ಶಿವಪ್ರಿಯ ಬಿಲ್ವಪತ್ರೆಯ ವಿಶೇಷತೆ

ಶಿವರಾತ್ರಿಯಂದು ಬಿಲ್ವಪತ್ರೆಗೆ ಬಹಳ ವಿಶೇಷ ಮಹತ್ವವಿದೆ. ಶಿವನನ್ನು ಜಲಪ್ರಿಯ ಹಾಗೂ ಬಿಲ್ವ ಪ್ರಿಯ ಎಂದು ಕರೆಯುವುದುಂಟು. ಬಿಲ್ವಪತ್ರೆಯಲ್ಲಿ ಶಿವನಿಗೆ ಪೂಜೆ ಮಾಡಿದರೆ, ಶಿವನ ಪ್ರೀತಿಗೆ ಪಾತ್ರರಾಗುತ್ತಾರೆಂದು ಹೇಳಲಾಗುತ್ತದೆ...
ಶಿವಪ್ರಿಯ ಬಿಲ್ವಪತ್ರೆಯ ವಿಶೇಷತೆ
ಶಿವಪ್ರಿಯ ಬಿಲ್ವಪತ್ರೆಯ ವಿಶೇಷತೆ
Updated on

ಶಿವರಾತ್ರಿಯಂದು ಬಿಲ್ವಪತ್ರೆಗೆ ಬಹಳ ವಿಶೇಷ ಮಹತ್ವವಿದೆ.  ಶಿವನನ್ನು ಜಲಪ್ರಿಯ ಹಾಗೂ ಬಿಲ್ವ ಪ್ರಿಯ ಎಂದು  ಕರೆಯುವುದುಂಟು. ಬಿಲ್ವಪತ್ರೆಯಲ್ಲಿ ಶಿವನಿಗೆ ಪೂಜೆ ಮಾಡಿದರೆ,  ಶಿವ ಪ್ರೀತಿಗೆ  ಪಾತ್ರವಾಗುತ್ತಾರೆಂದು ಹೇಳಲಾಗುತ್ತದೆ.

ಬಿಲ್ವ ಪತ್ರೆ ಮರದಲ್ಲಿರುವ ಮುಳ್ಳು ಶಕ್ತಿ ಮಾತೆಯನ್ನು, ಗಿಡದ  ಕೊಂಬೆಗಳು ವೇದಗಳನ್ನು ಹಾಗೂ ಮರದ ಬೇರುಗಳು  ಈಶ್ವರನನ್ನು ಸೂಚಿಸುತ್ತದೆ. ಬಿಲ್ವಪತ್ರೆಯಲ್ಲಿ ಮೂರು  ದಳಗಳಿರುತ್ತವೆ. ಒಂದೊಂದು ದಳವು  ಒಂದೊಂದು ಗುಣಗಳನ್ನು  ಹೊಂದಿರುತ್ತದೆ. ಅವುಗಳು ಸತ್ಯ, ರಜೋ, ತಮಾ ಗುಣಗಳನ್ನು  ಸೂಚಿಸುತ್ತದೆ. ಈ ಮೂರು ದಳಗಳು ಶಿವನಿಗೆ ಮೂರು  ಕಣ್ಣುಗಳು ಎಂಬ ನಂಬಿಕೆ ಇದೆ. ಮೂರು ದಳ, ಮೂರು  ಆಕಾರ,  ಮೂರು ಕಣ್ಣು ಹಾಗೂ ಮೂರು ಆಯುಧವನ್ನು ಹೊಂದಿರುವುದು ಒಂದು ಬಿಲ್ವಪತ್ರೆ. ಆ ಬಿಲ್ವಪತ್ರೆಯನ್ನು ಭಕ್ತಿಯಿಂದ ಈಶ್ವರನಿಗೆ  ಸಮರ್ಪಿಸಿದರೆ ಮೂರು ಜನ್ಮದ ಪಾಪಗಳು ಪರಿಹಾರವಾಗುತ್ತವೆ  ಎಂದು  ಹೇಳಲಾಗುತ್ತದೆ.

ಬಿಲ್ವಪತ್ರೆಯಲ್ಲಿ ಶೇ.70 ರಷ್ಟು ಶಿವತತ್ತ್ವವಿರುತ್ತದೆ.  ಬಿಲ್ವಪತ್ರೆಯನ್ನು ಪೂಜೆಯಲ್ಲಿ ಉಪಯೋಗಿಸುವುದರಿಂದ ಇದರಲ್ಲಿರುವ ದೇವತೆಗಳ ಸತ್ವವು ಹೆಚ್ಚಾಗುತ್ತದೆ ಹಾಗೂ  ವಾತಾವರಣದಲ್ಲಿರುವ ರಜ-ತಮಗಳ  ಪರಿಣಾಮವು  ಪ್ರತಿಯೊಂದು ವಸ್ತುವಿನ ಮೇಲೆ ಆಗುತ್ತದೆ ಎಂದು  ಎನ್ನಲಾಗುತ್ತದೆ.

