ಲಂಡನ್‌ನ ಥೇಮ್ಸ್ ನದಿಯ ದಡದ ಮೇಲೆ ಬಸವಣ್ಣ ಪ್ರತಿಮೆಗೆ ಒಪ್ಪಿಗೆ...

ಲಂಡನ್‌ನ ಥೇಮ್ಸ್ ನದಿಯ ದಡದ ಮೇಲೆ ಬಸವಣ್ಣ ಪ್ರತಿಮೆಗೆ ಒಪ್ಪಿಗೆ...
Updated on: 

ಲಂಡನ್: ಲಂಡನ್‌ನ ಥೇಮ್ಸ್ ನದಿಯ ದಡದ ಮೇಲೆ 12ನೇ ಶತಮಾನದ ವಚನಕಾರ ಬಸವಣ್ಣನ ಪುತ್ಥಳಿ ಅನಾವರಣಕ್ಕೆ ಬ್ರಿಟನ್ ಸರ್ಕಾರ ಹಸಿರು ನಿಶಾನೆ ತೋರಿದೆ.
  ಬಸವಣ್ಣನ ಪುತ್ಥಳಿ ಪ್ರತಿಷ್ಠಾಪನೆಗಾಗಿ ಶ್ರಮ ವಹಿಸಿರುವ ಗುಲ್ಬರ್ಗದ ನೀರಜ್ ಪಾಟೀಲ್ ಅವರು ಬ್ರಿಟನ್‌ನ ಪ್ರವಾಸೋದ್ಯಮ ಸಚಿವ ಜಾನ್ ಪೆನ್ರೋಸ್ ಅವರಿಗೆ ಈ ಸಂಬಂಧ ಅಭಿನಂದನೆ ಸಲ್ಲಿಸಿದ್ದಾರೆ.
  ಎರಡು ಕಡೆ ಮುಖ ಮಾಡಿರುವ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಗುರಿ ತಮ್ಮದು ಎಂದು ನೀರಜ್ ಪಾಟೀಲ್ ಹೇಳಿಕೊಂಡಿದ್ದಾರೆ.
  ಒಂದು ಮುಖ ವೆಸ್ಟ್‌ಮಿನಿಸ್ಟರ್ ಅರಮನೆ ಕಡೆಗೆ ಇದ್ದರೆ, ಮತ್ತೊಂದು ವೌವ್‌ಹಾಲ್ ಪ್ಲೆಶರ್ ಗಾರ್ಡನ್ ಕಡೆ ಇರಲಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಬಸವಣ್ಣನ ಗುಣಗಾನ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com