ನಂದಮೂರಿ ಜಾನಕಿರಾಮ್ ಅಂತ್ಯಕ್ರಿಯೆ ಪೂರ್ಣ
ಹೈದರಾಬಾದ್: ಶನಿವಾರ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಹೈದರಾಬಾದ್‌ನ ಹೊರವಲಯದಲ್ಲಿರುವ ಮೊಯಿನಾಬಾದ್‌ನಲ್ಲಿರುವ ಎನ್‌ಟಿಆರ್ ಕುಟುಂಬದ ಒಡೆತನದ ಫಾರಂಹೌಸ್‌ನಲ್ಲಿ ಜಾನಕಿ ರಾಮ್ ಅವರ ಮೃತದೇಹದ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಆಂಧ್ರಪ್ರದೇಶದ ಪ್ರಮುಖ ರಾಜಕಾರಣಿಗಳು, ಚಿತ್ರತಾರೆಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎನ್‌ಟಿಆರ್ ಅವರ ಮಗ ಹರಿಕೃಷ್ಣ ಅವರ ಪುತ್ರ ಮತ್ತು ಜೂ.ಎನ್‌ಟಿಆರ್ ಅವರ ಸಹೋದರರಾಗಿರುವ ಜಾನಕಿರಾಮ್ ಅವರು ನಿನ್ನೆ ಆಂಧ್ರಪ್ರದೇಶದ ನಲ್ಗೊಂಡ ಬಳಿ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಸ್ಕಾರ್ಪಿಯೋ ವಾಹನದಲ್ಲಿ ಚಲಿಸುತ್ತಿದ್ದ ಜಾನಕಿರಾಮ್ ಅವರು ಟ್ರಾಕ್ಟರ್‌ಗೆ ಗುದ್ದಿದ್ದರು. ಈ ವೇಳೆ ಅವರ ಹೃದಯ ಮತ್ತು ತಲೆಗೆ ಬಲವಾದ ಪೆಟ್ಟುಬಿದ್ದಿತ್ತು.
ಕೂಡಲೇ ಅವರನ್ನು ಕೋದಾಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ, ಹೃದಯಕ್ಕೆ ಬಿದ್ದಿದ್ದ ಬಲವಾದ ಪೆಟ್ಟಿನಿಂದಾಗಿ ರಕ್ತ ಪರಿಚಲನೆಯಾಗದೇ ಅವರು ನಿಧನರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