57 ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ!

ಒಂದು ಧರ್ಮ ಬಿಟ್ಟು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದು ಸರ್ವೇ ಸಾಮಾನ್ಯ. ಅದರಂತೆ ಆಗ್ರಾದ ಮಧುನಗರ್...
ರಾಷ್ಟ್ರೀಯ ಸ್ವಯಂ ಸೇವಕ ಸಂಘ
ರಾಷ್ಟ್ರೀಯ ಸ್ವಯಂ ಸೇವಕ ಸಂಘ

ನವದೆಹಲಿ: ಒಂದು ಧರ್ಮ ಬಿಟ್ಟು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದು ಸರ್ವೇ ಸಾಮಾನ್ಯ. ಅದರಂತೆ ಆಗ್ರಾದ ಮಧುನಗರ್ ಸ್ಲಮ್ ನಿವಾಸಿಗಳು 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ(ಆರ್‌ಎಸ್‌ಎಸ್) ಹೇಳಿದೆ.

ಬಜರಂಗದಳ ಮತ್ತು ಧರ್ಮ ಜಾಗರಣ ಸಮನ್ವಯ ವಿಭಾಗ್ ಸಂಘಟನೆಗಳು 'ಪೂರ್ವಿಕೋಂ ಕೀ ಘರ್ ವಾಪ್ಸಿ'(ಪೂರ್ವಿಕರ ಮನೆಗೆ ವಾಪಸ್) ಕಾರ್ಯಕ್ರಮದಲ್ಲಿ ಮುಸ್ಲಿಂರನ್ನು ಮತ್ತೊಮ್ಮೆ ಹಿಂದೂ ಧರ್ಮದ ತೆಕ್ಕೆಗೆ ತಂದಿದ್ದಾರೆ.

ಈ ಮತಾಂತರ ಸಮಾರಂಭದಲ್ಲಿ 57 ಮುಸ್ಲಿಂ ಕುಟುಂಬಗಳ 200 ಸದಸ್ಯರು ಹಿಂದೂ ದೇವತೆಗಳ ವಿಗ್ರಹಗಳ ಪಾದಪೂಜೆ ಮಾಡುತ್ತಿರುವಂತೆಯೆ ವೈದಿಕ ಮಂತ್ರಗಳ ಉಚ್ಛರಣೆ ಮಾಡಲಾಯಿತು. ಈ ಮೂಲಕ, ಇವರು ಹಿಂದೂ ಧರ್ಮವನ್ನಪ್ಪಿಕೊಂಡಿದ್ದಾರೆ. ಹೊಸದಾಗಿ ಮತಾಂತರಗೊಂಡ ವ್ಯಕ್ತಿಗಳಿಗೆ ಹೊಸ ಹೆಸರು ನೀಡಲಾಗಿದೆ.

ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯಲ್ಲಿ ಈ ಹೊಸ ಹೆಸರನ್ನು ಸೇರ್ಪಡಿಸಲಾಗುವುದು ಎಂದು ಹಿಂದೂ ಸಂಘಟನೆಗಳು ಹೇಳಿವೆ. ಅಲ್ಲದೆ, ಮಧುನಗರ್ ಸ್ಲಮ್‌ನಲ್ಲಿರುವ ಇವರ ಮನೆಗಳ ಮೇಲೆ ಭಗವಾಧ್ವಜಗಳನ್ನು ಹಾರಿಸಲಾಗುತ್ತಿದೆ.

ಯಾವುದೇ ಧರ್ಮದ ಜವರು ತಮಗೆ ಬೇಕಾದ ಧರ್ಮವ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರಬೇಕು. ಇದರಲ್ಲಿ ತಪ್ಪೇನಿಲ್ಲ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ವಿನಯ್ ಕಟಿಯಾರ್ ಸಮರ್ಥಿಸಿಕೊಂಡಿದ್ದಾರೆ. ಆದರೆ, ಮುಂದಿನ ಐದು ವರ್ಷಗಳಲ್ಲಿ ಇಂಥ ಮತಾಂತರ ಕಾರ್ಯಕ್ಕಾಗಿ ಈಗಾಗಲೇ ವ್ಯವಸ್ಥಿತ ಯೋಜನೆ ಜಾರಿಯಲ್ಲಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ತಾರಿಕ್ ಅನ್ವರ್ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com