ನಕ್ಸಲ್ ದಾಳಿ: ಮೃತ ಯೋಧರ ಕುಟುಂಬಕ್ಕೆ 38 ಲಕ್ಷ ಪರಿಹಾರ

ಗಾಯಗೊಂಡ 15 ಮಂದಿ ಯೋಧರಿಗೆ 65 ಸಾವಿರ ರೂಪಾಯಿ ಪರಿಹಾರ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ರಾಯಪುರ: ಚತ್ತಿಸ್‌ಘಡ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ, ನೆನ್ನೆ ಸಂಜೆ ಮಾವೋವಾದಿಗಳು ಅಡಿಗಿರುವ ಸುದ್ದಿ ತಿಳಿದ ಕೇಂದ್ರ ಮೀಸಲು ಪಡೆ ಯೋಧರು, ಅವರನ್ನು ಸುತ್ತುವರೆದರು. ಇದನ್ನು ಕಂಡ ಮಾವೋವಾದಿಗಳು ಯೋಧರ ವಿರುದ್ಧ ಮನಬಂದಂತೆ ಗುಂಡಿನ ಸುರಿಮಳೆಗೈದರು.

ಈ ಸಂದರ್ಭದಲ್ಲಿ ಸಿಆರ್‌ಪಿಎಫ್ ಯೋಧರು ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಮಾವೋವಾದಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಪಡೆಯ 14 ಮಂದಿ ಯೋಧರು ಸಾವನ್ನಪ್ಪಿದರು.

ಈ ಸಂದರ್ಭ ಮಾವೋವಾದಿಗಳ ಗುಂಡಿಗೆ ಬಲಿಯಾದ 14 ಮಂದಿ ಮೃತ ಸಿಆರ್‌ಪಿಎಫ್ ಯೋಧರ ಪ್ರತಿ ಕುಟುಂಬಕ್ಕೆ 38 ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.

ಅಲ್ಲದೆ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ 15 ಮಂದಿ ಯೋಧರಿಗೆ ರೂ. 65 ಸಾವಿರ  ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.

ನಕ್ಸಲಿಸಂ ಇಡೀ ದೇಶಕ್ಕೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಸ್ವೀಕರಿಸಿ ಭಯೋತ್ಪಾದನೆಯ ವಿರುದ್ಧ ಗೆಲುವು ಸಾಧಿಸಲಿದ್ದೇವೆ ಎಂದು ರಾಜನಾಥ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com