

ಬರೇಲಿ: ವಿದ್ಯೆ ದಾನ ಮಾಡಬೇಕಾದ ಶಿಕ್ಷಕನೇ ವಿದ್ಯಾರ್ಥಿಯನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ಉತ್ತರಪ್ರದೇಶದ ಬರದರಿ ಎಂಬಲ್ಲಿ ನಡೆದಿದೆ.
18 ವರ್ಷದ ವಿದ್ಯಾರ್ಥಿಯನ್ನು ಶಿಕ್ಷಕನು ಮತ್ತು ಆತನ ಸಹಚರರು ಕತ್ತು ಹಿಸುಕಿ ಕೊಂದಿದ್ದು, ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಬರದರಿ ಎಂಬಲ್ಲಿ ನಿನ್ನೆ ತರಬೇತಿ ಶಿಕ್ಷಕ ಮತ್ತು ಆತನ ಸಹಚರರು ವಿದ್ಯಾರ್ಥಿಯನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಬನ್ ಸಿಂಗ್ ಅಲಿಯಾಸ್ ಚಂದನ್ ಮೃತ ದುರ್ದೈವಿ. ಚಂದನ್‌ನನ್ನು ಉಸಿರುಗಟ್ಟಿಸಿ ಹತ್ಯೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಶಿಕ್ಷಕ ನಯೀಮ್ ಅಖ್ತರ್ ಸೇರಿದಂತೆ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿದ್ದಾರೆ.