ದುಶಾಂಬೆ: ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸೌದಿ ಅರೇಬಿಯಾದ ನೂತನ ಉದ್ಯೋಗ ನೀತಿಯಿಂದಾಗಿ 3 ಲಕ್ಷ ಭಾರತೀಯರು ಉದ್ಯೋಗ ಕಳೆದು ಕೊಳ್ಳುವ ಆತಂಕ ವ್ಯಕ್ತವಾಗಿದೆ. ಈ ಸಂಬಂಧ ಸೌದಿ ಅರೇಬಿಯಾದಲ್ಲೇ ಇರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಇ. ಅಹಮದ್ ಅವರು ಅಲ್ಲಿನ ಸರ್ಕಾರಕ್ಕೆ ಭಾರತದ ಕಳವಳ ವ್ಯಕ್ತಪಡಿಸಿದ್ದಾರೆ.