ಪಾಕ್ ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ದೇಶಗಳ ಮೇಲೆ ಕಣ್ಗಾವಲು

ದೇಶ ರಕ್ಷಣಾ ವಿಚಾರದಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ...
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್

ನವದೆಹಲಿ: ಪಾಕಿಸ್ತಾನಕ್ಕೆ ನಿರಂತಂರವಾಗಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿರುವ ದೇಶಗಳ ಮೇಲೆ ಭಾರತ ನಿಗಾ ವಹಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ತಿಳಿಸಿದ್ದಾರೆ.

ಸಂಸತ್ತಿನ ಕಲಾಪದಲ್ಲಿಂದು ಸಂಸದರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರ ಪರಿಕ್ಕಾರ್ ಲಿಖಿತ ದಾಖಲೆಯ ಮೂಲಕ ಉತ್ತರ ನೀಡಿದರು. ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಹಲವಾರು ದೇಶಗಳು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ.

ಅಲ್ಲದೆ ಈ ಶಸ್ತ್ರಾಸ್ತ್ರಗಳು ಅನೇಕ ವಿಧ್ವಂಸಕ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ. ಈ ಮಧ್ಯೆ ಪಾಕಿಸ್ತಾನಕ್ಕೆ ಯಾವ ಯಾವ ದೇಶಗಳು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬುದರ ಕುರಿತು ಭಾರತ ತೀವ್ರವಾಗಿ ಗಮನಿಸುತ್ತಿದೆ. ದೇಶ ರಕ್ಷಣಾ ವಿಚಾರದಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪರಿಕ್ಕಾರ್ ಸ್ಪಷ್ಪನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಡನಾಡಿದ ಪರಿಕ್ಕಾರ್, ಭಾರತ ಚೀನಾ ಗಡಿಭಾಗದ ವಿವಾದದ ಕುರಿತು ಗಂಭೀರ ಚಿಂತನೆ ಕೈಗೊಂಡಿರುವುದಾಗಿಯೂ ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com