2022 ಹಿನ್ನೋಟ: ಬಾಲಿವುಡ್ ನಲ್ಲಿ ವರ್ಷವಿಡೀ ಸುದ್ದಿಯಲ್ಲಿದ್ದ ಆಲಿಯಾ, ದೀಪಿಕಾ.. ಲತಾ ದೀದಿ ಅಸ್ತಂಗತ

ನಟಿಯೊಬ್ಬರು ವರ್ಷವಿಡೀ ಸುದ್ದಿಯಲ್ಲಿರುವುದು ಅಪರೂಪ, ಆದರೆ 2022ರಲ್ಲಿ ಹೆಚ್ಚು ಸುದ್ದಿಯಲ್ಲಿದ್ದವರು ಬಾಲಿವುಡ್ ನ ಸುದ್ದಿಯಲ್ಲಿದ್ದರು ಆಲಿಯಾ ಭಟ್, ಬಾಲಿವುಡ್ ನಲ್ಲಿ ಆಲಿಯಾ ಸದ್ಯ ಬೇಡಿಕೆಯಲ್ಲಿರುವ ನಟಿ. 2022 ಆಲಿಯಾ ಭಟ್ ಗೆ ಅತ್ಯಂತ ವಿಶೇಷ.
ದೀಪಿಕಾ ಪಡುಕೋಣೆ-ಆಲಿಯಾ ಭಟ್
ದೀಪಿಕಾ ಪಡುಕೋಣೆ-ಆಲಿಯಾ ಭಟ್
Updated on

ನಟಿಯೊಬ್ಬರು ವರ್ಷವಿಡೀ ಸುದ್ದಿಯಲ್ಲಿರುವುದು ಅಪರೂಪ, ಆದರೆ 2022ರಲ್ಲಿ ಹೆಚ್ಚು ಸುದ್ದಿಯಲ್ಲಿದ್ದವರು ಬಾಲಿವುಡ್ ನ ಸುದ್ದಿಯಲ್ಲಿದ್ದರು ಆಲಿಯಾ ಭಟ್, ಬಾಲಿವುಡ್ ನಲ್ಲಿ ಆಲಿಯಾ ಸದ್ಯ ಬೇಡಿಕೆಯಲ್ಲಿರುವ ನಟಿ. 2022 ಆಲಿಯಾ ಭಟ್ ಗೆ ಅತ್ಯಂತ ವಿಶೇಷ.

ಆಲಿಯಾ ಭಟ್: ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿವಾಡಿ ಸಿನಿಮಾದಲ್ಲಿ ನಟಿಸಿ ಅದ್ಭುತ ಪ್ರದರ್ಶನ ನೀಡಿ ವಿಮರ್ಶಕರಿಂದ, ಪ್ರೇಕ್ಷಕರಿಂದ ಶಹಬ್ಬಾಸ್ ಎನಿಸಿಕೊಂಡರು. ಇದು ಬರ್ಲಿನೇಲ್ ಸ್ಪೆಷಲ್ ಗಾಲಾ ವಿಭಾಗದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್ ಪ್ರದರ್ಶನ ಕಂಡಿತು, ಮತ್ತೊಂದು ಪ್ಲಸ್ ಪಾಯಿಂಟ್ ಆಲಿಯಾ ಭಟ್ ಗೆ ದಕ್ಷಿಣದ ಮೋಸ್ಟ್ ಸೆನ್ಸೇಷನ್ ನಿರ್ದೇಶಕ ಬಾಹುಬಲಿ ಖ್ಯಾತಿಯ ಎಸ್ ಎಸ್ ರಾಜಮೌಳಿಯವರ ಆರ್ ಆರ್ ಆರ್ ಸಿನಿಮಾದಲ್ಲಿ ನಟನೆ. 

ಒಂದೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಾಗಿಲು ಹಾಕಿದ್ದ ಥಿಯೇಟರ್ ಗಳು ಬಾಗಿಲು ತೆಗೆದು ಪ್ರೇಕ್ಷಕರು ಬರಲಾರಂಭಿಸಿದರು. ಆರ್ ಆರ್ ಆರ್ ಚಿತ್ರ ಗೆದ್ದಿತು. 

ಅಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ: ಭಾಗ 1: ಸೆಪ್ಟೆಂಬರ್ 9ರಂದು ಬಿಡುಗಡೆಯಾಗಿ ಟಾಪ್ ಗಳಿಕೆಯಾಗಿದೆ. ಆಲಿಯಾ ಮತ್ತು ರಣಬೀರ್ ಕಪೂರ್ ನಟನೆ ಮಿಶ್ರ ಪ್ರತಿಕ್ರಿಯೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಕೊಂಚ ಮಟ್ಟಿಗೆ ಗಳಿಕೆ ಕಂಡಿತು. 

