ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿರುವ ಪಾಕ್..!

ಗಡಿಯಲ್ಲಿ ಪಾಕಿಸ್ತಾನವು ಭಾರತಕ್ಕೆ ಸೇರಿದ ಸುಮಾರು 78 ಸಾವಿರ ಸ್ಕ್ವೇರ್ ಕಿ.ಮೀ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ..
ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು (ಸಂಗ್ರಹ ಚಿತ್ರ)
ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು (ಸಂಗ್ರಹ ಚಿತ್ರ)

ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನವು ಭಾರತಕ್ಕೆ ಸೇರಿದ ಸುಮಾರು 78 ಸಾವಿರ ಸ್ಕ್ವೇರ್ ಕಿ.ಮೀ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಲೋಕಸಭಾ ಕಲಾಪದಲ್ಲಿ ಇಂದು ಸದನಕ್ಕೆ ಮಾಹಿತಿ ನೀಡಿ ಮಾತನಾಡಿದ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, 'ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಬಳಿಕ ಅಂದರೆ 1948ರಿಂದ ಈವರೆಗೂ ಪಾಕಿಸ್ತಾನವು ಭಾರತಕ್ಕೆ ಸೇರಿದ ಸುಮಾರು 78 ಸಾವಿರ ಸ್ಕ್ವೇರ್ ಕಿ.ಮೀ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ' ಎಂದು ಹೇಳಿದರು.

'1963ರ ಚೀನಾ-ಪಾಕಿಸ್ತಾನ ಗಡಿ ರೇಖೆ ಕಾಯ್ದೆ ನೀತಿಗಳನ್ನು ಪಾಕಿಸ್ತಾನ ಮುರಿದಿದ್ದು, ಕಾಲಕ್ರಮೇಣ ಭಾರತಕ್ಕೆ ಸೇರಿದ ಗಡಿಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ಬಂದಿದೆ. ಕಾಶ್ಮೀರದಿಂದ ಚೀನಾವರೆಗಿನ ಭಾರತದ ಗಡಿಯಲ್ಲಿ ಸುಮಾರು 5, 180 ಸ್ಕ್ವೇರ್ ಕಿ.ಮೀ ಭೂಮಿಯನ್ನು ಪಾಕಿಸ್ತಾನ ಅತಿಕ್ರಮಿಸಿಕೊಂಡಿದೆ. ಇದೇ ಪರಿಸ್ಥಿತಿ ಇಂಡೋ-ಚೀನಾ ಗಡಿಯಲ್ಲಿ ಮುಂದುವರೆದಿದ್ದು, ಎಲ್‌ಎಸಿಯಲ್ಲಿಯೂ ಭಾರತಕ್ಕೆ ಸೇರಿದ ಗಡಿಯನ್ನು ಚೀನಾ ಅತಿಕ್ರಮಿಸಿಕೊಂಡಿದೆ. ಆದರೆ ಬಾಂಗ್ಲಾದೇಶ, ಮಯನ್ಮಾರ್ ಮತ್ತು ಭೂತಾನ್ ಗಡಿಗಳಲ್ಲಿ ಈ ಸಮಸ್ಯೆ ಕಂಡುಬಂದಿಲ್ಲ.

ಆದರೆ ನಮ್ಮ ನಾಡಿನ ಭೂಮಿಯ ರಕ್ಷಣೆಗೆ ನಾವು ಬದ್ಧವಾಗಿದ್ದು, ಭಾರತದ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡುವ ಕುರಿತು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ರಿಜಿಜು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com