರಲ್ಲಿ ನಟಿ ಸಮಂತಾ ನಟನೆಯ ಒಂದು ತೆಲುಗು ಚಿತ್ರ ಯಶೋದಾ ಮತ್ತು ತಮಿಳು ಚಿತ್ರ ಕಾತುವಾಕುಲ ರೆಂಡು ಕಾದಲ್ ಬಿಡುಗಡೆ ಕಂಡವು. ಈ ಎರಡೂ ಚಿತ್ರಗಳು ಹಿಟ್ ಆದವು. ನಟಿಗೆ ಅಂಟಿರುವ ಮೈಯೋಸಿಟಿಸ್ ರೋಗದ ನಂತರ, ಸದ್ಯ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ.

ಅವರು 2023 ರಲ್ಲಿ ಶಾಕುಂತಲಂ ಮತ್ತು ವಿಜಯ ದೇವರಕೊಂಡ ಜೊತೆಗಿನ ಖುಷಿ ಚಿತ್ರಗಳೊಂದಿಗೆ ಅಬ್ಬರದೊಂದಿಗೆ ಮರಳುವ ಸಾಧ್ಯತೆಯಿದೆ.

2023ರಲ್ಲಿ ಈ ನಟಿಯಿಂದ ಎದುರುನೋಡಲು ಇನ್ನೂ ಸಾಕಷ್ಟು ಹೊಸ ಸಿನಿಮಾಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com