ನಿಜ ಜೀವನದಲ್ಲಿ, ಐದು ವರ್ಷಗಳ ಕಾಲ ಡೇಟಿಂಗ್ ಮಾಡಿ 2022ರ ಏಪ್ರಿಲ್ ನಲ್ಲಿ ಆಲಿಯಾ-ರಣಬೀರ್ ವಿವಾಹ ಬಂಧನಕ್ಕೊಳಗಾದರು. ಮದುವೆಯಾದ ಎರಡೇ ತಿಂಗಳಲ್ಲಿ ಪೋಷಕರಾಗುವ ಸಿಹಿಸುದ್ದಿ ಹಂಚಿಕೊಂಡ ಈ ಜೋಡಿಗೆ ಇತ್ತೀಚೆಗೆ ರಾಹಾ ಎಂಬ ಮಗಳು ಹುಟ್ಟಿದಳು.

ಈ ನಡುವೆ, ವಂಡರ್ ವುಮನ್ ಗಾಲ್ ಗಡೋಟ್ ಮತ್ತು ಫಿಫ್ಟಿ ಷೇಡ್ಸ್ ಆಫ್ ಗ್ರೇ ನಟ ಜೇಮಿ ಡೋರ್ನಾನ್ ಅವರ ಮೊದಲ ಹಾಲಿವುಡ್ ಚಿತ್ರವಾದ ಹಾರ್ಟ್ ಆಫ್ ಸ್ಟೋನ್ ಚಿತ್ರೀಕರಣಕ್ಕಾಗಿ ಆಲಿಯಾ ಲಂಡನ್‌ಗೆ ತೆರಳಿದರು.

ಬಾಯ್ಕಾಟ್ ಬಾಲಿವುಡ್: 2020ರ ಜೂನ್ ತಿಂಗಳಲ್ಲಿ ಬಾಲಿವುಡ್ ನ ಜನಪ್ರಿಯ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ದಿಢೀರ್ ಸಾವಿನ ನಂತರ ಹಿಂದಿ ಚಲನಚಿತ್ರೋದ್ಯಮದ ಕಲಾವಿದರು ವಿಶೇಷವಾಗಿ ದಕ್ಷಿಣ ಭಾರತೀಯ ಪ್ರೇಕ್ಷಕರಿಂದ ವಿರೋಧ ಎದುರಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. 

ಬಾಲಿವುಡ್ ಬಾಯ್ಕಾಟ್ ಕಳೆದೆರಡು ವರ್ಷಗಳಿಂದ ವ್ಯಾಪಕವಾಗಿದ್ದು, ಇದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೂ ತಟ್ಟಿದೆ. 

ಹಿಂದೂ ವಿರೋಧಿ, ರಾಷ್ಟ್ರಪ್ರೇಮ, ಆರ್ ಎಸ್ ಎಸ್, ಬಲಪಂಥೀಯ ಈ ವಿಚಾರಗಳು ಬಾಯ್ಕಾಟ್ ಬಾಲಿವುಡ್ ನ ಸುತ್ತ ಸುತ್ತಿತ್ತಿವೆ. ಕೆಲ ತಿಂಗಳ ಹಿಂದೆ ತೆರೆಕಂಡ ಅಮೀರ್ ಖಾನ್-ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಛಡ್ಡಾಗದೆ ಇದರ ಬಿಸಿ ಮುಟ್ಟಿ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. ರಣವೀರ್ ಸಿಂಗ್, ರಣಬೀರ್ ಕಪೂರ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಮಿತಾಬ್ ಬಚ್ಚನ್ ನಂತಹ ಘಟಾನುಘಟಿ ನಾಯಕರ ಚಿತ್ರಗಳೇ 2022ರಲ್ಲಿ ತೆರೆಕಂಡು ಸೋತಿವೆ.

ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಅವರು 75 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಕಪ್ಪು ಮತ್ತು ಚಿನ್ನದ ಲೂಯಿ ವಿಟಾನ್ ಗೌನ್‌ನಲ್ಲಿ ನಡೆದು ಸಂಚಲನ ಮೂಡಿಸಿದರು, ಪ್ರಸಿದ್ಧ ಬ್ರ್ಯಾಂಡ್‌ನ ಮೊದಲ ಭಾರತೀಯ ರಾಯಭಾರಿಯಾಗಿದ್ದರು. 

