ಆಗ್ರಾ ಮತಾಂತರ ಬಳಿಕ ಮತ್ತೊಂದು ಮತಾಂತರಕ್ಕೆ ವೇದಿಕೆ ಸಜ್ಜು

ಆಗ್ರಾದಲ್ಲಿ ನಡೆದ ಮತಾಂತರದ ದೃಶ್ಯ(ಸಂಗ್ರಹ ಚಿತ್ರ)
ಆಗ್ರಾದಲ್ಲಿ ನಡೆದ ಮತಾಂತರದ ದೃಶ್ಯ(ಸಂಗ್ರಹ ಚಿತ್ರ)

ಅಲಿಗಢ(ಉತ್ತರಪ್ರದೇಶ): ಆಗ್ರಾದಲ್ಲಿ ನಡೆದ ಮತಾಂತರ ಬಿಸಿ ಲೋಕಸಭೆಯಲ್ಲಿ ಪ್ರಜ್ವಲಿಸುತ್ತಿದ್ದು, ಇದೀಗ ಮತ್ತೊಂದು ಮತಾಂತರಕ್ಕೆ ವೇದಿಕೆ ಸಜ್ಜಾಗಿದೆ.

ಡಿಸೆಂಬರ್ 25ರಂದು ಸಾಮೂಹಿಕ ಮತಾಂತರಕ್ಕೆ ಯೋಜನೆ ಹಮ್ಮಿಕೊಂಡಿರುವುದಾಗಿ ಹಿಂದೂ ಜಾಗರಣ ಸಮಿತಿ ಘೋಷಿಸಿದೆ. ಈ ನಿರ್ಧಾರವನ್ನು ಅಲಿಗಢ ಕ್ಷೇತ್ರದ ಬಿಜೆಪಿ ಸಂಸದ ಸತೀಶ್ ಗೌತಮ್ ಅವರು ಸ್ವಾಗತಿಸಿರುವುದು ಅಚ್ಚರಿ ಮೂಡಿಸಿದೆ.

ಕ್ರಿಸ್‌ಮಸ್ ಹಬ್ಬದಂದು ಮಹೇಶ್ವರಿ ಇಂಟರ್ ಕಾಲೇಜಿನಲ್ಲಿ ಭವ್ಯ ಸಮಾರಂಭದಲ್ಲಿ ಹಿಂದೂ ಧರ್ಮವನ್ನು ತೊರೆದಿದ್ದ ಸಾಕಷ್ಟು ಸಂಖ್ಯೆಯ ಜನರನ್ನು ಮತ್ತೆ ಹಿಂದುತ್ವಕ್ಕೆ ಮರು ಮತಾಂತರಗೊಳಿಸಲಾಗುವುದು ಎಂದು ಹಿಂದೂ ಜಾಗರಣ ಸಮಿತಿಯ ರಾಜೇಶ್ವರ್ ಸಿಂಗ್ ಕಳೆದ ಸಂಜೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಮೊದಲು ದಾರಿ ತಪ್ಪಿ ಹಾಗೂ ಪ್ರಲೋಭನಕ್ಕೆ ಒಳಗಾಗಿ ಹಿಂದೂ ಧರ್ಮವನ್ನು ತೊರೆದಿದ್ದವರು ಮತ್ತೆ ಸ್ವಧರ್ಮಕ್ಕೆ ಮರಳುತ್ತಿರುವುದಾಗಿದ್ದು, ಇದು ಮತಾಂತರವಲ್ಲ ಎಂದು ರಾಜೇಶ್ವರ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಪಶ್ಚಿಮ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿಯೂ ಸಾಕಷ್ಟು ಜನರು ಮರು ಮತಾಂತರಗೊಳ್ಳಲಿದ್ದಾರೆ ಎಂದು ಬಹಿರಂಗಗೊಳಿಸಿದ್ದಾರೆ.

ಜನರು ಸ್ವಇಚ್ಛೆಯಿಂದ ಹಾಗೂ ಶಾಂತಿಯುತವಾಗಿ ಹಿಂದುತ್ವವನ್ನು ಸ್ವೀಕರಿಸಲು ಸಿದ್ಧರಿದ್ದರೇ ಅವರು ತಮ್ಮ ಆಯ್ಕೆ ಮಾಡಿಕೊಳ್ಳಲು ತಮ್ಮ ಹಕ್ಕುಗಳ ಅಡಿಯಲ್ಲಿ ಸ್ವತಂತ್ರರು ಎಂದು ಗೌತಮ್‌ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com