ಲಂಡನ್: ಇರಾಕ್ ಮತ್ತು ಸಿರಿಯಾದಲ್ಲಿ ರಕ್ತಪಾತ ನಡೆಸುತ್ತಿರುವ ಇಸಿಸ್‌ಗೆ ಮಹತ್ವದ ಹಿನ್ನೆಡೆಯಾಗಿದೆ. ಇಸಿಸ್ ಮುಖಂಡ ಅಬುಬಕ್ಕರ್ ಅಲ್-ಬಾಗ್ದಾದಿ ಪತ್ನಿ ಹಾಗೂ ಪುತ್ರಿಯನ್ನು ಲೆಬನಾನ್ ಸೇನೆ ಬಂಧಿಸಿದೆ.
ಸಿರಿಯಾ ಗಡಿ ದಾಟಿ ಲೆಬನಾನ್‌ಗೆ ಪ್ರವೇಶಿಸುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರ ರಾಷ್ಟ್ರೀಯತೆ ಅಥವಾ ಹೆಸರನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ, ಬಂಧಿತರಲ್ಲಿ ಒಬ್ಬರು ಬಾಗ್ದಾದಿ ಪತ್ನಿ ಎಂದು ಹೇಳಿದೆ.
ವಿದೇಶಿ ಗುಪ್ತಚರ ಇಲಾಖೆಯಗಳ ನೆರವಿನಿಂದ ಬಾಗ್ದಾದಿ ಪತ್ನಿ ಮತ್ತು ಪುತ್ರಿಯನ್ನು ಬಂಧಿಸಲಾಗಿದೆ ಎಂದು ಲೆಬನಾನಿ ಪತ್ರಿಕೆಯೊಂದು ವರದಿ ಮಾಡಿದೆ. ಇವರನ್ನು ಉತ್ತರ ಲೆಬನಾನ್‌ನಲ್ಲಿ ಬಂಧಿಸಲಾಗಿದೆ. ಇಸಿಸ್ ಉಗ್ರರು ನೂರಾರು ಉಗ್ರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇವರಲ್ಲಿ ಲೆಬನಾನ್‌ನ ಪ್ರಜೆಗಳೂ ಇದ್ದಾರೆ. ಬಾಗ್ದಾದಿ ಪತ್ನಿ, ಪುತ್ರಿಯ ಬಂಧನದಿಂದ ಆಕೆಯನ್ನು ಮುಂದಿಟ್ಟುಕೊಂಡು ಲೆಬನಾನ್ ಸರ್ಕಾರ ಇಸಿಸ್ ವಶದಲ್ಲಿರುವ ವಿದೇಶಿಯರ ಬಿಡುಗಡೆಗೆ ಒತ್ತಡ ಹೇರಬಹುದಾಗಿದೆ.
Advertisement