
ಸಿಯೋಲ್: ಭಾರತದಲ್ಲಿ ಇಂಥಹ ಘಟನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ? ಇಲ್ಲಿ ದೊಡ್ಡವರ ಮಕ್ಕಳು ನಡೆದದ್ದೇ ದಾರಿ. ಆದರೆ, ದಕ್ಷಿಣ ಕೋರಿಯಾದಲ್ಲಿ ಪುತ್ರಿಯ ಮೂರ್ಖವರ್ತನೆಗೆ ಕೊರಿಯನ್ ಏರ್ನ ಮುಖ್ಯಸ್ಥ ಚೋ ಯಾಂಗ್ ಹೋ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.
ಇತ್ತೀಚೆಗೆ ಅಮೆರಿಕದಿಂದ ಕೊರಿಯಾಗೆ ತೆರಳುತ್ತಿದ್ದ ವಿಮಾನದಲ್ಲಿ ಮೆಕಡಾಮಿಯಾ ನಟ್ (ಒಂದು ರೀತಿಯ ಕೆಡ್ಲೆಯಂಥ ಬೀಜ) ಅನ್ನು ಪ್ಲೇಟ್ನ ಬದಲು ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ನೀಡಿದ್ದಕ್ಕಾಗಿ ಕಂಪನಿಯ ಉಪಾಧ್ಯಕ್ಷೆಯೂ ಆಗಿದ್ದ ಚೋ ಹ್ಯುಯಾನ್ ಹಾ ಸಿಬ್ಬಂದಿಯನ್ನು ಎಲ್ಲರ ಮುಂದೆ ಕೆಟ್ಟದಾಗಿ ನಡೆಸಿಕೊಂಡಿದ್ದಳು. ಜತೆಗೆ, ವಿಮಾನದಿಂದ ಆ ಸಿಬ್ಬಂದಿಯನ್ನು ಇಳಿಸಿದ್ದಳು.
ಇದರಿಂದ ವಿಮಾನ ಪ್ರಯಾಣ 11 ನಿಮಿಷ ತಡವಾಗಿತ್ತು. ಇದು ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಂತೆ ಚೋ ಹ್ಯುಯಾನ್ ಹಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈಗ ಅವರ ತಂದೆ ಟೀವಿ ವಾಹಿನ ಮುಂದೆ ತಲೆಬಗ್ಗಿಸಿ ಕ್ಷಮೆ ಕೋರಿದ್ದಾರೆ. ಮಕ್ಕಳು ತಪ್ಪು ಮಾಡಿದಾಗ ದಕ್ಷಿಣ ಕೊರಿಯಾದಲ್ಲಿ ಪೋಷಕರು ಈ ರೀತಿ ಕ್ಷಮೆ ಕೋರುವ ಸಂಪ್ರದಾಯವಿದೆ. ಕೊರಿಯನ್ ಏರ್ ಚೋ ಹ್ಯುಯಾನ್ ಕುಟುಂಬದ ಒಡೆತನ ಸಂಸ್ಥೆಯಾಗಿದೆ.
Advertisement