ಪ್ರಯಾಣಿಕರ ಸುರಕ್ಷಾ ನಿಯಮ ಪಾಲನೆ ಕಡ್ಡಾಯ

ಪ್ರಯಾಣಿಕರ ಹಿತದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ...
ಎಂ. ಏನ್. ರೆಡ್ಡಿ (ಸಾಂದರ್ಭಿಕ ಚಿತ್ರ)
ಎಂ. ಏನ್. ರೆಡ್ಡಿ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಪ್ರಯಾಣಿಕರ ಹಿತದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ ಅಡಿ ಬರುವ ಎಲ್ಲ 25 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಚಾಲಕರಿಗೆ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಸೂಚಿಸಿದ್ದಾರೆ.

ದೆಹಲಿ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸುರಕ್ಷಾ ಕ್ರಮವಾಗಿ ರಾಜ್ಯದ ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆ ನಡೆಸಿದ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು, ಆಟೋ ಚಾಲಕಕ ಜತೆ ಸಭೆ ಬಳಿಕ ಮಾತನಾಡಿದ ಅವರು, ಸಾರಿಗೆ ಇಲಾಖೆಯಿಂದ ಪರ್ಮಿಟ್ ನೀಡುವಾಗ ಕೆಲವು ನಿಯಮಗಳನ್ನು ಸೂಚಿಸಿರುತ್ತದೆ. ಆ ನಿಯಮಗಳನ್ನು ಟ್ಯಾಕ್ಸಿ, ಕ್ಯಾಬ್ ಚಾಲಕರು ಪಾಲಿಸುತ್ತಿಲ್ಲ ಎಂದರು.

ಚಾಲಕನನ್ನು ನೇಮಿಸಿಕೊಳ್ಳುವ ಮೊದಲು ಆತನ ಪೂರ್ವಾಪರವನ್ನು ಪರಿಶೀಲಿಸಬೇಕಿದೆ. ಎಲ್ಲಿಂದಲೋ ಬಂದವರಿಗೆ ಕೆಲಸ ಕೊಟ್ಟು, ನಂತರ ಅದರಿಂದಾಗುವ ಅನಾಹುತ ತಪ್ಪಿಸಬೇಕಿದೆ. ಇದು ಸಂಸ್ಥೆ ಮಾಲೀಕರ ಜವಾಬ್ದಾರಿಯೂ ಹೌದು.

ಅವರು ಚಾಲಕನ್ನು ನೇಮಿಸಿ ಕೊಳ್ಳುವ ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಪೂರ್ವಾಪರ ವಿಚಾರಿಸಬೇಕು. ಕಚೇರಿ ಸ್ಥಳಾಂತರಿಸುವ ಮುನ್ನ ಪೊಲೀಸ್, ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದೆ ಎಂದು ಅವರು ತಿಳಿಸಿದರು.

ಇನ್ನು ಚಾಲಕರನ್ನು ಕಂಪನಿಯಿಂದ ಕಂಪನಿಗೆ ಬದಲಾಯಿಸುವುದು ದಲ್ಲಾಳಿಗಳು. ಈ ವೇಳೆ ಅವರು ಚಾಲಕರ ದಾರಿ ತಪ್ಪಿಸುತ್ತಾರೆ. ಇದು ಸರಿಯಲ್ಲ, ಅವರೇ ಖುದ್ದು, ನಿಯಮ ಪಾಲಿಸುವಂತೆ ಚಾಲಕರಿಗೆ ಸೂಚಿಸಿ ತಾವೂ ಪಾಲಿಸಬೇಕು.

ಸೂಚಿಸಿರುವ ಬಣ್ಣಗಳನ್ನು ಕ್ಯಾಬ್, ಟ್ಯಾಕ್ಸಿ ಹೊಂದಿರಬೇಕು, ಸಮವಸ್ತ್ರ ಧರಿಸಬೇಕು, ಚಾಲನಾ ಪರವಾನಗಿಯನ್ನು ವಾಹನದಲ್ಲಿ ಪ್ರದರ್ಶಿಸುವುದು, ಜಿಪಿಎಸ್ ಅಳವಡಿಸುವುದು ಸೇರಿದಂತೆ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾದ 25 ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದರು.

