ಮುಜಾಫರ್‌ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮೂವತ್ತು ವರ್ಷದ ಮಹಿಳೆಯ ಮೇಲೆ ಆರು ಜನ ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ...
ಮುಜಾಫರ್‌ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮುಜಾಫರ್‌ನಗರ: ಮೂವತ್ತು ವರ್ಷದ ಮಹಿಳೆಯ ಮೇಲೆ ಆರು ಜನ ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಇಲ್ಲಿನ ಕಡ್ಲಿ ಹಳ್ಳಿಯಲ್ಲಿ ನಡೆದಿದೆ.

ಬೇರೆ ಊರಿಗೆ ತೆರಳಿದ್ದ ಮಹಿಳೆ ತನ್ನ ಸೋದರಮಾವನೊಂದಿಗೆ ಹಳ್ಳಿಗೆ ವಾಪಾಸ್ಸಾಗಬೇಕಾದರೆ, ದಾರಿಯಲ್ಲಿ ಅಡ್ಡಗಟ್ಟಿದ 6 ಕಿಡಿಗೇಡಿಗಳು, ಸೋದರ ಮಾವನಿಗೆ ಬೆದರಿಸಿ, ಆಕೆಯನ್ನು ಕಬ್ಬಿನ ತೋಟನಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಅಲ್ಲದೆ, ಸೋದರ ಮಾವನ ಬಳಿಯಿದ್ದ 35000 ಸಾವಿರ ಹಣವನ್ನು ಲೂಟಿ ಮಾಡಿ, ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com