ಅಮೆರಿಕದ ರಕ್ಷಣಾ ವ್ಯವಸ್ಥೆ ಭೇದಿಸುವ ಕ್ಷಿಪಣಿ!

ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯವುಳ್ಳ ಹೈಪರ್‌ಸಾನಿಕ್ ಕ್ಷಿಪಣಿಯಂಥ ಸಾಧನವೊಂದನ್ನು..
ಹೈಪರ್‌ಸಾನಿಕ್ ಕ್ಷಿಪಣಿ
ಹೈಪರ್‌ಸಾನಿಕ್ ಕ್ಷಿಪಣಿ

ಬೀಜಿಂಗ್:  ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯವುಳ್ಳ ಹೈಪರ್‌ಸಾನಿಕ್ ಕ್ಷಿಪಣಿಯಂಥ ಸಾಧನವೊಂದನ್ನು ಚೀನಾ ಪರೀಕ್ಷಿಸುತ್ತಿದೆ.


ಡಬ್ಲ್ಯುಯು -14 ಎನ್ನುವ ಹೈಪರ್‌ಸಾನಿಕ್ ಗ್ಲೈಡ್ ಎನ್ನುವ ಸಾಧನವನ್ನು ಖಂಡಾಂತರ ಉತ್‌ಕ್ಷೇಪಕ ಕ್ಷಿಪಣಿ (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್) ಮೂಲಕ ಉಡ್ಡಯನ ಮಾಡಲಾಗುತ್ತದೆ. ಭೂ ವಾತಾವರಣದ ಮೇಲ್ಮೈ ನಲ್ಲಿ ಇದು ಕ್ಷಿಪಣಿಯಿಂದ ಬೇರ್ಪಟ್ಟು ಭೂಮಿಗೆ ಹಿಂತಿರುಗುತ್ತದೆ. ಈ ವೇಳೆ ಈ ಸಾಧನದ ವೇಗ ಶಬ್ದಕ್ಕಿಂತ 10 ಪಟ್ಟು ಹೆಚ್ಚಿರುತ್ತದೆ. ಗಂಟೆಗೆ 12, 800 ಕಿ.ಮೀ ವೇಗದಲ್ಲಿ ಭೂಮಿಯತ್ತ ನುಗ್ಗುತ್ತದೆ. ಇಷ್ಟು ವೇಗ ಈಗಿರುವ ಯಾವುದೇ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆ ಭೇದಿಸಲು ಸಾಕು ಎಂದು ರಷ್ಯಾದ ಸುದ್ದಿ ಸಂಸ್ಥೆ ಹೇಳಿದೆ.

ಈ ರೀತಿಯ ಸಾಧನದ ಪರೀಕ್ಷೆಯನ್ನು ಮೊದಲು ನಿರಾಕರಿಸಿತ್ತಾ ಬಂದಿದ್ದರೂ ಚೀನಾ ಈಗ ಅದನ್ನು  ಒಪ್ಪಿಕೊಂಡಿದೆ. ಆದರೆ, ಈ ಸಾಧನದ ಗುರಿ ವಿಶ್ವದ ಯಾವುದೇ ದೇಶ ಅಲ್ಲ  ಎಂದಿದೆ. ಆದರೆ, ಏಷ್ಯಾ ಫೆಸಿಫಿಕ್ ಸಮುದ್ರದಲ್ಲಿ ನೌಕಾ  ಬಲ ಹೆಚ್ಚಿಸುತ್ತಿರುವ ಅಮೆರಿಕವೇ ಚೀನಾದ ಗುರಿ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ರಕ್ಷಣಾ ವಿಶ್ಲೇಷಕರ ಪ್ರಕಾರ, ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹೇರುತ್ತಿರುವ ನಿರ್ಬಂಧದಿಂದಾಗಿ ಬೀಜಿಂಗ್-ಮಾಸ್ಕೋ ನಡುವೆ  ಸೇನಾ ಸಾಧನಗಳಿಗೆ ಸಂಬಂಧಿಸಿದ ಮಹತ್ವದ ಒಪ್ಪಂದಗಳಾಗುತ್ತಿವೆ. ರಷ್ಯಾದ ಟ್ಯಾಕ್ಟಿಕಲ್ ಮಿಸೈಲ್ ಕಂಪನಿ ಈ ಹಿಂದೆಯೇ ಸೂಪರ್ ಸಾನಿಕ್ ತಂತ್ರಜ್ಞಾನ ಕುರಿತು ಸಂಶೋಧಮೆ ನಡೆಸುತ್ತಿತ್ತು. ಆದರೆ, 1980ರಲ್ಲಿ ಅದನ್ನು ಕೈ ಬಿಡಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com