ಬಹುಕಾಲದವರೆಗೂ ದಂಪತಿಗಳಿಗೆ ಸಂತಾನ  ಪ್ರಾಪ್ತಿಯಾಗಿರುವುದಿಲ್ಲ. 48 ದಿನಗಳ ಕಾಲ ಬಿಲ್ವಪತ್ರೆಯ  ಮರಕ್ಕೆ ಪೂಜೆ ಮಾಡಿ ಆ ಪತ್ರೆಯನ್ನು ಸೇವಿಸಿದರೆ ಮಕ್ಕಳ ಫಲ  ದೊರೆಕುವುದೆಂದು ಧರ್ಮ ಗ್ರಂಥಗಳಲ್ಲಿ  ಹೇಳಲಾಗಿರುತ್ತದೆ. ಈ  ಗ್ರಂಥದಲ್ಲಿರುವ ಉಲ್ಲೇಖದ ಬಗ್ಗೆ ತಿಳಿದ ದಂಪತಿಗಳು ಪೂಜೆ  ಸಲ್ಲಿಸುತ್ತಾರೆ. ಇದರಂತೆ ದಂಪತಿಗಳಿಗೆ ಮಗುವಿನ  ಜನ್ಮವಾಗುತ್ತದೆ.

ಇದರಂತೆ ಬಿಲ್ವಪತ್ರೆ ಮರಕ್ಕೆ ಮತ್ತೊಂದು ಹಿನ್ನೆಲೆಯಿದ್ದು,  ಬಿಲ್ವಪತ್ರೆ ಮರವು ಶ್ರೀ ಮಹಾಲಕ್ಷ್ಮಿಯ ಬಲದ ಕೈಕಮಲದಿಂದ  ಹುಟ್ಟಿದೆ ಎಂದು ಪುರಾಣಗಳು ಹೇಳುತ್ತವೆ. ಈ ಮರಕ್ಕೆ ಶ್ರೀವೃಕ್ಷ  ಎಂತಲೂ  ಕರೆಯಲಾಗುತ್ತದೆ. ಹೋಮ ಮಾಡುವಾಗ ಬಿಲ್ವಪತ್ರೆ  ಮರದ ಕಡ್ಡಿಗಳನ್ನು ಉಪಯೋಗಿಸದರೆ ಶುಭಫಲಗಳು  ಲಭಿಸುತ್ತವೆ ಎಂದು ಹೇಳಲಾಗುತ್ತದೆ.

ಇನ್ನು ವೈಜ್ಞಾನಿಕವಾಗಿಯೂ ಬಿಲ್ವಪತ್ರೆಯನ್ನು ಆರೋಗ್ಯಕರ  ಮರವೆಂದು ಹೇಳಲಾಗುತ್ತದೆ. ಬಿಲ್ವಪತ್ರೆ ಮರದ ಎಲೆಗಳನ್ನು  ಕ್ರಮವಾಗಿ ಸೇವಿಸಿದರೆ ಮಧುಮೇಹವನ್ನು  ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಲ್ಲದೆ.  ಮಾನವ  ದೇಹದಲ್ಲಿರುವ ಸಾಕಷ್ಟು ಖಾಯಿಲೆಗಳಿಗೆ ಮದ್ದು  ಬಿಲ್ವಪತ್ರೆಯಲ್ಲಿದೆ ಎಂದು ಹೇಳಲಾಗುತ್ತದೆ. ಇನ್ನು ಬಿಲ್ವಪತ್ರೆ  ಮರ ಹಣ್ಣುಗಳ ಸೇವನೆ ಮಾಡುವುದರಿಂದ ಅಜೀರ್ಣ, ತಿಸಾರ,  ರಕ್ತದಿಂದ ಉಂಟಾಗುವ  ಹಲವು ತೊಂದರೆಗಳು, ಪಿತ್ತ, ವಾತ  ಹಾಗೂ ಕಫ ನಿವಾರಣೆಯಾಗುತ್ತದೆ ಎಂದು  ಪರಿಗಣಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಶಿವನ ಪ್ರಿಯವಾದ ಬಿಲ್ವಪತ್ರೆಯ ಮರದ ಪ್ರತಿಯೊಂದು ಭಾಗವೂ  ಮಾನವನಿಗೆ ವರದಾನವೇ ಎಂದು ಹೇಳಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com