ಗೀತೆ 'ರಾಷ್ಟ್ರೀಯ ಗ್ರಂಥ'ವಾಗಲಿ

ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಘೋಷಣೆ ಮಾಡಿ. ವಿದೇಶಾಂಗ ಸಚಿವೆ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನವದೆಹಲಿ: ಭಗವದ್ಗೀತೆಯನ್ನು 'ರಾಷ್ಟ್ರೀಯ ಗ್ರಂಥ' ಎಂದು ಘೋಷಣೆ ಮಾಡಿ. ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್ ಕೇಂದ್ರ  ಸರ್ಕಾರಕ್ಕೆ ಹೀಗೊಂದು ಕೋರಿಕೆ ಸಲ್ಲಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಔಪಚಾರಿಕವಾಗಿ ಘೋಷಣೆ ಮಾಡುವುದು ಮಾತ್ರ ಬಾಕಿಯಿದೆ. ನಾನು  ಸಂಸತ್‌ನಲ್ಲಿ ಎದ್ದು ನಿಂತು, ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸಿ ಎಂದು ಕೇಳಿಕೊಂಡಿದ್ದೆ ಎಂದಿದ್ದಾರೆ ಸುಷ್ಮಾ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಭಗವದ್ಗೀತೆ ಸಾರುವು ಅದರ ತಿರುಳಿನಲ್ಲಿದೆಯೇ ಹೊರತು ತೋರ್ಪಡಿಕೆಯಲ್ಲಿಲ್ಲ  ಎಂದಿದೆ. ತೃಣಮೂಲ ಕಾಂಗ್ರೆಸ್ ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನವೇ 'ಪವಿತ್ರ ಗ್ರಂಥ' ಎಂದು ಮಮತಾ ಬ್ಯಾನರ್ಜಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com