ಲಕ್ಮೀಯನ್ನು ಆಕರ್ಷಿಸುವ ವಸ್ತುಗಳು ಯಾವುದು ಗೊತ್ತಾ...?

ಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಲು ತೆಂಗಿನಕಾಯಿ ಸದಾ ಮನೆಯಲ್ಲಿ ಇರಬೇಕೆಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
  • ಲಕ್ಷ್ಮೀ ದೇವಿಗೆ ನೆಚ್ಚಿನ ಫಲ ತ್ರಿಫಲ ಅಥವಾ ತೆಂಗಿನಕಾಯಿ. ಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಲು ತೆಂಗಿನಕಾಯಿ ಸದಾ ಮನೆಯಲ್ಲಿ ಇರಬೇಕೆಂದು ಹೇಳಲಾಗುತ್ತೆ. ಇದು ಲಕ್ಷ್ಮೀಯನ್ನು ಆಕರ್ಷಿಸುವ ಅತ್ಯಂತ ಪವಿತ್ರ ಫಲವೆಂದು ಪರಿಗಣಿಸಲ್ಪಟ್ಟಿದೆ.
  • ಕವಡೆಗಳು ಸಮುದ್ರ ಜನ್ಯ ವಸ್ತುವಾಗಿದೆ. ಲಕ್ಷ್ಮೀ ದೇವಿಯು ಸಹ ಸಮುದ್ರದಲ್ಲಿ ಜನಿಸಿದ ಕಾರಣದಿಂದ ಈಕೆಗೆ ಕವಡೆ ಎಂದರೆ ಪ್ರೀತಿ. ಹೀಗಾಗೇ ಕವಡೆಗಳನ್ನು ಮನೆಯಲ್ಲಿ ಇಡುವ ಮೂಲಕ ಆಕೆಯನ್ನು ಆಕರ್ಷಿಸಬಹುದು ಎಂದು ಹೇಳಲಾಗುತ್ತೆ.
  • ಲಕ್ಷ್ಮೀ ಮತ್ತು ಗಣಪತಿ ಮೂರ್ತಿಯನ್ನು ಒಟ್ಟಿಗೆ ಇಟ್ಟು ಪೂಜಿಸುವುದು ಅತ್ಯಂತ ಶುಭವಂತೆ. ಗಣಪತಿಯ ಜೊತೆಗೆ ಲಕ್ಷ್ಮೀಯನ್ನು ಪೂಜಿಸಿದರೆ ಆಕೆಗೆ ಮತ್ತಷ್ತಟು ಸಂತೋಷವಾಗುತ್ತದೆಯಂತೆ. ಅದರಲ್ಲೂ ಈ ಎರಡೂ ಮೂರ್ತಿಗಳು ಬೆಳ್ಳಿಯದ್ದಾಗಿದ್ರೆ, ಆ ಮನೆಯಲ್ಲಿ ಸಂಪತ್ತು, ಐಶ್ವರ್ಯ ಎಂದಿಗೂ ಕಡಿಮೆಯಾಗುವುದಿಲ್ಲ ಎನ್ನುವುದು ಪುರಾತನ ನಂಬಿಕೆ.
  • ಶಂಖದಲ್ಲಿ ನೀರನ್ನು ತುಂಬಿ ಅದನ್ನು ದಕ್ಷಿಣಾಭಿಮುಖವಾಗಿ ಇಡುವ ಮೂಲಕ ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಬಹುದು.
  • ಲಕ್ಷ್ಮೀ ಕಮಲದ ಹೂವಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಹೀಗಾಗೇ ಕಮಲದ ಬೀಜಗಳ ಜಪಮಾಲೆಯನ್ನು ಮನೆಯಲ್ಲಿ ಇಡುವುದರಿಂದ ಸಾಕ್ಷಾತ್ ಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತೆ.
  • ಪಾದರಸ ಮಹಾಲಕ್ಷ್ಮೀಗೆ ಅತ್ಯಂತ ಪ್ರಿಯವಾದ ವಸ್ತು. ಹೀಗಾಗಿ ಲಕ್ಷ್ಮೀ, ಗಣಪತಿಯ ಪಾದರಸದ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀ ನಮ್ಮ ಮನೇಯಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
  • ಮೋತಿ ಶಂಕವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸದಾ ಶಾಂತಿ ನೆಲೆಸಿರುತ್ತದೆ.
  • ಲಕ್ಷ್ಮೀ ದೇವಿಯ ಬೆಳ್ಳಿಯ ಹೆಜ್ಜೆ ಗುರುತುಗಳನ್ನು ಮನೆಯಲ್ಲಿ ಹಣವಿಡುವ ದಿಕ್ಕಿಗೆ ಮುಖಮಾಡಿ ಇಡುವುದರಿಂದ ಸಕಲ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತೆ.
  • ಶ್ರೀಯಂತ್ರಕ್ಕೆ ಸಂಪತ್ತನ್ನು ಆಕರ್ಷಿಸುವ ಅದ್ಭುತ ಶಕ್ತಿ ಇದೆ. ಹೀಗಾಗಿ ಶ್ರೀಯಂತ್ರವನ್ನು ದೇವರ ಮನೆಯಲ್ಲಿ ಇಡುವುದರಿಂದ ಮನೆ ಸಂಪದ್ಭರಿತವಾಗುತ್ತೆ.
    - ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com