ಎಂಟು ಸದಸ್ಯರ ಕ್ಯಾನೆಸ್ ಸ್ಪರ್ಧೆಯ ತೀರ್ಪುಗಾರರ ಭಾಗವಾಗಿ ಅವರು ಫ್ರೆಂಚ್ ರಿವೇರಿಯಾದಲ್ಲಿ ಪತಿ ರಣವೀರ್ ಸಿಂಗ್ ಅವರ ಜೊತೆ ಭಾಗಿಯಾಗಿದ್ದರು. ಸರ್ಕಸ್ ಐಟಂ ಸಾಂಗ್, ಕರೆಂಟ್ ಲಗಾ ರೇ ನಟನೆ, ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರು ಲೇಡಿ ಸಿಂಗಮ್ ಆಗಿ, ದೀಪಿಕಾ ಕಾಣಿಸಿಕೊಂಡರು. 

ಗೆಹ್ರೈಯಾನ್‌ನೊಂದಿಗೆ ಹೊಸ ವಿಭಿನ್ನ ಗೆಟಪ್ ನಲ್ಲಿ ದೀಪಿಕಾ ಕಾಣಿಸಿಕೊಂಡರೂ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಇದೀಗ ನಟಿ ಶಾರುಖ್ ಖಾನ್‌ರ ಪಠಾಣ್, ಎಸ್‌ಆರ್‌ಕೆ ಅವರ ಜವಾನ್‌ನಲ್ಲಿ ವಿಶೇಷ ಪಾತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೃತಿಕ್ ರೋಷನ್‌ನೊಂದಿಗೆ ಫೈಟರ್, ಅಮಿತಾಬ್ ಬಚ್ಚನ್ ಜೊತೆ ಇಂಟರ್ನ್ ಮತ್ತು ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ ಮೂಲಕ 2023ರಲ್ಲಿ ದೀಪಿಕಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 

ಇತ್ತೀಚೆಗೆ ನಿವೃತ್ತ ಸ್ಪ್ಯಾನಿಷ್ ಫುಟ್ಬಾಲ್ ತಾರೆ ಐಕರ್ ಕ್ಯಾಸಿಲ್ಲಾಸ್ ಅವರೊಂದಿಗೆ ದೀಪಿಕಾ ಫಿಫಾ ವಿಶ್ವಕಪ್ ಲೋಗೋ ಅನಾವರಣಗೊಳಿಸಿದರು.

ಯುಗವೊಂದರ ಅಂತ್ಯ: 2022ರ ಫೆಬ್ರವರಿ 6 ರಂದು, 92 ನೇ ವಯಸ್ಸಿನಲ್ಲಿ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ 28 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗಾನಕೋಗಿಲೆ ಲತಾ ಮಂಗೇಶ್ಕರ್ ಕೊನೆಯುಸಿರೆಳೆದರು.
ತಮ್ಮ ಏಳು ದಶಕಗಳ ವೃತ್ತಿಜೀವನದಲ್ಲಿ ಹಲವಾರು ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಮೆಲೋಡಿ ಕ್ವೀನ್ ಅವರು ಪದ್ಮಭೂಷಣ, ಪದ್ಮವಿಭೂಷಣ, ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಭಾರತ ರತ್ನಕ್ಕೆ ಭಾಜನರಾಗಿದ್ದರು.

ಅದಾಗಿ ಒಂಬತ್ತು ದಿನಗಳ ನಂತರ,  ಡಿಸ್ಕೋ ಕಿಂಗ್ ಬಪ್ಪಿ ಲಹಿರಿಯನ್ನು ಕಳೆದುಕೊಂಡೆವು ಸಂತೂರ್ ಮಾಂತ್ರಿಕ ಮತ್ತು ಸಂಗೀತ ಸಂಯೋಜಕ ಶಿವ ಕುಮಾರ್ ಶರ್ಮಾ ಅವರು ಕೊನೆಯುಸಿರೆಳೆದರು. 

ನಟ-ಹಾಸ್ಯಗಾರ ರಾಜು ಶ್ರೀವಾಸ್ತವ್, ನಟ-ಚಿತ್ರಕಥೆಗಾರ ಶಿವ ಸುಬ್ರಮಣ್ಯಂ ಮತ್ತು ನಟ-ನಿರ್ದೇಶಕ ಸಲೀಂ ಘೌಸ್ ಅವರಂತೆ ವಿಕ್ರಮ್ ಗೋಖಲೆ ಕೊನೆಯುಸಿರೆಳೆದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com