'ಸುಖೋಯಿ' ವಿಮಾನ ದುರಸ್ತಿ, ನಿರ್ವಹಣೆಗೆ ರು. 2,263 ಕೋಟಿ ಖರ್ಚು!

ಸುಖೋಯಿ ವಿಮಾನ
ಸುಖೋಯಿ ವಿಮಾನ

ನವದೆಹಲಿ: ಭಾರತೀಯ ವಾಯು ಪಡೆ(ಐಎಎಫ್)ಯ ಸುಖೋಯಿ ವಿಮಾನದ ದುರಸ್ತಿ ಹಾಗೂ ನಿರ್ವಹಣೆಗೆ ಸರ್ಕಾರ ಬರೋಬ್ಬರಿ 2,263 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮಂಗಳವಾರ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರತೀಯ ವಾಯು ಪಡೆಯ ಅತ್ಯಂತ ದೊಡ್ಡ ವಿಮಾನ ಸುಖೋಯಿನ ದುರಸ್ತಿ ಹಾಗೂ ನಿರ್ವಹಣೆಗಾಗಿ 2,263 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ ಎಂದು ಪಾರಿಕ್ಕರ್ ರಾಜ್ಯಸಭೆಗೆ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ.

2011-12 ಸಾಲಿನಲ್ಲಿ ಸುಮಾರು 551.35 ಕೋಟಿ ರುಪಾಯಿ, 2012-13ರಲ್ಲಿ ಬರೋಬ್ಬರಿ ರು. 877.84 ಕೋಟಿ ವೆಚ್ಚ ಮಾಡಲಾಗಿದ್ದು, ಪ್ರಸಕ್ತ ವರ್ಷ 834.76 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸುಖೋಯಿ ವಿಮಾನ ಇತ್ತೀಚೆಗಷ್ಟೇ ಪುಣೆ ಬಳಿ ಅಪ್ಪಳಿಸಿತ್ತು ಎಸ್‌ಯು-30 ವಿಮಾನದ ದುರಸ್ಥಿ ಹಾಗೂ ನಿರ್ವಹಣೆಯನ್ನು ಮೂಲ ಸಾಮಗ್ರಿ ತಯಾರಿಕ(ಓಇಎಂ) ಸಂಸ್ಥೆ ನಿರ್ವಹಿಸುತ್ತಿತ್ತು.

ಸುಖೋಯಿ ದುರಂತ ಕಾರಣ ಖಚಿತಪಡಿಸಿಕೊಳ್ಳಲು ಸ್ಥಳೀಯ ನ್ಯಾಯಾಲಯವೊಂದು ತನಿಖೆಗೆ ಆದೇಶಿಸಿತ್ತು ಎಂದು ಪಾರಿಕ್ಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com