ಮಾವೋವಾದಿಗಳಿಂದ ಗಣಿ ಇಲಾಖೆಯ 4 ಅಧಿಕಾರಿಗಳು ಅಪಹರಣ

ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಮಾವೋವಾದಿಗಳು ಗುರುವಾರ ಅಪಹರಣ...
ಮಾವೋವಾದಿಗಳಿಂದ ಗಣಿ ಇಲಾಖೆಯ 4 ಅಧಿಕಾರಿಗಳು ಅಪಹರಣ
Updated on

ಜಾರ್ಖಂಡ್: ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಮಾವೋವಾದಿಗಳು ಗುರುವಾರ ಅಪಹರಣ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್‌ನ ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ನಿನ್ನೆ ಸಂಜೆ 4 ಗಂಟೆಗೆ ಮಾವೋವಾದಿಗಳು ಅಪಹರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಚೈಬಾಸ ಪ್ರದೇಶದಲ್ಲಿರುವ ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳನ್ನು ಮಾವೋವಾದಿಗಳು ನಿನ್ನೆ ಸಂಜೆ 4 ಗಂಟೆಗೆ ಅಪಹರಿಸಿದ್ದಾರೆ. ಗಣಿ ಪ್ರದೇಶಕ್ಕೆ ಭೇಟಿ ನೀಡಬೇಕಾದರೆ ಅಧಿಕಾರಿಗಳು ಪೊಲೀಸ್ ಠಾಣೆಗೆ ಯಾವುದೇ ಮಾಹಿತಿ ನೀಡದೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಅಧಿಕಾರಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದು, ಪೂರ್ಣ ಭದ್ರತೆಯೊಂದಿಗೆ ತಪಾಸಣೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com