ಕ್ಯಾಬ್ ಚಾಲಕರಿಗೆ ನಿಯಮ

  • ಸ್ಥಳೀಯ ಸಾರಿಗೆ ಇಲಾಖೆಗೆ ಮಾಹಿತಿ ನೀಡದೆ ಕ್ಯಾಬ್‌ನ ಪ್ರಧಾನ ಕಚೇರಿ ಸ್ಥಳಾಂತರಿಸುವಂತಿಲ್ಲ.
  • ವಾಹನದಲ್ಲಿ ಅಸಲಿ ಪರವಾನಗಿ ಪತ್ರ ಹಾಕುವುದು
  • 24 ಗಂಟೆಯೂ ಪ್ರಯಾಣಿಕರಿಗೆ ಸೇವೆ.
  • ಪ್ರತಿ ಕ್ಯಾಬ್ ಟೆಲಿಫೋನ್/ರೇಡಿಯೋ ಕಂಪನಿಯ ನಿಯಂತ್ರಣಾ ಕೊಠಡಿಯ ಅಧೀನದಲ್ಲಿರಬೇಕು.
  • ಬೆಂಗಳೂರು ನಗರದ 25ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಬೇಕು
  • ಇಲಾಖೆಯಿಂದ ತಪಾಸಣೆಗೊಳಪಟ್ಟ ಎಲೆಕ್ಟ್ರಾನಿಕ್ ಡಿಜಿಟಲ್ ಮೀಟರ್ ಅಳವಡಿಸಿರಬೇಕು.
  • ಚಾಲಕ ಸೇರಿ 5 ಜನಕ್ಕಿಂತ ಹೆಚ್ಚು ಮಂದಿ ಸಂಚರಿಸಬಾರದು.
  • ವಾಹನಗಳು ಹಳದಿ ಬಣ್ಣ ಹೊಂದಿರಬೇಕು.
  • ಸಿಟಿ ಟ್ಯಾಕ್ಸಿ ಎಂಬ ಫಲಕವನ್ನು ವಾಹನದ ಮೇಲೆ, ಮುಂಭಾಗ, ಹಿಂಭಾಗದಲ್ಲಿ ಹಾಕಬೇಕು
  • ವಾಹನ 6 ವರ್ಷ ಪೂರೈಸಿದ ನಂತರ ಪರವಾನಗಿ ಅಸಿಂಧು ಎಂದು ಪರಿಗಣಿಸಲಾಗುವುದು
  • ವಾಹನಗಳು ಸಾರಿಗೆ ಪ್ರಾದೇಶಿಕ ಇಲಾಖೆ ನಿಯಂತ್ರಣಾ ಕೊಠಡಿ ಸಂಪರ್ಕದಲ್ಲಿರಬೇಕು
  • ಗ್ರಾಹಕರನ್ನು ಕಾಯಿಸಬಾರದು.
  • ಗ್ರಾಹಕರನ್ನು ಕರೆದೊಯ್ಯುವಾಗ ಮಾತ್ರ ಮೀಟರ್ ಚಾಲನೆ ಮಾಡಬೇಕು.
  • ಸಾರಿಗೆ ಇಲಾಖೆ ನಿಗದಿಪಡಿಸಿದ ದರ ಪಡೆಯಬೇಕು, ಹೆಚ್ಚು ದರ ಪಡೆಯುವಂತಿಲ್ಲ.
  • ಕಿಟಕಿಯ ಗಾಜು ಟಿಂಟೆಡ್ ಇರಬಾರದು
  • ಚಾಲಕ ಸಮವಸ್ತ್ರ ಧರಿಸಿರಬೇಕು.
  • ಚಾಲಕ ಚಾಲನಾ ಪರವಾನಗಿ, ವಾಹನದ ದಾಖಲಾತಿ ಹೊಂದಿರಬೇಕು.
  • ಲಗೇಜ್ ಇಡಲು ವಾಹನದಲ್ಲಿ ಸೂಕ್ತ ಸ್ಥಳಾವಕಾಶ ಹೊಂದಿರಬೇಕು.
  • ವಾಹನದ ತಾಂತ್ರಿಕ ದೋಷಗಳಿಗೆ ಸಾರಿಗೆ ಇಲಾಖೆಯನ್ನು ಹೊಣೆ ಮಾಡಬಾರದು
  • ಗ್ರಾಹಕರು ನಕಲಿ ಕರೆ ಮಾಡಿ, ಪ್ರಯಾಣ ಬೆಳೆಸದಿದ್ದರೆ ಇಲಾಖೆ ಹೊಣೆಯಲ್ಲ.
  • ಚಾಲಕ 10ನೇ ತರಗತಿ ತೇರ್ಗಡೆಯಾಗಿರಬೇಕು.
  • 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರಬೇಕು (ಹೊರ ರಾಜ್ಯ.ದವರಾಗಿದ್ದರೆ)
  • ಪ್ರಮುಖವಾಗಿ ಕನ್ನಡ, ಇಂಗ್ಲಿಷ್ ಭಾಷೆ ತಿಳಿದಿರಬೇಕು.
  • ಚಾಲಕನಿಗೆ ಲಘು ವಾಹನಗಳ ಚಾಲನೆಯಲ್ಲಿ ಕನಿಷ್ಟ 2 ವರ್ಷ ಅನುಭವ ಇರಬೇಕು.
ಯೂಬರ್ ಪ್ರತಿಕ್ರಿಯೆ ಇಲ್ಲ
-ರಾಧಾಕೃಷ್ಣ ಹೊಳ್ಳ,
ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಪ್ರವಾಸಿ ವಾಹನಗಳ ಸಂಘ

ಎಸ್. ಜಯರಾಂ,
ಆಟೋ ಸೇನೆ ಸಂಘ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com