ಕಮಲಾ, ಪದ್ಮಾ, ಸರೋಜ, ಸರಸಿಜ, ಪಂಕಜಾ, ನೀರಜಾ ಮುಂತಾದ ಕಮಲದ ನಾಮಗಳೇ ಲಕ್ಷ್ಮಿಯ ನಾಮಗಳಾಗಿಬಿಟ್ಟಿವೆ! ಆಕೆ ಕಮಲದ ಕಣ್ಣವಳು, ಕಮಲದ ಮೊಗದವಳು, ಕಮಲವ ಕೈಯಲ್ಲಿ ಹಿಡಿದವಳು, ಕಮಲನಾಭನ ಹೃದಯಕಮಲದಲಿ ನಿಂದವಳು, ಕಮಲಿನೀ, ಕಮಲೆ ಎಲ್ಲವೂ ಆಗಿದ್ದಾಳೇ ಎಂದು ಹಾಡಿಭಜಿಸುತ್ತೇವೆ. ಲಕ್ಷ್ಮಿಯನ್ನು ಚಿತ್ರಿಸಬೇಕಾದರೆ ಆಕೆ ಕಮಲದಲ್ಲಿ ನಿಂತೋ ಕುಳಿತೋ ಇರುತ್ತಾಳೆ. ಕೈಯಲ್ಲೂ ಕಮಲವನ್ನು ಹಿಡಿದುರುತ್ತಾಳೆ. ಕಮಲದ ಕೆಂಪೇ ಲಕ್ಷಿಯ ಸೇರಯ ಬಣ್ಣ. ಇಕ್ಕೆಲಗಳಲ್ಲಿ ಶ್ವೇತಗಜಗಳು ಆಕೆಯನ್ನು ಕಮಲಗಳಿಂದ ಅರ್ಚಿಸುತ್ತವೆ. ಹಾಲ್ಗಡಲಲ್ಲಿ ಜನಿಸಿದ ಲಕ್ಷ್ಮಿಯನ್ನು ಪಡೆಯಲು "ನಾ ಮುಂದು ತಾ ಮುಂದು" ಎಂದು ಹಪಹಪಿಸಿದ ದೇವ=ದಾನವ-ಮಾನವ-ಯಕ್ಷ-ಗಂಧರ್ವ-ಕಿನ್ನರ-ಕಿಂಪುರುಷ-ಸಿದ್ಧ-ವಿದ್ಯಾಧರಾದಿಗಳನ್ನು ನಿರ್ಲಕ್ಷಿಸಿ, ನಿರ್ಲಿಪ್ತಭಾವದಿಂದ ಕುಳಿತಿದ್ದ ಶಾಂತಮೂರ್ತಿ ಮಹಾವಿಷ್ಣುವಿನ ಕೊರಳಿಗೆ ವರಮಾಲೆಯನ್ನು ಹಾಕಿದಳಂತೆ! ಕಮಲದಂತೆ ನಿರ್ಲಿಪ್ತಿಯಿದ್ದಲ್ಲಿ ಶ್ರೀಲಕ್ಷ್ಮಿಯು ತಾನಾಗಿ ಒಲಿದುಬರುತಾಳೆ ಎನ್ನುವ ಸುಂದರ ಸಂದೇಶ ಇಲ್ಲಿದೆ! ಲಕ್ಷ್ಮಿಯ ಪೂಜೆಯಲ್ಲಿ ಕಮಲಗಳ ಅಲಂಕಾರ, ಕಮಲದ ಹೂಗಲಿಂದ ಅರ್ಚನೆ ಮುಖ್ಯವದ ಅಂಗವಾಗುತ್ತದೆ. ಸೌಂದರ್ಯಕ್ಕಾಗಿ ಮಾಡುವ ‘ಕಾಂತಿವ್ರತ’ದಲ್ಲಿ ಹಾಲುತುಂಬಿದ ಕಲಶದಲ್ಲಿ ಕಮಲದ ದಳಗಳನ್ನು ಹಾಕಿ ವೇದಪಾರಂಗತನಿಗೆ ದಾನಗೈಯುವ ಪದ್ಧತಿಯುಂಟು! ಲಕ್ಶ್ಮೀಯನ್ನು ಕೇವಲ ‘ಹಣ ಆಸ್ತಿ’ ಅಷ್ಟೇ ಅಲ್ಲ. ಜೀವನದಲ್ಲಿ ನಮಗೆ ಪೋಷಕವಾದ ಎಲ್ಲ ಶಕ್ತಿಗಳೂ ಲಕ್ಷ್ಮೀ ಸ್ವರೂಪಗಳೇ. ಹಣ ಮಾತ್ರ ಇದ್ದರೇ ಸಾಕೆ? ಅದರೊಂದಿಗೆ ಆಹಾರ, ಆರೋಗ್ಯ, ಬಂಧುಬಳಗ, ವಸತಿ, ಸಂತಾನ, ಸ್ಥಾನಮಾನ, ಮಳೆಬೆಳೆ, ಸಸ್ಯಸಂಪತ್ತು, ಪಶುಸಂಪತ್ತು, ಸುರಕ್ಷೆ, ವಿದ್ಯೆ, ಕೀರ್ತಿ, ಯಶಸ್ಸು, ಧೈರ್ಯ, ಜನಬಲ-ಧನಬಲಗಳು, ನೆಮ್ಮದಿ, ಸಂತೃಪ್ತಿಗಳೂ ಬೇಡವೇ? ಈ ಎಲ್ಲವೂ ಶ್ರೀಕ್ಷ್ಮೀಯ ಸ್ವರೂಪಗಳೆ ಎನ್ನುವುದನ್ನು ಆಕೆಯ ಅಷ್ಟಲಕ್ಷ್ಮೀಸ್ವರೂಪವು ಸಾರುತ್ತಿದೆ. ಮೋಸ-ಕಪಟ-ಅನ್ಯಾಯ-ಕುಮಾರ್ಗಳಿಂದ ಪಡೆಯುವ ಹಣವು ಶ್ರೀಲಕ್ಷ್ಮಿಯಲ್ಲ, ಅಲಕ್ಷ್ಮಿ. ವಸ್ತುಸೌಲಭ್ಯಗಳನ್ನಷ್ಟೇ ಒದಗಿಸುವ ಅಂತಹ ಅಲಕ್ಷ್ಮಿಯು