ರಷ್ಯಾ, ಜತೆಗೆ ರಕ್ಷಣೆ ಭಾಷ್ಯ

ಪರಮಾಣು ಶಕ್ತಿ ಸಹಕಾರದಲ್ಲಿ ಭಾರತ-ರಷ್ಯಾ ಹೊಸ ಹೆಜ್ಜೆ. 2035ರೊಳಗೆ ಭಾರತದಲ್ಲಿ...
ರಷ್ಯಾ ಅಧ್ಯಕ್ಷ ವ್ಲಾಡಿ ಮಿರು ಪುಟಿನ್ ಮತ್ತು  ಪ್ರಧಾನಿ ನರೇಂದ್ರ ಮೋದಿ
ರಷ್ಯಾ ಅಧ್ಯಕ್ಷ ವ್ಲಾಡಿ ಮಿರು ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪರಮಾಣು ಶಕ್ತಿ ಸಹಕಾರದಲ್ಲಿ ಭಾರತ-ರಷ್ಯಾ ಹೊಸ ಹೆಜ್ಜೆ. 2035ರೊಳಗೆ ಭಾರತದಲ್ಲಿ ರಷ್ಯಾದಿಂದ 12 ಪರಮಾಣು ರಿಯಾಕ್ಟರ್‌ಗಳ ನಿರ್ಮಾಣ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಧ್ಯೇಯ ವಾಕ್ಯದ ಅಡಿಯಲ್ಲಿ ರಷ್ಯಾ 400 ಹೆಲಿಕಾಫ್ಟರ್‌ಗಳ ನಿರ್ಮಾಣ. ಅದೂ ಪ್ರತಿ ವರ್ಷಕ್ಕೆ!

-ಇವು ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿ ಮಿರು ಪುಟಿನ್ ಮಾತುಕತೆ ಪ್ರಮುಖಾಂಶಗಳು.

ಎರಡೂ ರಾಷ್ಟ್ರಗಳ ನಡುವೆ ಶೀತಲ ಸಮರದ ಬಳಿಕ ರಕ್ಷಣಾ ವಲಯದಲ್ಲಿ ಭಾರತಕ್ಕೆ ಹಲವು ಆಯ್ಕೆಗಳಿದ್ದರೂ ರಷ್ಯಾ ಜತೆಗಿನ ಸಂಬಂಧವನ್ನು ಉಳಿಸಿಕೊಂಡು ಹೋಗಲು ನಿರ್ಧರಿಸಿರುವ ಭಾರತ, ಎಂದಿಗೂ ರಷ್ಯಾವೇ ನಮ್ಮ ರಕ್ಷಣಾ ಪೂರೈಕೆದಾರ ಎಂದಿದೆ.

400 ಕಾಪ್ಟರ್ ತಯಾರಿಕೆ
ಒಪ್ಪಂದದ ಅನ್ವಯ ಭಾರತದಲ್ಲಿ 400 ರಷ್ಯಾ ನಿರ್ಮಿತ 2 ಎಂಜಿನ್‌ಗಳುಳ್ಳ ಕಾಪ್ಟರ್‌ಗಳ ನಿರ್ಮಾಣ ಆರಂಭವಾಗಲಿದೆ. ಇದಲ್ಲದೆ ರಷ್ಯಾ ನಿರ್ಮಿತ ಬಹೂಪಯೋಗಿ ಕಾಪ್ಟರ್‌ಗಳೂ ಪೂರೈಕೆಯಾಗಲಿವೆ. ಪರ್ವತ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗೆ ಅನುಕೂಲತೆಗಳನ್ನು ಹೊಂದಿವೆ.

ಶಕ್ತಿಯ ಕಂಬ
ನವದೆಹಲಿಯ ಹೈದ್ರಾರಾಬಾದ್‌ಹೌಸ್‌ನಲ್ಲಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಹಾಗೂ ಪುಟಿನ್, ಮೇಕ್ ಇನ್ ಇಂಡಿಯಾ ಘೋಷಣೆಯಡಿ ಒಪ್ಪಂದಗಳ ಜಾರಿಗೆ ನಿರ್ಧರಿಸಿದರು. ತದನಂತರ ಮಾತನಾಡಿದ ಪ್ರಧಾನಿ ಮೋದಿ, ರಷ್ಯಾವು 'ಭಾರತದ ಶಕ್ತಿಯ ಸ್ತಂಭ' ಎಂದು ಬಣ್ಣಿಸಿದರಲ್ಲದೆ, ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮಾತಿನಲ್ಲಿ ವಿವರಿಸಲು ಅಸಾಧ್ಯ ಎಂದರು.

20 ಒಪ್ಪಂದಗಳಿಗೆ ಸಹಿ
ಅಣುಶಕ್ತಿ ಸಹಕಾರ ವೃದ್ಧಿ ನಿಟ್ಟಿನಲ್ಲಿ ಭಾರತದಲ್ಲಿ 12 ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸಲು ರಷ್ಯಾ ನಿರ್ಧರಿಸಿದೆ. ಆಧುನಿಕ ಕಾಫ್ಟರ್ ನಿರ್ಮಾಣ, ಸೇನಾ ಸಾಮಗ್ರಿಗಳಿಗೆ ರಷ್ಯಾದ ಬಿಡಿಭಾಗ ತಯಾರಿಸಲು ಫ್ಯಾಕ್ಟರಿಗಳ ಸ್ಥಾಪನೆ ಸೇರಿದಂತೆ 20 ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿದವು. ರಷ್ಯಾ ನಿರ್ಮಿತ ಕೂಡಂಕುಳಂ ಅಣುಸ್ಥಾವರದಲ್ಲಿ ಸಾವಿರ ಮೆಗಾ ವ್ಯಾಟ್‌ನ ರಿಯಾಕ್ಟರ್ ಕಾರ್ಯನಿರ್ವಹಿಸುತ್ತಿದೆ. ಇನ್ನೂ 6 ರಿಯಾಕ್ಟರ್‌ಗಳನ್ನು ಇಲ್ಲಿ ಸ್ಥಾಪಿಸಲಾಗುತ್ತದೆ. ಬಳಿಕ ಮತ್ತೆ 5 ರಿಯಾಕ್ಟರ್‌ಗಳನ್ನು ನಿರ್ಮಿಸುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com