ಸಂಸ್ಕೃತ ಕಡ್ಡಾಯ, ಆದ್ರೆ ಈ ವರ್ಷ ಅಲ್ಲ: ಕೇಂದ್ರ

ಜರ್ಮನಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ...
ಸಂಸ್ಕೃತ
ಸಂಸ್ಕೃತ

ನವದೆಹಲಿ: ಜರ್ಮನಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ತಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿದೆ.

ಅಲ್ಲದೆ, ಪ್ರಸಕ್ತ ಸಾಲಿನ ಸಂಸ್ಕೃತ ಪರೀಕ್ಷೆಗಳಿಂದ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿನಾಯ್ತಿಯನ್ನೂ ನೀಡಿದೆ. ಸರ್ಕಾರದ ಈ ನಿಲುವನ್ನು ನ್ಯಾಯಾಲಯ ಸ್ವಾಗತಿಸಿದೆ.

ನ್ಯಾ. ಅನಿಲ್ ಆರ್. ದಾವೆ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಶುಕ್ರವಾರ ಹಾಜರಾದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಸರ್ಕಾರದ ಈ 2 ಮಹತ್ವದ ನಿರ್ಧಾರಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳ ಬಗ್ಗೆ ನ್ಯಾಯಾಲಯ ಹೊಂದಿರುವ ಕಳಕಳಿಯ ಅನುಸಾರವಾಗಿ ಕೇಂದ್ರೀಯ ವಿವಿ ಪರೀಕ್ಷೆಗಳಲ್ಲಿ ಈ ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರ ಹೊಸ ನಿರ್ಧಾರಗಳಿಂದಾಗಿ ದೇಶದಲ್ಲಿರುವ ಸಾವಿರ ಕೇಂದ್ರೀಯ ವಿವಿ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. ಈ ನಿರ್ಣಯದಿಂದಾಗಿ, ಇನ್ನು ಮುಂದೆ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಯಲೇಬೇಕಾದ ಒತ್ತಡದಿಂದ ಸಾವಿರಾರು ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com